ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆಂಗಳೂರು ಅಲ್ಲ! ದೇಶದಲ್ಲೇ ಮೊದಲು ವಿದ್ಯುತ್ ಸಂಪರ್ಕ ಸಿಕ್ಕಿದ್ದು ಕರ್ನಾಟಕದ ಈ ನಗರಕ್ಕೆ

Viral News: ಭಾರತದ ವಿದ್ಯುತ್ ಇತಿಹಾಸದ ಬಗ್ಗೆ ಚರ್ಚಿಸುವಾಗ ಹೆಚ್ಚಿನವರು ಬೆಂಗಳೂರಿನ ಬಗ್ಗೆಯೇ ಮಾತನಾಡುತ್ತಾರೆ. ಬೆಂಗಳೂರಿನ ಬೀದಿಗಳು ವಿದ್ಯುತ್‌ ದೀಪದಿಂದ ಬೆಳಗುವ ಮೂರು ವರ್ಷಗಳ ಮೊದಲೇ ಕರ್ನಾಟಕದ ಮತ್ತೊಂದು ಜಿಲ್ಲೆ ವಿದ್ಯುತ್‌ ಸಂಪರ್ಕ ಹೊಂದಿತ್ತು. ವಿಶೇಷ ಎಂದರೆ ದೇಶದಲ್ಲೇ ಮೊದಲು ವಿದ್ಯುತ್‌ ಸಂಪರ್ಕ ಪಡೆದ ಈ ಜಿಲ್ಲೆ ಯಾವುದು ಗೊತ್ತೆ?

ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.23: ಯಾವುದೇ ಕೆಲಸ ಕಾರ್ಯಗಳಿಗೆ ವಿದ್ಯುತ್ ಅತ್ಯಗತ್ಯ. ಕಾರ್ಖಾನೆ, ಮನೆಯೊಂದ ಹಿಡಿದು ವಾಹನಗಳೂ ವಿದ್ಯುತ್‌ ಅವಲಂಬಿಸಿವೆ. ಭಾರತದ ವಿದ್ಯುತ್ ಇತಿಹಾಸದ ಬಗ್ಗೆ ಚರ್ಚಿಸುವಾಗ ಹೆಚ್ಚಿನವರು ಬೆಂಗಳೂರಿನ (Bengaluru) ಬಗ್ಗೆಯೇ ಮಾತನಾಡುತ್ತಾರೆ. ಆದರೆ ಬೆಂಗಳೂರಿನ ಬೀದಿಗಳು ವಿದ್ಯುತ್‌ ದೀಪದ ಬೆಳಕಿಯನ್ನು ಝಗಮಗಿಸುವ ಮೂರು ವರ್ಷಗಳ ಮೊದಲೇ ಕರ್ನಾಟಕದ ಮತ್ತೊಂದು ಜಿಲ್ಲೆ ವಿದ್ಯುತ್‌ ಸಂಪರ್ಕ ಪಡೆದುಕೊಂಡಿತ್ತು ಎಂದರೆ ನಂಬುತ್ತೀರಾ? ಅಲ್ಲಿದೆ ಇದು ಭಾರತದ ಇತಿಹಾಸದಲ್ಲಿ ವಿದ್ಯುತ್ ಸಂಪರ್ಕ ಪಡೆದ ಮೊದಲ ಸ್ಥಳ ಎನಿಸಿಕೊಂಡಿದೆ. ಯಾವುದು ಈ ಸ್ಥಳ? ಇಲ್ಲಿದ ವಿವರ.

ಭಾರತದ ಮೊದಲ ಜಲವಿದ್ಯುತ್ ಸ್ಥಾವರವನ್ನು ಮಂಡ್ಯ ಶಿವನಸಮುದ್ರದ ಬಳಿ ಸ್ಥಾಪಿಸಲಾಗಿದೆ‌. ಇದು ಕೋಲಾರದವರೆಗೆ ವಿದ್ಯುತ್ ರವಾನಿಸಿತ್ತು. ಕಾವೇರಿ ನದಿಯ ನೀರನ್ನು ಬಳಸಿ ಇಲ್ಲಿ‌ ಮೊದಲ ಜಲವಿದ್ಯುತ್ ನಿರ್ಮಾಣ ಮಾಡಲಾಗಿತ್ತು‌. ಇಡೀ ದೇಶವನ್ನು ಆ ಮೂಲಕ ಮಂಡ್ಯ ಬೆರಗುಗೊಳಿಸಿತ್ತು. ಆ ಮೂಲಕ ವಿದ್ಯುದೀಕರಣದತ್ತ ಭಾರತದ ಪ್ರಯಾಣಕ್ಕೆ ಮಹತ್ವದ ತಿರುವು ನೀಡಿತ್ತು.

ಭಾರತದಲ್ಲಿ ವಿದ್ಯುತ್ ಬಳಕೆ ಬ್ರಿಟಿಷ್ ವಸಾಹತುಶಾಹಿ ಯುಗದಷ್ಟು ಹಿಂದಿನದು. ಆರಂಭದಲ್ಲಿ ಮನೆಗಳಿಗಿಂತ ಸಾರ್ವಜನಿಕ ಮೂಲಸೌಕರ್ಯಕ್ಕಾಗಿ ಹೆಚ್ಚು ಬಳಕೆಯಲ್ಲಿತ್ತು. 1902ರ ಸುಮಾರಿಗೆ, ಕೋಲಾರದಲ್ಲಿ ಗಣಿಗಾರಿಕೆ ಉಪಕರಣಗಳು, ಬೆಳಕಿನ ವ್ಯವಸ್ಥೆಗಳಿಗೆ ಮತ್ತು ದೈನಂದಿನ ಕಾರ್ಯಾಚರಣೆಗಳಿಗೆ ವಿದ್ಯುತ್ ಬಳಸಲಾಯಿತು. ಇದನ್ನು ಬೆಂಬಲಿಸಲು, ಭಾರತದ ಮೊದಲ ಜಲವಿದ್ಯುತ್ ಸ್ಥಾವರವನ್ನು ಶಿವನಸಮುದ್ರದ ಬಳಿ ಸ್ಥಾಪಿಸಲಾಯಿತು.

ವೇದಿಕೆಯಲ್ಲೇ ಆ್ಯಂಕರ್‌ಗೆ ಚಪ್ಪಲಿಯಿಂದ ಹೊಡೆದ ಖ್ಯಾತ ಗಾಯಕಿ

ಭಾರತದಲ್ಲಿ ವಿದ್ಯುತ್ ಬಳಕೆಯು ಬ್ರಿಟಿಷರ ಕಾಲದಲ್ಲೇ ಪ್ರಾರಂಭವಾಯಿತು.‌ 1874ರಲ್ಲಿ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಎಲೆಕ್ಟ್ರಿಕ್ ಬೀದಿ ದೀಪಗಳನ್ನು ಪರಿಚಯಿಸಲಾಯಿತು. ಕೋಲ್ಕತ್ತಾದಲ್ಲಿ ವಿದ್ಯುತ್ ಅನ್ನು ಆರಂಭದಲ್ಲಿ ಆಡಳಿತಾತ್ಮಕ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಲಾಗುತ್ತಿತ್ತು. 1899ರಲ್ಲಿ ವಿದ್ಯುದೀಕರಣವು ಕ್ರಮೇಣ ದೇಶದ ಇತರ ಭಾಗಗಳಿಗೆ ವಿಸ್ತರಿಸಿತು.

ಆಧುನಿಕ ಸೌಲಭ್ಯಗಳ ಲಭ್ಯತೆಯು ಕೋಲಾರ ಚಿನ್ನದ ಗಣಿಗಳಿಗೆ 'ಲಿಟಲ್ ಇಂಗ್ಲೆಂಡ್' ಎಂಬ ಹೆಸರು ನೀಡಿದೆ. ಏಕೆಂದರೆ ಇದು ಲಂಡನ್‌ನಲ್ಲಿರುವಂತೆಯೇ ವಿದ್ಯುತ್, ನೀರು ಸರಬರಾಜು ಮತ್ತು ಮನರಂಜನಾ ಕ್ಲಬ್‌ಗಳಂತಹ ಸೌಲಭ್ಯ ಹೊಂದಿತ್ತು. ಇದೇ ಸಮೃದ್ಧ ಕೈಗಾರಿಕಾ ಮತ್ತು ಸಾಂಸ್ಕೃತಿಕ ಹಿನ್ನೆಲೆಯು ಜಗತ್ತಿನಾದ್ಯಂತ ಸದ್ದು ಮಾಡಿದ 'ಕೆಜಿಎಫ್' ಸಿನಿಮಾಕ್ಕೆ ಸ್ಫೂರ್ತಿಯಾಯಿತು.

ಇಡೀ ಪ್ರದೇಶಕ್ಕೆ ಪೂರ್ಣ ಪ್ರಮಾಣದ ವಿದ್ಯುತ್ ಸಂಪರ್ಕ ನೀಡಿದ ಹೆಗ್ಗಳಿಕೆ ಕರ್ನಾಟಕದ ಮಂಡ್ಯ ಹಾಗೂ ಕೋಲಾರ ಚಿನ್ನದ ಗಣಿಗೆ ಸಲ್ಲುತ್ತದೆ. ಬೆಂಗಳೂರು ನಗರಕ್ಕೆ ವಿದ್ಯುತ್ ಸಂಪರ್ಕ ಬಂದಿದ್ದು 1905ರಲ್ಲಿ. 1902ರಲ್ಲಿ ಶಿವನಸಮುದ್ರಕ್ಕೆ ಮೊದಲ ವಿದ್ಯುತ್‌ ಸಂಪರ್ಕ ಲಭಿಸಿತು.