Summer Fashion 2026: ಜೆನ್ ಜಿ ಸಮ್ಮರ್ ಸ್ಟೈಲಿಂಗ್‌ಗೆ ಇಲ್ಲಿವೆ 5 ಟಿಪ್ಸ್
Gen Z Summer Styling: ನೀವು ಮಿಲೆನಿಯಲ್ ಆದರೂ ಸೀಸನ್‌ಗೆ ತಕ್ಕಂತೆ ಜೆನ್ ಜಿ ಸೀಸನ್ ಸ್ಟೈಲಿಂಗ್ ಮಾಡಬೇಕೇ? ಹಾಗಾದಲ್ಲಿ ಇಲ್ಲಿವೆ 5 ಸಿಂಪಲ್ ಟಿಪ್ಸ್. ಜಸ್ಟ್ ಫಾಲೋ ಮಾಡಿ ನೋಡಿ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಚಿತ್ರಗಳು: ಮಧುಮಿತಾ, ನಟಿ -
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಜೆನ್ ಜಿ ಸೀಸನ್ ಸ್ಟೈಲಿಂಗ್ ಬದಲಾಗಿದೆ. ಹೌದು, ಸಮ್ಮರ್ ಸೀಸನ್‌ಗೆ (Summer Fashion 2026) ತಕ್ಕಂತೆ ಸ್ಟೈಲಿಂಗ್‌ನಲ್ಲಿ ಒಂದಿಷ್ಟು ಬದಲಾವಣೆಗಳಾಗಿದ್ದು, ಈ ಕುರಿತಂತೆ ಸ್ಟೈಲಿಸ್ಟ್‌ಗಳು ಒಂದಿಷ್ಟು ವಿವರ ನೀಡಿದ್ದಾರೆ. ಜತೆಗೆ ಜೆನ್ ಜಿ ಸೀಸನ್ ಸ್ಟೈಲಿಂಗ್‌ಗೆ ಸಾಥ್ ನೀಡುವ ಟಿಪ್ಸ್ ಕೂಡ ನೀಡಿದ್ದಾರೆ.
ಸಮ್ಮರ್ ಸೀಸನ್‌ಗೆ ತಕ್ಕಂತೆ ಉಡುಗೆಯ ಆಯ್ಕೆ
ಜೆನ್ ಜಿ ಸಮ್ಮರ್ ಉಡುಗೆಗಳು ಈಗಾಗಲೇ ಫ್ಯಾಷನ್‌ಲೋಕದಲ್ಲಿ ಹಂಗಾಮ ಎಬ್ಬಿಸಿವೆ. ಬಿಂದಾಸ್ ಲುಕ್ ನೀಡುವ ಇಂತಹ ಉಡುಪುಗಳ ಆಯ್ಕೆ ಮುಖ್ಯ. ಹಾಗಾಗಿ ನ್ಯೂ ಅರೈವಲ್ ಕೆಟಗರಿಯ ಜೆನ್ ಜಿ ಫ್ಯಾಷನ್‌ವೇರ್‌ಗಳ ಆಯ್ಕೆ ಮಾಡಿ.
ಮಿಕ್ಸ್ ಮ್ಯಾಚ್ ಅಟೈರ್ ಚೂಸ್ ಮಾಡಿ
ಈಗಾಗಲೇ ಟ್ರೆಂಡಿಯಾಗಿರುವ ಬ್ಯಾಗಿ ಪ್ಯಾಂಟ್, ಬೆಲ್ ಬಾಟಮ್ ಪ್ಯಾಂಟ್‌ಗಳನ್ನು ಚೂಸ್ ಮಾಡಿ. ಅದಕ್ಕೆ ಮ್ಯಾಚ್ ಮಾಡುವಂತಹ ಶಾರ್ಟ್ ಟಾಪ್, ಕ್ರಾಪ್ ಟಾಪ್ ಹಾಗೂ ಕಟೌಟ್ ಟಾಪ್, ಹಾಲ್ಟರ್ ನೆಕ್ ಟಾಪ್‌ಗಳನ್ನು ಮಿಕ್ಸ್ ಮ್ಯಾಚ್ ಮಾಡಿ.
ಹೇರ್ ಆಕ್ಸೆಸರೀಸ್ ಧರಿಸಿ
ಸಮ್ಮರ್‌ನಲ್ಲಿ ಚಾಲ್ತಿಯಲ್ಲಿರುವಂತಹ ವೈಬ್ರೆಂಟ್ ಕ್ಲಿಪ್ಸ್, ಹೇರ್ ಆಕ್ಸೆಸರೀಸ್‌ಗಳನ್ನು ಧರಿಸಿ. ಇವು ಕೂದಲ ವಿನ್ಯಾಸಕ್ಕೆ ಸಾಥ್ ನೀಡುತ್ತವೆ. ಸೌಂದರ್ಯವನ್ನು ಹೆಚ್ಚಿಸುತ್ತವೆ.
ಸ್ಟೈಲಿಂಗ್ ಸೂಕ್ತವಾಗಿರಲಿ
ಜೆನ್ ಜಿ ಸ್ಟೈಲಿಂಗ್ ಕೊಂಚ ವಿಭಿನ್ನವಾಗಿರುತ್ತದೆ. ಹಾಗಾಗಿ ಮಾಡರ್ನ್ ಲುಕ್‌ಗೆ ಸಾಥ್ ನೀಡುತ್ತದೆ. ಇದಕ್ಕೆ ಸೂಕ್ತವಾದ ಮೇಕೋವರ್ ಹಾಗೂ ಕಂಪ್ಲೀಟ್ ಲುಕ್ ನೀಡುವಂತಹ ಮೇಕಪ್ ಕೂಡ ಮ್ಯಾಚ್ ಆಗಬೇಕು.
Star Saree Fashion 2026: ಟ್ರೆಂಡಿಯಾಯ್ತು ಸಾನ್ಯಾ ಉಟ್ಟ 3ಡಿ ಫ್ಲೋರಲ್ ಲೇಸ್ ಸೀರೆ
ಫುಟ್‌ವೇರ್ ಆಯ್ಕೆ ಸರಿಯಾಗಿರಲಿ
ಜೆನ್ ಜಿ ಫ್ಯಾಷನ್‌ನಲ್ಲಿ ಫುಟ್‌ವೇರ್‌ಗಳು ಸೂಕ್ತವಾಗಿ ಸೆಲೆಕ್ಟ್ ಮಾಡಬೇಕು. ಇದೀಗ ಟ್ರೆಂಡಿಯಾಗಿರುವ ವೆಡ್ಜೆಸ್, ಫ್ಲಿಪ್ ಫ್ಲಾಪ್, ಕ್ರಾಕ್ಸ್ ಮ್ಯಾಚ್ ಆಗುವಂತೆ ಧರಿಸಬಹುದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)