ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gadag News: ಮೇಲಧಿಕಾರಿಗಳ ಕಿರುಕುಳ; ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಗ್ರಾಮ ಲೆಕ್ಕಾಧಿಕಾರಿ

ಕಂದಾಯ ಇಲಾಖೆಯಲ್ಲಿ ಸಮರ್ಪಕವಾಗಿ ನಿರ್ವಹಿಸಿದರೂ ಮೇಲಧಿಕಾರಿಳು ಕಿರುಕುಳ ನೀಡುತ್ತಿದ್ದಾರೆ. ವಿನಾಕಾರಣ ಮೇಲಿಂದ ಮೇಲೆ ನೋಟಿಸ್ ನೀಡಿರುವುದಲ್ಲದೆ, ಕಳೆದ 2 ತಿಂಗಳಿಂದ ವೇತನ ತಡೆಹಿಡಿಯಲಾಗಿದೆ. ನನಗೆ ಅನಾರೋಗ್ಯ ಪೀಡಿತ ತಾಯಿ ಇದ್ದಾರೆ. ನನಗೂ ಆರೋಗ್ಯ ಸಮಸ್ಯೆ ಇರುವುದರಿಂದ ಜೀವನ ಕಷ್ಟವಾಗಿದೆ. ಹೀಗಾಗಿ ದಯಾಮರಣಕ್ಕೆ ಅನುಮತಿ ನೀಡಬೇಕು ಎಂದು ರಾಷ್ಟ್ರಪತಿಗಳಿಗೆ ಸರ್ಕಾರಿ ನೌಕರ ಮನವಿ ಮಾಡಿದ್ದಾರೆ.

ರಾಷ್ಟ್ರಪತಿಗಳಿಗೆ ಪತ್ರ ಬರೆದ ಗ್ರಾಮ ಲೆಕ್ಕಾಧಿಕಾರಿ ಯೋಗೇಶ್ ಕುರಹಟ್ಟಿ.

ಗದಗ, ಜ. 20: ಮೇಲಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಗ್ರಾಮ ಲೆಕ್ಕಾಧಿಕಾರಿಯೊಬ್ಬರು ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಕೆಲಸ ಸಮರ್ಪಕವಾಗಿ ನಿರ್ವಹಿಸಿದರೂ ವಿನಾಕಾರಣ ಮೇಲಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ ನನಗೆ ದಯಾಮರಣಕ್ಕೆ ಅನುಮತಿ ನೀಡಬೇಕು ಎಂದು ಮುಂಡರಗಿ ತಾಲೂಕಿನ ಡಂಬಳ ಗ್ರಾಮ ಲೆಕ್ಕಾಧಿಕಾರಿ ಯೋಗೇಶ್ ಕುರಹಟ್ಟಿ ಎಂಬುವವರು ರಾಷ್ಟ್ರಪತಿಗೆ ಪತ್ರ ಪತ್ರ ಬರೆದಿದ್ದಾರೆ.

ತನ್ನ ವೇತನವನ್ನೂ ತಡೆಹಿಡಿಯಲಾಗಿದೆ. ಜೀವನೋಪಾಯ ನಿರ್ವಹಣೆ ಕಷ್ಟವಾದ ಕಾರಣ ತನಗೆ ದಯಾಮರಣ ನೀಡಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಕಂದಾಯ ಇಲಾಖೆಯಲ್ಲಿ ಸಮರ್ಪಕವಾಗಿ ನಿರ್ವಹಿಸಿದರೂ ಕಿರುಕುಳ ನೀಡುತ್ತಿದ್ದಾರೆ. ವಿನಾಕಾರಣ ಮೇಲಿಂದ ಮೇಲೆ ನೋಟಿಸ್ ನೀಡಿರುವುದಲ್ಲದೆ, ಕಳೆದ 2 ತಿಂಗಳಿಂದ ವೇತನ ತಡೆಹಿಡಿಯಲಾಗಿದೆ. ನನಗೆ ಅನಾರೋಗ್ಯ ಪೀಡಿತ ತಾಯಿ ಇದ್ದಾರೆ, ಜತೆಗೆ ನಾನು ಕೂಡ ಅನಾರೋಗ್ಯ ಪೀಡಿತನಾಗಿರುವುದರಿಂದ ಜೀವನ ಕಷ್ಟವಾಗಿದೆ ಎಂಬುದು ಯೋಗೇಶ್​​ ಅಳಲಾಗಿದೆ.

ರಾಷ್ಟ್ರಪತಿಗೆ ಬರೆದ ಪತ್ರದಲ್ಲೇನಿದೆ?

ಪೂರ್ಣಶ್ರಮದಿಂದ ಕೆಲಸ ಮಾಡಿದರೂ ಸರಿಯಾಗಿ ಸಂಬಳ ಸಿಗುತ್ತಿಲ್ಲ. ತನಗೆ ವೃದ್ಧ ತಾಯಿ ಇದ್ದು, ಅವರನ್ನು ಪೋಷಿಸುವ ಜವಾಬ್ದಾರಿಯೂ ನನ್ನ ಮೇಲಿದೆ. ಸರ್ಕಾರದ ಕೆಲಸದಲ್ಲಿದ್ದರೂ, ನನಗೆ ಸರಿಯಾಗಿ ಸಂಬಳ ದೊರಕದೆ ಬಹಳ ಕಷ್ಟ ಅನುಭವಿಸುತ್ತಿದ್ದೇನೆ. ಈ ಪರಿಸ್ಥಿತಿಯಿಂದ ಜೀವನ ಸಾಗಿಸುವುದು ಅತೀವ ಕಠಿಣವಾಗಿದ್ದು, ಮಾನಸಿಕವಾಗಿ ಮತ್ತು ದೈಹಿಕವಾಗಿ ತುಂಬಾ ಸಂಕಟ ಅನುಭವಿಸುತ್ತಿದ್ದೇನೆ. ಆದ್ದರಿಂದ ದಯವಿಟ್ಟು ನನಗೆ ದಯಾಮರಣ ನೀಡುವ ಮೂಲಕ ಈ ದುಃಸ್ಥಿತಿಯಿಂದ ಮುಕ್ತಿಗೊಳಿಸಬೇಕೆಂದು ಕೋರುವುದಾಗಿ ಯೋಗೇಶ್ ಪ್ರತದಲ್ಲಿ ರಾಷ್ಟ್ರಪತಿಗಳಿಗೆ ತಿಳಿಸಿದ್ದಾರೆ.

ಗಂಡ ಹೊಸ ಫೋನ್ ಕೊಡಿಸಿಲ್ಲ ಎಂದು ಮಹಿಳೆ ಆತ್ಮಹತ್ಯೆ

ಅಕ್ರಮ ಮರಳು ದಂಧೆ ತಡೆಗೆ ಸೂಚನೆ; ಜೆಡಿಎಸ್‌ ಶಾಸಕಿ ಮನೆಗೆ ನುಗ್ಗಿ ಧಮ್ಕಿ

ರಾಯಚೂರು: ಅಕ್ರಮ ಮರಳು ದಂಧೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಶಾಸಕಿ ಮನೆಗೆ ನುಗ್ಗಿ, ಧಮ್ಕಿ ಹಾಕಿರುವಂತ ಘಟನೆ ದೇವದುರ್ಗದಲ್ಲಿ ನಡೆದಿದೆ.

ರಾಯಚೂರಿನ ದೇವದುರ್ಗದ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್ ಅವರು ಅಕ್ರಮ ಮರಳು ದಂಧೆ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸರಿಗೆ ಸೂಚಿಸಿದ್ದರು. ಇದರಿಂದ ಸಿಟ್ಟಾದಂತ ಮರಳು ದಂಧೆ ಕೋರರು ಅವರ ಮನೆಗೆ ನುಗ್ಗಿ ಧಮ್ಕಿ ಹಾಕಿರುವಂತ ಆರೋಪ ಕೇಳಿ ಬಂದಿದೆ.

ದೇವದುರ್ಗದ ಕೃಷ್ಣಾ ನದಿ ತೀರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದರಿಂದ ಶಾಸಕಿ ಕರೆಮ್ಮ ಮನೆ ಮೇಲೆ ದಾಳಿ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಸ್ವತಃ ಶಾಸಕಿ ಕರೆಮ್ಮ ಅವರು ದೇವದುರ್ಗ ಪೊಲೀಸ್ ಠಾಣೆಗೆ ತೆರಳಿ, 60ಕ್ಕೂ ಹೆಚ್ಚು ಜನರ ವಿರುದ್ಧ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಎಫ್ಐಆರ್ ಕೂಡ ದಾಖಲಾಗಿದೆ.