ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ganesh Chaturthi: ಗಣೇಶ ಹಬ್ಬದ ಖರೀದಿ ಜೋರು, ತುಂಬಿ ತುಳುಕಿದ ಕೆಆರ್‌ ಮಾರ್ಕೆಟ್‌

KR Market: ಹಬ್ಬ ಹಿನ್ನೆಲೆಯಲ್ಲಿ ಹೂವು ಹಣ್ಣುಗಳ ಬೆಲೆ ಏರಿಕೆ ಕಂಡುಬಂದಿದೆ. ಹೂವಿನ ಮಾಲೆಗಳ ಮೊಳ ಹಾಗೂ ಮಾರುಗಳು, ಬಿಡಿ ಹೂಗಳ ಬೆಲೆಯೂ ಗಗನಕ್ಕೇರಿದೆ. ಹಣ್ಣುಗಳ ಬೆಲೆಯೂ ಮುಟ್ಟುವಂತೆಯೇ ಇಲ್ಲ ಎಂದು ಗೊಣಗುತ್ತಲೇ ಜನ ಹಬ್ಬಕ್ಕೆ ಅಗತ್ಯವಾದ ಹೂವು ಹಣ್ಣುಗಳನ್ನು ಖರೀದಿಸುವುದು ಕಂಡುಬಂತು.

ಬೆಂಗಳೂರು : ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ (Ganesh Chaturthi) ಸಂಭ್ರಮ ಕಳೆಗಟ್ಟಿದ್ದು ಬೆಂಗಳೂರಿನ ಕೆಆರ್ ಮಾರುಕಟ್ಟೆಯಲ್ಲಿ (KR market) ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಹೂವು ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿ (Shopping) ಭರಾಟೆಯು ಜೋರಾಗಿದೆ. ಕೆ.ಆರ್ ಮಾರುಕಟ್ಟೆಯಲ್ಲಿ ಕಾಲಿಡಲು ಆಗದಷ್ಟು ಜನಜಂಗುಳಿ ಬುಧವಾರ ಕಾಣಿಸಿತು. ಬೆಳ್ಳಂಬೆಳಿಗ್ಗೆಯೇ ಲಕ್ಷಾಂತರ ಜನ ಮಾರ್ಕೆಟ್‌ಗೆ ಧಾವಿಸಿ ಹಬ್ಬದ ಖರೀದಿಯಲ್ಲಿ ತೊಡಗಿದರು. ಇದರಿಂದ ಮಾರ್ಕೆಟ ಸುತ್ತಮುತ್ತ ಟ್ರಾಫಿಕ್‌ ಜಾಂ ಉಂಟಾಗಿದೆ.

ಗೌರಿ ಗಣೇಶ ಹಬ್ಬ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆ.ಆರ್ ಮಾರುಕಟ್ಟೆಯಲ್ಲಿ ಜನ ಖರೀದಿ ಭರಾಟೆಯಲ್ಲಿ ತೊಡಗಿದ್ದಾರೆ. ಹೂವು ಹಣ್ಣು ಹಾಗು ಪೂಜಾ ಸಾಮಗ್ರಿಗಳನ್ನು ಜನರು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಹಬ್ಬ ಹಿನ್ನೆಲೆಯಲ್ಲಿ ಹೂವು ಹಣ್ಣುಗಳ ಬೆಲೆ ಏರಿಕೆ ಕಂಡುಬಂದಿದೆ. ಅದರ ನಡುವೆಯೂ ಕೂಡ ಜನರ ಖರೀದಿ ಭರಾಟೆ ಜೋರಾಗಿದೆ. ಹೂವಿನ ಮಾಲೆಗಳ ಮೊಳ ಹಾಗೂ ಮಾರುಗಳು, ಬಿಡಿ ಹೂಗಳ ಬೆಲೆಯೂ ಗಗನಕ್ಕೇರಿದೆ. ಹಣ್ಣುಗಳ ಬೆಲೆಯೂ ಮುಟ್ಟುವಂತೆಯೇ ಇಲ್ಲ ಎಂದು ಗೊಣಗುತ್ತಲೇ ಜನ ಹಬ್ಬಕ್ಕೆ ಅಗತ್ಯವಾದ ಹೂವು ಹಣ್ಣುಗಳನ್ನು ಖರೀದಿಸುವುದು ಕಂಡುಬಂತು.

ಇದನ್ನೂ ಓದಿ: Ganesh Chaturthi : ಗಣೇಶ ಹಬ್ಬಕ್ಕೆ ಸಿದ್ಧತೆ: ಎಲ್ಲೆಡೆ ಪರಿಸರ ಪೂರಕ ಮೂರ್ತಿ ಪ್ರತಿಷ್ಠಾಪನೆ

ಹರೀಶ್‌ ಕೇರ

View all posts by this author