ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಯೂಟ್ಯೂಬರ್‌ ಮುಕಳೆಪ್ಪ ಮೇಲೆ ಲವ್‌ ಜಿಹಾದ್‌ ದೂರು, ಪತ್ನಿ ಪೊಲೀಸ್‌ ವಶಕ್ಕೆ

Love Jihad: ಮುಕಳೆಪ್ಪ ತಪ್ಪು ಮಾಹಿತಿ ನೀಡಿದ್ದಾನೆ. ಮೊದಲಿಗೆ ತಾನು ಮುಸ್ಲಿಂ ಎನ್ನುವ ಸಂಗತಿ ಮುಚ್ಚಿಟ್ಟಿದ್ದ. ಇವರಿಬ್ಬರ ಮದುವೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಹೀಗಿದ್ದರೂ ಮಗಳ ತಲೆಕೆಡಿಸಿ ಮುಕಳೆಪ್ಪ ಬಲವಂತವಾಗಿ ಮದುವೆ ಆಗಿದ್ದಾನೆ ಎಂದು ಯುವತಿ ಪೋಷಕರು ಆರೋಪಿಸಿದ್ದರು.

ಯೂಟ್ಯೂಬರ್‌ ಮುಕಳೆಪ್ಪ ಮೇಲೆ ಲವ್‌ ಜಿಹಾದ್‌ ದೂರು, ಪತ್ನಿ ಪೊಲೀಸ್‌ ವಶಕ್ಕೆ

-

ಹರೀಶ್‌ ಕೇರ ಹರೀಶ್‌ ಕೇರ Sep 23, 2025 7:25 AM

ಧಾರವಾಡ: ಯೂಟ್ಯೂಬರ್‌ ಮುಕಳೆಪ್ಪ (Youtuber Mukaleppa) ಎಂಬವರ ಮೇಲೆ ಲವ್‌ ಜಿಹಾದ್‌ (Love jihad) ದೂರು ಕೇಳಿ ಬಂದಿದ್ದು, ಅವರ ಹೆಂಡತಿ ಗಾಯತ್ರಿ ಎಂಬಾಕೆಯನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ತಮ್ಮ ವಶಕ್ಕೆ ಪಡೆದು ಧಾರವಾಡದ (Dharawad) ಶಕ್ತಿ ಸದನ ಕೇಂದ್ರದಲ್ಲಿರಿಸಿದ್ದಾರೆ. ಮುಕಳೆಪ್ಪ ಲವ್ ಜಿಹಾದ್ ಮಾಡಿ, ಖೊಟ್ಟಿ ದಾಖಲೆ ನೀಡಿ ಹಿಂದೂ ಯುವತಿಯನ್ನು ಮದುವೆಯಾಗಿದ್ದಾನೆ. ಅಲ್ಲದೇ ಗಾಯತ್ರಿಯ ತಲೆ ಕೆಡಿಸಿ, ಆಕೆಯ ಮನೆಯವರನ್ನೂ ನಂಬಿಸಿ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಸ್ವತಃ ಗಾಯತ್ರಿ ಪಾಲಕರೇ ಹಳೇ ಹುಬ್ಬಳ್ಳಿ (hubballi) ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಈ ದೂರಿನ ಆಧಾರದ ಮೇಲೆ ಸದ್ಯ ಗಾಯತ್ರಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಆಕೆಗೆ ನಾಳೆಯವರೆಗೂ ಇರಲು ಧಾರವಾಡದ ಶಕ್ತಿ ಸದನ ಕೇಂದ್ರದಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಸೋಮವಾರ ರಾತ್ರಿಯೇ ಗಾಯತ್ರಿಯನ್ನು ಪೊಲೀಸರು ಧಾರವಾಡದ ಶಕ್ತಿ ಸದನ ಕೇಂದ್ರಕ್ಕೆ ಕರೆತಂದಿದ್ದಾರೆ. ಅಲ್ಲೇ ಆಕೆಗೆ ಇರಲು ಅವಕಾಶ ಮಾಡಿಕೊಟ್ಟು ಮಂಗಳವಾರ ನ್ಯಾಯಾಲಯದ ಮುಂದೆ ಪೊಲೀಸರು ಆಕೆಯನ್ನು ಹಾಜರುಪಡಿಸಲಿದ್ದಾರೆ.

ಕಾಮಿಡಿ ವೀಡಿಯೋಗಳ ಮೂಲಕವೇ ಹೆಸರು ಮಾಡಿದ್ದ ಮುಕಳೆಪ್ಪನ ವಿರುದ್ಧ ಇದೀಗ ಗಂಭೀರ ಆರೋಪ ಕೇಳಿ ಬರುವುದರ ಜೊತೆಗೆ ಆತನ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ. ಭಾನುವಾರ ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆಗೆ ಹಿಂದೂಪರ ಸಂಘಟನೆಗಳ ಬೆಂಬಲದಿಂದ ಗಾಯತ್ರಿ ಪೋಷಕರು ದೂರು ದಾಖಲಿಸಿದ್ದರು. ಮುಕಳೆಪ್ಪ ತಪ್ಪು ಮಾಹಿತಿ ನೀಡಿದ್ದಾನೆ. ಮೊದಲಿಗೆ ತಾನು ಮುಸ್ಲಿಂ ಎನ್ನುವ ಸಂಗತಿ ಮುಚ್ಚಿಟ್ಟಿದ್ದ. ಗಾಯತ್ರಿ ತನ್ನ ತಂಗಿಯ ರೀತಿ ಎಂದು ಹೇಳಿ ನಂಬಿಸಿದ್ದ. ಅಲ್ಲದೆ ಇವರಿಬ್ಬರ ಮದುವೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಹೀಗಿದ್ದರೂ ಮಗಳ ತಲೆಕೆಡಿಸಿ ಮುಕಳೆಪ್ಪ ಬಲವಂತವಾಗಿ ಮದುವೆ ಆಗಿದ್ದಾನೆ ಎಂದು ಯುವತಿ ಪೋಷಕರು ಆರೋಪಿಸಿದ್ದರು.

ಈ ಮಧ್ಯೆ ಮುಕಳೆಪ್ಪ ಪತ್ನಿ ಗಾಯತ್ರಿ, ವಿಡಿಯೋ ಬಿಡುಗಡೆ ಮಾಡಿ, ತನ್ನ ತಂದೆ ತಾಯಿ ವಿರುದ್ಧವೇ ತಿರುಗಿ ಬಿದ್ದಿದ್ದಾಳೆ. ನಮ್ಮ ಮದುವೆಗೆ ನಮ್ಮ ತಾಯಿ ಒಪ್ಪಿಗೆ ಇತ್ತು. ಈಗ ಯಾರೋ ಹೇಳಿರುವ ಮಾತು ಕೇಳಿ ನನ್ನ ಹಾಗೂ ಮುಕಳೆಪ್ಪ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಮತ್ತೊಂದು ಟ್ವಿಸ್ಟ್ ನೀಡಿದ್ದಾಳೆ.

ಇದನ್ನೂ ಓದಿ: Bengaluru Woman Murder: ಅಕ್ರಮ ಸಂಬಂಧ ಶಂಕೆ; ಮಗಳೆದುರೇ ಪತ್ನಿಗೆ 11 ಬಾರಿ ಚಾಕುವಿನಿಂದ ಇರಿದು ಕೊಂದ 2ನೇ ಗಂಡ!