BBK 12 Contestant: ಬಿಗ್ ಬಾಸ್ ಆರಂಭಕ್ಕೆ ಐದೇ ದಿನ ಬಾಕಿ: ಹೊರಬಿತ್ತು ಸ್ಪರ್ಧಿಗಳ ಹೊಸ ಪಟ್ಟಿ
ಬಿಗ್ ಬಾಸ್ 12 ಪ್ರೋಮೋ ಹೊರಬಿದ್ದ ಬೆನ್ನಲ್ಲೇ ಈ ಬಾರಿ ಮನೆಯೊಳಗೆ ಹೋಗುವ ಸ್ಪರ್ಧಿಗಳು ಇವರೇ ಎಂಬ ಗುಸುಗುಸು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಹಿಂದೆ ಎಲ್ಲ 18 ಕಂಟೆಸ್ಟೆಂಟ್ಗಳ ಲಿಸ್ಟ್ ವೈರಲ್ ಆಗಿತ್ತು. ಇವರೇ ಬಿಗ್ ಬಾಸ್ ಮನೆಯೊಳಗೆ ಹೋಗುವ ಸ್ಪರ್ಧಿಗಳು ಎಂದು ಹೇಳಲಾಗುತ್ತು. ಆದರೀಗ ಮತ್ತೊಂದಿಷ್ಟು ಹೆಸರು ಕೇಳಿಬರುತ್ತಿದೆ.

BBK 12 New Contestant List -

ಕನ್ನಡದ ಜನಪ್ರಿಯ ಹಾಗೂ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12 (Bigg Boss Kannada season 12) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇನ್ನೇನು ಐದು ದಿನಗಳಲ್ಲಿ ಅಂದರೆ ಇದೇ ಸೆಪ್ಟೆಂಬರ್ 28 ರಿಂದ ದೊಡ್ಮನೆ ಆಟ ಶುರುವಾಗಿದೆ. ಈಗಾಗಲೇ ಕಲರ್ಸ್ ಕನ್ನಡ ಎರಡು ಪ್ರೋಮೋ ಬಿಟ್ಟು ವೀಕ್ಷಕರ ತಲೆಗೆ ಹುಳ ಬಿಟ್ಟಿದೆ. ಈ ಪ್ರೋಮೋಗಳನ್ನು ನೋಡಿದ ಬಳಿಕ ಶೋ ಮೇಲಿನ ಕುತೂಹಲ ದುಪ್ಪಟ್ಟಾಗಿದೆ. ಅದರಲ್ಲೂ ಎರಡನೇ ಪ್ರೋಮೋಗೆ ಎಐ ಟಚ್ ನೀಡಲಾಗಿದ್ದು, ಇದೇ ಈ ಬಾರಿಯ ಕಾನ್ಸೆಪ್ಟ್ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ.
ಬಿಗ್ ಬಾಸ್ 12 ಪ್ರೋಮೋ ಹೊರಬಿದ್ದ ಬೆನ್ನಲ್ಲೇ ಈ ಬಾರಿ ಮನೆಯೊಳಗೆ ಹೋಗುವ ಸ್ಪರ್ಧಿಗಳು ಇವರೇ ಎಂಬ ಗುಸುಗುಸು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಹಿಂದೆ ಎಲ್ಲ 18 ಕಂಟೆಸ್ಟೆಂಟ್ಗಳ ಲಿಸ್ಟ್ ವೈರಲ್ ಆಗಿತ್ತು. ಇವರೇ ಬಿಗ್ ಬಾಸ್ ಮನೆಯೊಳಗೆ ಹೋಗುವ ಸ್ಪರ್ಧಿಗಳು ಎಂದು ಹೇಳಲಾಗುತ್ತು. ಆದರೀಗ ಮತ್ತೊಂದಿಷ್ಟು ಹೆಸರು ಕೇಳಿಬರುತ್ತಿದೆ.
ಸ್ಯಾಂಡಲ್ವುಡ್ನಲ್ಲಿ ಈ ವರ್ಷ ತೆಗೆಕಂಡ ಗೌರಿ ಸಿನಿಮಾದ ನಾಯಕನ ಹೆಸರು ಬಿಗ್ ಬಾಸ್ ಪಟ್ಟಿಯಲ್ಲಿದೆ. ಇವರ ಹೆಸರು ಸಮರ್ಜಿತ್ ಲಂಕೇಶ್. ಬ್ಯಾಚುಲರ್ ಆಗಿರುವ ಇವರು ಈ ಬಾರಿ ದೊಡ್ಮನೆಗೆ ಬರಲಿದ್ದಾರೆ ಎನ್ನಲಾಗಿದೆ. ಹಾಗೆಯೆ ಅನನ್ಯಾ ಅಮರ್ ಅವರು ಬಿಗ್ ಬಾಸ್ ಮನೆಗೆ ಬರ್ತಾರೆ ಎನ್ನಲಾಗುತ್ತಿದೆ. ಮಜಾ ಭಾರತ ಮೂಲಕ ಗಮನ ಸೆಳೆದ ಹುಲಿ ಕಾರ್ತಿಕ್ ಹೆಸರು ಕೂಡ ಲಿಸ್ಟ್ನಲ್ಲಿ ಇದೆ. ಮಂಗಳೂರಿನ ಕುವರಿ ಅದ್ವಿತಿ ಶೆಟ್ಟಿ ಬಿಗ್ ಬಾಸ್ಗೆ ಹೋಗುತ್ತಾರೆ ಎಂಬ ಸುದ್ದಿ ಪ್ರತಿ ಬಾರಿ ಕೇಳಿಬರುತ್ತದೆ. ಇವರಿಗೆ ಅನೇಕ ಬಾರಿ ಆಫರ್ ಕೂಡ ಬಂದಿದೆ. ಆದರೆ, ಈ ಬಾರಿ ಶೋಗೆ ಅವರು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಇದೆ.
ಇನ್ನು ಶ್ವೇತಾ ಪ್ರಸಾದ್ ಅವರು ಕೂಡ ಬಿಗ್ ಬಾಸ್ ಮನೆಗೆ ಬರಲಿದ್ದಾರೆ. ಆರಂಭದಲ್ಲಿ ಧಾರಾವಾಹಿಗಳ ಮೂಲಕ ಶ್ವೇತಾ ಗಮನ ಸೆಳೆದವರು. ಆ ಬಳಿಕ ಅವರು ಆರ್ಜೆ ಪ್ರದೀಪ್ ಜೊತೆ ವಿವಾಹ ಮಾಡಿಕೊಂಡಿದ್ದಾರೆ. ಇವರ ಜೊತೆಗೆ ಶ್ರೇಯಸ್ ಮಂಜು, ಮೌನ ಗುಡ್ಡೇಮನೆ, ಕಾಕ್ರೋಚ್ ಸುಧಿ, ಕಾವ್ಯ ಶೈವ, ಗಿಲ್ಲಿ ನಟ, ಕರಣ್ ಆರ್ಯನ್ ಹೆಸರು ಪಟ್ಟಿಯಲ್ಲಿ ಸೇರಿದೆ. ಸ್ಪಂದನಾ ಸೋಮಣ್ಣ, ದಿವ್ಯಾ ವಸಂತ್, ತೇಜಸ್ ಗೌಡ, ಪಯಲ್ ಚಂಗಪ್ಪ, ವರುಣ್ ಆರಾಧ್ಯ ಕೂಡ ದೊಡ್ಮನೆಗೆ ಬರುತ್ತಾರೆ ಎನ್ನಲಾಗುತ್ತಿದೆ.
Bigg Boss Home: ಬಿಗ್ ಬಾಸ್ ಮನೆ ನಿರ್ಮಿಸಲು ಎಷ್ಟು ಕೋಟಿ ಖರ್ಚಾಗುತ್ತದೆ? ವೆಚ್ಚ ಕೇಳಿದರೆ ಶಾಕ್ ಆಗ್ತೀರಿ
ಮತ್ತೊಂದೆಡೆ ಬಿಗ್ ಬಾಸ್ ಆರಂಭವಾಗುವ ಹೊತ್ತಿಗೆ ದೃಷ್ಟಿಬೊಟ್ಟು ಧಾರಾವಾಹಿ ಮುಕ್ತಾಯ ಕಂಡಿದೆ. ಇದರಲ್ಲಿ ಮುಖ್ಯ ಪಾತ್ರ ಮಾಡುತ್ತಿರುವ ವಿಜಯ್ ಸೂರ್ಯ ಕೂಡ ಲಿಸ್ಟ್ನಲ್ಲಿದ್ದಾರೆ. ಇದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹೆಸರಷ್ಟೆ. ನಿಜವಾಗಿಯೂ ದೊಡ್ಮನೆಯೊಳಗೆ ಯಾರೆಲ್ಲ ಹೋಗುತ್ತಾರೆ ಎಂಬ ಕುತೂಹಲಕ್ಕೆ ಇದೇ ಭಾನುವಾರ ತೆರೆ ಬೀಳಿಲಿದೆ.