Essay Competition Winners: ʼಸದಾತನʼ ದಿಂದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ; ಫಲಿತಾಂಶ ಪ್ರಕಟ
Essay Competition Winners: ʼಸದಾತನʼ ದಿಂದ ಶಾಲಾ ಶಿಕ್ಷಕರಿಗಾಗಿ ನಡೆಸಲಾದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ 964 ಶಿಕ್ಷಕರು ಭಾಗವಹಿಸಿದ್ದು, ಸ್ಪರ್ಧೆಯ ಫಲಿತಾಂಶ ಪ್ರಕಟಿಸಲಾಗಿದೆ. ಈ ಕುರಿತ ವಿವರ ಇಲ್ಲಿದೆ.
ಬೆಂಗಳೂರು: ʼಸದಾತನʼ ದಿಂದ ಶಾಲಾ ಶಿಕ್ಷಕರಿಗಾಗಿ ನಡೆಸಲಾದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ (Essay Competition Winners) ರಾಜ್ಯದ ವಿವಿಧ ಭಾಗಗಳಿಂದ 964 ಶಿಕ್ಷಕರು ಭಾಗವಹಿಸಿದ್ದು, ಸ್ಪರ್ಧೆಯ ಫಲಿತಾಂಶ ಪ್ರಕಟಿಸಲಾಗಿದೆ. ಕನಕಪುರದ ವಾಸುದೇವ ನಾಡಿಗ್ ಅವರಿಗೆ ಪ್ರಥಮ ಬಹುಮಾನ (ರೂ. 21,000), ಬೆಳಗಾವಿಯ ಗಂಗಾದೇವಿ ಚಕ್ರಸಾಲಿ ಅವರಿಗೆ ದ್ವಿತೀಯ ಬಹುಮಾನ (ರೂ. 18,000), ಮಾಗಡಿಯ ಶ್ರುತಿ ವಿ. ಡಿ. ಅವರಿಗೆ ತೃತೀಯ ಬಹುಮಾನ (ರೂ. 15,000) ಲಭಿಸಿದೆ.
ಇನ್ನು ಮೆಚ್ಚುಗೆ ಬಹುಮಾನ (ತಲಾ ರೂ. 10,000) ವನ್ನು ಡಾ. ಕಾರ್ತಿಕ್ ವಾಗ್ಳೆ, ಕೊಪ್ಪ, ರಾಮ ದೇವಾಡಿಗ, ಬೈಂದೂರು, ಪ್ರಶಾಂತಿ ಪಾಟೀಲ್, ತೀರ್ಥಹಳ್ಳಿ, ಸುಪ್ರಿಯಾ ನಾರಾಯಣರಾವ್, ಬೆಂಗಳೂರು, ಸೀಮಾ ಮಡಿವಾಳ, ಸಿದ್ದಾಪುರ, ಕುರುಬರ ನಾರಾಯಣಮ್ಮ, ಹೊಸಪೇಟೆ, ಸುಮಿತ್ರಾ ಗಾಜರೆ, ವಿಜಯಪುರ, ಉಮೇಶ್ ಕುಮಾರ್ ಎನ್., ಬೆಂಗಳೂರು, ಅನ್ನಪೂರ್ಣ ಕಾಂಬಳೆ, ಘಟಪ್ರಭಾ, ಶಂಕರ್ ಜಿ.ಕೆ., ಸಾಗರ ಅವರಿಗೆ ಲಭಿಸಿದೆ.
ಫೆ.9 ರಂದು ವಿಚಾರ ಸಂಕಿರಣ
ಬೆಂಗಳೂರಿನ ಜಯನಗರದಲ್ಲಿರುವ ಶ್ರೀ ಜಯರಾಮಸೇವಾ ಮಂಡಲಿಯಲ್ಲಿ ಫೆ.9 ರಂದು ಭಾನುವಾರ ಬೆಳಗ್ಗೆ 9.30 ಕ್ಕೆ ‘ಸನಾತನ ಧರ್ಮ ಮತ್ತು ವರ್ತಮಾನʼ ವಿಷಯವಾಗಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ. ಬಸವನಗುಡಿ ಶ್ರೀರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ನಿತ್ಯಸ್ಥಾನಂದಜೀ ಅವರು ವಿಚಾರ ಸಂಕಿರಣವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎನ್. ಎಂ. ಶಾಂತಿನಾಥ ಹಾಗೂ ಎಸ್. ಕೆ. ಗೋಪಾಲಕೃಷ್ಣ ಪಾಲ್ಗೊಳ್ಳಲಿದ್ದಾರೆ.
ವಿಚಾರ ಸಂಕಿರಣದಲ್ಲಿ ‘ಸನಾತನ ಧರ್ಮದ ಮೂಲ ಲಕ್ಷಣಗಳುʼ ವಿಷಯವಾಗಿ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ‘ಸನಾತನ ಧರ್ಮ ಮತ್ತು ಮಹಿಳೆʼ ವಿಷಯವಾಗಿ ಡಾ. ವಿ. ಬಿ. ಆರತಿ, ‘ಸನಾತನ ಧರ್ಮ ಮತ್ತು ಸಮಾಜ ವ್ಯವಸ್ಥೆʼ ವಿಷಯವಾಗಿ ವಿದ್ವಾನ್ ಕೃಷ್ಣರಾಜ ಕುತ್ಪಾಡಿ, ‘ಸನಾತನ ಧರ್ಮದ ಅಭಿವ್ಯಕ್ತಿ ರಾಮಾಯಣʼ ವಿಷಯವಾಗಿ ದಿವಾಕರ ಹೆಗಡೆ ಉಪನ್ಯಾಸ ಮತ್ತು ಸಂವಾದ ನಡೆಸಿಕೊಡಲಿದ್ದಾರೆ.
ಸಂಜೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ತುಮಕೂರಿನ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದಜೀ ಮಹಾರಾಜ್ ಅವರು ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಯರಾಮ ಸೇವಾಮಂಡಲಿಯ ಗೌ. ಕಾರ್ಯದರ್ಶಿ ಡಾ. ಎಚ್. ಸುಂದರಮೂರ್ತಿ ಉಪಸ್ಥಿತರಿರುವರು.
ಈ ಸುದ್ದಿಯನ್ನೂ ಓದಿ | Reliance: ರಿಲಯನ್ಸ್ ಗ್ರೂಪ್ ಸಿಎಂಒ ಆಗಿ ಗಾಯತ್ರಿ ವಾಸುದೇವ ಯಾದವ್ ನೇಮಕ
ವಿಚಾರಸಂಕಿರಣದಲ್ಲಿ ಭಾಗವಹಿಸಲು ಆಸಕ್ತರೆಲ್ಲರಿಗೂ ಮುಕ್ತ-ಉಚಿತ ಪ್ರವೇಶವಿದ್ದು, ಭಾಗವಹಿಸಲು ಇಚ್ಛಿಸುವವರು ಮೊದಲೇ ನೋಂದಣಿ ಮಾಡಿಕೊಳ್ಳಲು ಕೋರಲಾಗಿದೆ. ನೋಂದಣಿಗಾಗಿ 7483681708 ಸಂಖ್ಯೆಗೆ ವಾಟ್ಸಾಪ್ ಮಾಡಬಹುದು ಎಂದು ಟ್ರಸ್ಟಿ ಕೆ.ಎಸ್. ಉಪಾಧ್ಯಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.