ಗಂಡ ಹೊಸ ಫೋನ್ ಕೊಡಿಸಿಲ್ಲ ಎಂದು ಮಹಿಳೆ ಆತ್ಮಹತ್ಯೆ
ಹೊಸ ಫೋನ್ ಖರೀದಿಗೆ ಪತಿ ನಿರಾಕರಿಸಿದ ಎಂಬ ಕಾರಣಕ್ಕೆ ವಲಸೆ ಕಾರ್ಮಿಕ ಮಹಿಳೆಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಜರಾತ್‌ನ ಅರಾವಳಿ ಜಿಲ್ಲೆಯಲ್ಲಿ ನಡೆದಿದೆ. ನೇಪಾಳ ಮೂಲದ ಊರ್ಮಿಳಾ ಖಾನನ್ ರಿಜನ್ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈ ಕುರಿತು ಪ್ರಕರಣ ದಾಖಲಿಸಲಾಗಿದೆ.
ಸಂಗ್ರಹ ಚಿತ್ರ -
ಗುಜರಾತ್: ಪತಿ ಹೊಸ ಫೋನ್ (New phone) ಖರೀದಿ ಮಾಡಲು ಬಿಡಲಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬಳು ಆತ್ಮಹತ್ಯೆ (suicide) ಮಾಡಿಕೊಂಡ ಘಟನೆ ಗುಜರಾತ್‌ನ (Gujarat) ಅರಾವಳಿ ಜಿಲ್ಲೆಯಲ್ಲಿ ನಡೆದಿದೆ. ನೇಪಾಳ (Nepal) ಮೂಲದ ಊರ್ಮಿಳಾ ಖಾನನ್ ರಿಜನ್ (22) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಪತಿ ಮತ್ತು ಮಗುವಿನೊಂದಿಗೆ ಮೋಡಸಾದಲ್ಲಿ ವಾಸವಾಗಿದ್ದ ಮಹಿಳೆ ಹೊಸ ಫೋನ್ ಗಾಗಿ ಗಂಡನೊಂದಿಗೆ ಜಗಳವಾಡಿದ್ದಳು. ಆದರೆ ಆರ್ಥಿಕ ಸಮಸ್ಯೆಯ ಕಾರಣದಿಂದ ಆತ ನಿರಾಕರಿಸಿದ್ದನು ಎನ್ನಲಾಗಿದೆ.
ಗುಜರಾತ್‌ನ ಅರಾವಳಿ ಜಿಲ್ಲೆಯ ಮೋಡಸಾದಲ್ಲಿ ಹೊಸ ಮೊಬೈಲ್ ಫೋನ್‌ಗಾಗಿ ಪತಿಯೊಂದಿಗೆ ಜಗಳ ಮಾಡಿದ ನೇಪಾಳದ ಊರ್ಮಿಳಾ ಖಾನನ್ ರಿಜನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆಯ ಪತಿ ಇದೇ ಪ್ರದೇಶದಲ್ಲಿ ಸಣ್ಣ ಚೈನೀಸ್ ಆಹಾರ ವ್ಯವಹಾರವನ್ನು ನಡೆಸುತ್ತಿದ್ದರು. ಇದರಿಂದಲೇ ಇವರ ಕುಟುಂಬ ನಿರ್ವಹಣೆಯಾಗುತ್ತಿತ್ತು. ಆದರೆ ಇತ್ತೀಚೆಗೆ ಊರ್ಮಿಳಾ ತನ್ನ ಗಂಡನ ಬಳಿ ಹೊಸ ಮೊಬೈಲ್ ಫೋನ್‌ಗೆ ಬೇಡಿಕೆ ಇಟ್ಟಿದ್ದಾಳೆ. ಆರ್ಥಿಕ ತೊಂದರೆಯಿಂದಾಗಿ ಆತ ಪದೇ ಪದೇ ಇದನ್ನು ನಿರಾಕರಿಸಿದಾಗ ದಂಪತಿಯ ನಡುವೆ ತೀವ್ರ ಜಗಳವಾಗಿದೆ.
ಮನೆಯ ಎದುರು ಹಾಕಿದ ರಂಗೋಲಿ ತುಳಿದು ವಿರೂಪಗೊಳಿಸಿದ ಶಾಲಾ ಬಾಲಕಿ: ಖಂಡಿಸದ ತಾಯಿಯ ನಡೆಗೆ ನೆಟ್ಟಿಗರು ಕಿಡಿಕಿಡಿ
ವಿವಾದದಿಂದ ನೊಂದ ಊರ್ಮಿಳಾ ಭವನಪುರ ಬಳಿಯ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಸ್ಥಳೀಯರು ನೀಡಿದ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಮೋಡಸಾ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದರು. ಘಟನೆಯ ಬಗ್ಗೆ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಲಾಗಿದ್ದು ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಾಲ್ಕು ವರ್ಷದ ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ
ಐದಾರು ತಿಂಗಳಾದರೂ ಮನೆಗೆ ಬರದಿದ್ದುದರಿಂದ ನೊಂದ ಪತ್ನಿಯೊಬ್ಬಳು ನಾಲ್ಕು ವರ್ಷದ ಮಗಳೊಂದಿಗೆ ಬೆಂಕಿ ಹಂಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಸಂಜಯನಗರ ಕೃಷ್ಣಪ್ಪ ಲೇಔಟ್‌ನಲ್ಲಿ ನಡೆದಿದೆ. ತಾಯಿ ಸೀತಾ (29) ಮತ್ತು ಅವರ 4 ವರ್ಷದ ಮಗಳು ಸೃಷ್ಟಿ ಮೃತರು.
ಸೀತಾ ಮತ್ತು ಆಕೆಯ ಪತಿ ಗೋವಿಂದ್ ಬಹದ್ದೂರ್ ನೇಪಾಳ ಮೂಲದವರು. ಬೆಂಗಳೂರಿನಲ್ಲಿ ಮನೆಗೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಕೆಲಸ ಮಾಡುತ್ತಿದ್ದ ಮನೆಯ ಪಕ್ಕದಲ್ಲೇ ಸಣ್ಣ ಮನೆಯೊಂದನ್ನು ಅವರಿಗೆ ನೀಡಲಾಗಿತ್ತು. ಅಲ್ಲಿ ದಂಪತಿ ಮತ್ತು ಮಗಳು ಸೃಷ್ಟಿ ವಾಸವಿದ್ದರು. ಪತಿ-ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಪತಿ ಗೋವಿಂದ್ ಪತ್ನಿ ಮತ್ತು ಮಗಳನ್ನು ಬಿಟ್ಟು ನೇಪಾಳಕ್ಕೆ ಹೋದರೆ 5- 6 ತಿಂಗಳುಗಳ ಕಾಲ ಮರಳಿ ಬರುತ್ತಿರಲಿಲ್ಲ. ಇದರಿಂದ ಸೀತಾ ತುಂಬಾ ನೊಂದುಕೊಂಡಿದ್ದಳು ಎನ್ನಲಾಗಿದೆ.
ಸಂಜಯನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.