Dharwad News: ಬೇಕಂತಲೇ ಯುವತಿಯರ ಮೈ ಕೈ ಮುಟ್ಟಿ ಅನುಚಿತ ವರ್ತನೆ; ಧಾರವಾಡದಲ್ಲಿ ಮುಸ್ಲಿಂ ಜಿಮ್ ಟ್ರೈನರ್ ಅರೆಸ್ಟ್
Dharwad gym trainer Arrest: ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿ ಸಾಬಿರ್, ಜಿಮ್‌ನಲ್ಲಿ ಮಹಿಳೆಯರ ಶೌಚಾಲಯಕ್ಕೆ ಹೋಗಿ ಬರುವುದು, ಟ್ರೈನಿಂಗ್ ವೇಳೆ ಬೇಕಂತಲೇ ಮೈ ಕೈ ಮುಟ್ಟಿ ಅನುಚಿತ ವರ್ತನೆ ಮಾಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.
ಧಾರವಾಡದ ಬಂಧಿತ ಜಿಮ್ ಟ್ರೈನರ್ ಸಾಬೀರ್. -
ಧಾರವಾಡ: ಜಿಮ್‌ನಲ್ಲಿ ಬೇಕಂತಲೇ ಯುವತಿಯರು, ಮಹಿಳೆಯರ ಮೈ ಕೈ ಮುಟ್ಟಿ ಅನುಚಿತ ವರ್ತನೆ ತೋರುತ್ತಿದ್ದ ಜಿಮ್ ಟ್ರೈನರ್‌ನನ್ನು ಪೊಲೀಸರು ಬಂಧಿಸಿರುವ ಘಟನೆ (Dharwad gym trainer Arrest) ನಗರದಲ್ಲಿ ನಡದಿದೆ. ಧಾರವಾಡ ನಗರದ ಮರಾಠಾ ಕಾಲೋನಿಯ ಫಿಟ್‌ನೆಸ್ ಫಸ್ಟ್ ಜಿಮ್ ಟ್ರೈನರ್ ಮೊಹಮ್ಮದ್ ಸಾಬೀರ್ ಬಂಧಿತ ಆರೋಪಿಯಾಗಿದ್ದಾನೆ.
ಈತ ಜಿಮ್‌ಗೆ ಬರುವ ಯುವತಿ ಮತ್ತು ಮಹಿಳೆಯರಿಗೆ ಬೇಕಂತಲೇ ಬ್ಯಾಡ್ ಟಚ್ ಮಾಡುತ್ತಾ ತರಬೇತಿ ನೀಡುತ್ತಿದ್ದ. ಜಿಮ್‌ನಲ್ಲಿ ಮಹಿಳೆಯರ ಶೌಚಾಲಯಕ್ಕೆ ಹೋಗಿ ಬರುವುದು ಮಾಡುತ್ತಿದ್ದ ಎಂದು ಯುವತಿಯೊಬ್ಬರು ಆರೋಪಿಸಿದ್ದರು. ಈ ಹಿನ್ನೆಲೆ ಭಜರಂಗ ದಳದ ಕಾರ್ಯಕರ್ತರು ಜಿಮ್‌ಗೆ ಬೀಗ ಹಾಕಿದ್ದರು.
ಇನ್ನು ಸಂತ್ರಸ್ತೆ ಧಾರವಾಡ ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದಲ್ಲಿ ಸಂಬಂಧಿಸಿ ಆರೋಪಿ ಸಾಬೀರ್‌ನನ್ನು ಬಂಧಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
Love Jihad: ಹುಬ್ಬಳ್ಳಿ ಜಿಮ್ ಲವ್ ಜಿಹಾದ್ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡನ ಕೈವಾಡ: ಯುವತಿ ಆರೋಪ
ಹಿಂದೂ ಯುವತಿಯರನ್ನೇ ಟಾರ್ಗೆಟ್ ಮಾಡಿ ಅವರೊಂದಿಗೆ ಅಸಭ್ಯವಾಗಿ ವರ್ತನೆ ಮಾಡುವ ಆರೋಪ ಸಂಬಂಧ ಈ ಹಿಂದೆಯೇ ಟ್ರೈನರ್ ಸಾಬಿರ್ಗೆ ಬಜರಂಗದಳ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದರು. ಆದರೂ ವರ್ತನೆ ಸರಿಪಡಿಸಿಕೊಳ್ಳದ ಸಾಬಿರ್ ವಿರುದ್ಧ ಮತ್ತೆ ಆರೋಪಗಳು ಕೇಳಿಬಂದಿದ್ದವು. ಜಿಮ್ ಟ್ರೈನರ್ ಸಾಬಿರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹಿಂದೂ ಕಾರ್ಯಕರ್ತರು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಆರೋಪಿಯ ಬಂಧನವಾಗಿದೆ.
ಜಿಮ್ ಮಾಲೀಕರು, ಟ್ರೈನರ್‌ಗಳೊಂದಿಗೆ ಪೊಲೀಸ್ ಕಮಿಷನರ್ ಸಭೆ
ಹುಬ್ಬಳ್ಳಿ: ಹುಬ್ಬಳ್ಳಿ -ಧಾರವಾಡ ಅವಳಿ ನಗರದಲ್ಲಿ ಜಿಮ್ ಟ್ರೈನರ್‌ಗಳಿಂದ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಗಳ ಹಿನ್ನೆಲೆಯಲ್ಲಿ ಹು-ಧಾ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಜಿಮ್ ಮಾಲೀಕರು ಮತ್ತು ಟ್ರೈನರ್‌ಗಳ ಸಭೆ ನಡೆಸಿದ್ದಾರೆ. ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಜಿಮ್‌ಗಳಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ನಗರದ ಬಿವಿಬಿ ಕಾಲೇಜಿನಲ್ಲಿ ಸಭೆ ಬಳಿಕ ಮಾತನಾಡಿದ ಪೊಲೀಸ್ ಕಮಿಷಮರ್ ಎನ್. ಶಶಿಕುಮಾರ್ ಅವರು, ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಠಾಣಾವಾರು ಜಿಮ್ ಮಾಲೀಕರ ಸಭೆ ಮಾಡಲಾಗಿದೆ. ಜಿಮ್ ಅನ್ನು ಅವಳಿ ನಗರದಲ್ಲಿ ಕೆಲವರು ಉದ್ಯಮ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಕೆಲವು ಘಟನೆಗಳು ನಗರದಲ್ಲಿ ನಡೆದಿರುವದರಿಂದ ಒಳ್ಳೆ ಜಿಮ್‌ಗಳಿಗೆ ಕೆಟ್ಟು ಹೆಸರು ಬರುತ್ತಿದೆ ಎಂದು ಹಲವು ಮಾಲೀಕರು ಮನವಿ ಮಾಡಿದ್ದಾರೆ. ಪೊಲೀಸ್ ಇಲಾಖೆ ವಿಧಿಸುವ ನಿಯಮ ಪಾಲನೆ ಮಾಡಲು ಸಿದ್ಧರಿದ್ದೇವೆ ಎಂದು ಮುಂದು ಬಂದಿದ್ದು, ಹೀಗಾಗಿ ಸಭೆ ಮಾಡಿದ್ದೇವೆ ಎಂದು ಹೇಳಿದರು.
ಮದುವೆ ಆಗೋದಾಗಿ ನಂಬಿಸಿ ಯುವತಿ ಮೇಲೆ ನಿರಂತರ ಅತ್ಯಾಚಾರ, ವಂಚನೆ: ಆರೋಪಿ ಅರೆಸ್ಟ್
ಪ್ರಮುಖವಾಗಿ ಜಿಮ್‌ಗಳಿಗೆ ಸಿಸಿಟಿವಿ ಅಳವಡಿಸಿಕೊಳ್ಳುವ ಬಗ್ಗೆ ಸೂಚನೆ ನೀಡಲಾಗಿದೆ. ಟ್ರೈನರ್‌ಗಳ ಸಂಪೂರ್ಣ ಮಾಹಿತಿ ಅವರು ಟ್ರೈನ್ ಮಾಡುವ ಅರ್ಹತೆ ಇದೆಯಾ, ಜೀಮ್‌ಗೆ ಬರುವವರ ಜೊತೆ ಯಾವ ರೀತಿ ವ್ಯವಹರಿಸಬೇಕು ಎಂಬ ಸಲಹೆ ನೀಡಲಾಗುತ್ತಿದೆ. ಈ ಕುರಿತು ಜೀಮ್ ಮಾಲೀಕರು ಜೀಮ್‌ಗೆ ಬರುವರ ಬಗ್ಗೆ ಸಂಪೂರ್ಣ ಜವಾಬ್ದಾರಿ ತಗೆದುಕೊಳ್ಳಬೇಕು ಎಂದು ತಿಳಿಸಿದರು.