ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwamitra Hegde: ಹಿರಿಯ ಪತ್ರಕರ್ತ ವಿಶ್ವಾಮಿತ್ರ ಹೆಗಡೆ ನಿಧನ

Vishwamitra Hegde: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಭತ್ತಗುತ್ತಿಗೆಯವರಾದ ಹಿರಿಯ ವಿಶ್ವಾಮಿತ್ರ ಹೆಗಡೆ ಅವರು ಹುಬ್ಬಳ್ಳಿಯಲ್ಲಿ ನೆಲೆಸಿದ್ದರು. ದೂರದರ್ಶನ, ವಿಶ್ವವಾಣಿ, ಕನ್ನಡಪ್ರಭ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ವರದಿಗಾರರಾಗಿ, ಬ್ಯೂರೋ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ.

ಹಿರಿಯ ಪತ್ರಕರ್ತ ವಿಶ್ವಾಮಿತ್ರ ಹೆಗಡೆ ನಿಧನ

Profile Prabhakara R Mar 26, 2025 5:10 PM

ಹುಬ್ಬಳ್ಳಿ: ಹಿರಿಯ ಪತ್ರಕರ್ತ ವಿಶ್ವಾಮಿತ್ರ ವಿಶ್ವೇಶ್ವರ ಹೆಗಡೆ (63) (Vishwamitra Hegde) ಅವರು ಹೃದಯಾಘಾತದಿಂದ ಬುಧವಾರ ನಿಧನರಾದರು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಭತ್ತಗುತ್ತಿಗೆಯವರಾದ ವಿಶ್ವಾಮಿತ್ರ ಹೆಗಡೆ ಅವರು ಹುಬ್ಬಳ್ಳಿಯಲ್ಲಿ ನೆಲೆಸಿದ್ದರು. ದೂರದರ್ಶನ, ವಿಶ್ವವಾಣಿ, ಕನ್ನಡಪ್ರಭ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ವರದಿಗಾರರಾಗಿ ಇವರು ಕಾರ್ಯನಿರ್ವಹಿಸಿದ್ದರು. ಅಲ್ಲದೇ ಹಲವು ಪತ್ರಿಕೆ, ವಾಹಿನಿಗಳಿಗೆ ಹುಬ್ಬಳ್ಳಿ ಬ್ಯೂರೋ ಮುಖ್ಯಸ್ಥರಾಗಿ, ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡಿದ್ದರು.

ಮೃತರಿಗೆ ಪತ್ನಿ ಸೇರಿ ಅಪಾರ ಬಂಧುಗಳಿದ್ದಾರೆ. ತಮ್ಮದೇ ಆದ ಸ್ಪಷ್ಟ ನಿಲುವಿನಿಂದ ಜನಮಾನಸದಲ್ಲಿ ಬೇರೂರಿದ್ದ ವಿಶ್ವಾಮಿತ್ರ ಹೆಗಡೆ ಅವರ ನಿಧನಕ್ಕೆ ಪತ್ರಕರ್ತ ಮಿತ್ರರು, ಗಣ್ಯರು ಹಾಗೂ ಬಂಧುಗಳು ಸಂತಾಪ ಸೂಚಿಸಿದ್ದಾರೆ. ಅವರ ಮೃತ ಶರೀರವನ್ನು ಹುಟ್ಟೂರು ಶಿರಸಿಗೆ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನೂ ಓದಿ | Janamejaya Umarji Column: ನೋವನ್ನು ನೆನಪಿಸುವ ಗಾಯದ ಕಲೆಗಳು ಇರಬೇಕು