ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರಾಜ್ಯ ಸರ್ಕಾರದಿಂದ ಗುಡ್‌ನ್ಯೂಸ್‌: ಎಲ್ಲಿ, ಯಾವಾಗ ಬೇಕಿದ್ದರೂ ಪಡೆಯಬಹುದು ಡಿಜಿಟಲ್ ಇ- ಸ್ಟ್ಯಾಂಪ್; ಮಧ್ಯವರ್ತಿಗಳ ಕಾಟಕ್ಕೆ ಮುಕ್ತಿ

ಸ್ಟ್ಯಾಂಪ್ ಪೇಪರ್ ಗಳಿಗೆ ಇನ್ನು ಮುಂದೆ ಮಧ್ಯವರ್ತಿಗಳನ್ನು ಅವಲಂಬಿಸಬೇಕಾಗಿಲ್ಲ. ಎಲ್ಲಿ, ಯಾವಾಗ ಬೇಕಾದರೂ ಇದನ್ನು ಪಡೆಯಬಹುದು.ಪ್ರಸ್ತುತ ಇರುವ ಇ-ಸ್ಟ್ಯಾಂಪ್ ವ್ಯವಸ್ಥೆಯನ್ನು ಹಂತ ಹಂತವಾಗಿ ನಿಲ್ಲಿಸಲಾಗುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಸ್ಟ್ಯಾಂಪಿಂಗ್‌ನಲ್ಲಿ ದಕ್ಷತೆ, ಪಾರದರ್ಶಕತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಡಿಜಿಟಲ್ ಇ-ಸ್ಟ್ಯಾಂಪ್ ಅನ್ನು ಕರ್ನಾಟಕದಲ್ಲಿ ಪರಿಚಯಿಸಲಾಗಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಸ್ಟ್ಯಾಂಪಿಂಗ್‌ನಲ್ಲಿ (stamp paper) ದಕ್ಷತೆ, ಪಾರದರ್ಶಕತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ರಾಜ್ಯ ಸರ್ಕಾರವು ಡಿಜಿಟಲ್ ಇ-ಸ್ಟ್ಯಾಂಪ್ (Digital e-Stamp) ಅನ್ನು ಪರಿಚಯಿಸಿದೆ. ಇದನ್ನು ಪಡೆಯಲು ಯಾವುದೇ ಮಧ್ಯವರ್ತಿಗಳನ್ನು ಅವಲಂಬಿಸಬೇಕಾಗಿಲ್ಲ. ಎಲ್ಲಿ, ಯಾವಾಗ ಬೇಕಾದರೂ ಇದನ್ನು ಪಡೆದುಕೊಳ್ಳಬಹುದಾಗಿದೆ. ದಿನದಲ್ಲಿ 24 ಗಂಟೆಯೂ ಈ ಸೇವೆ ಅನ್ ಲೈನ್ ನಲ್ಲಿ ಲಭ್ಯವಿರುತ್ತದೆ. ವಿಶ್ವದ ಯಾವುದೇ ಮೂಲೆಯಲ್ಲಿ ಕುಳಿತು ಬೇಕಾದರೂ ಡಿಜಿಟಲ್ ಇ- ಸ್ಟ್ಯಾಂಪ್ (e-stamp) ಸೇವೆಯನ್ನು ಬಳಸಬಹುದಾಗಿದೆ. ಸ್ಟ್ಯಾಂಪ್ ಪೇಪರ್‌ಗಳ ಬಳಕೆಯಲ್ಲಿ ನಕಲಿ ಹಾವಳಿಯನ್ನು (fake e-stamp) ತಪ್ಪಿಸಲು ಸರ್ಕಾರವು ಈ ಕ್ರಮ ಕೈಗೊಂಡಿದೆ.

ಸ್ಟ್ಯಾಂಪ್ ಪೇಪರ್‌ಗಳ ಬಳಕೆಯಲ್ಲಿ ನಡೆದ ಅತೀ ದೊಡ್ಡ ಟೆಲ್ಗಿ ಹಗರಣದ ಬಳಿಕ ರಾಜ್ಯದಲ್ಲಿ ಭೌತಿಕ ಸ್ಟ್ಯಾಂಪ್ ಪೇಪರ್‌ಗಳ ಬಳಕೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಬಳಿಕ ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಮೂಲಕ ರಾಜ್ಯಾದ್ಯಂತ ಸ್ಟ್ಯಾಂಪ್ ಪೇಪರ್‌ಗಳನ್ನು ನೀಡಲು ಕ್ರಮ ಕೈಗೊಳ್ಳಲಾಯಿತು. ಆದರೆ ಇದರಲ್ಲಿ ಉಂಟಾದ ಕೆಲವೊಂದು ಅನಾನುಕೂಲತೆಯಿಂದಾಗಿ ಇ- ಸ್ಟ್ಯಾಂಪ್ ಸೇವೆಗೆ ಒತ್ತು ನೀಡಲಾಗುತ್ತಿದೆ.

ಬಿ ಖಾತಾ ಇಂದ ಎ ಖಾತಾ: ಪ್ರಾಪರ್ಟಿಯ ಖಾತಾ ಬದಲಾವಣೆಗೆ ಸರಳ ಮಾರ್ಗ!

ಈ ಕುರಿತು ಸೋಮವಾರ ಮಾಹಿತಿ ನೀಡಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನೀಡುತ್ತಿರುವ ಇ-ಸ್ಟ್ಯಾಂಪ್ ಪ್ರಮಾಣಪತ್ರಗಳನ್ನು ನಕಲು ಮಾಡಬಹುದಾಗಿದೆ. ಹೀಗಾಗಿ ಒಂದು ಉದ್ದೇಶಕ್ಕಾಗಿ ಖರೀದಿ ಮಾಡಿದ ಸ್ಟ್ಯಾಂಪ್ ಪೇಪರ್‌ಗಳನ್ನು ಬೇರೆ ಉದ್ದೇಶಕ್ಕೆ ಬಳಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದು ಕಡಿಮೆ ಸ್ಟ್ಯಾಂಪ್ ಡ್ಯೂಟಿ ಪಾವತಿಸಲು ಅವಕಾಶ ಮಾಡಿಕೊಡುತ್ತದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಲಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಪ್ರಸ್ತುತ ಡಿಜಿಟಲ್ ನೋಂದಣಿಗೆ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿ ಡಿಜಿಟಲ್ ಸ್ಟ್ಯಾಂಪಿಂಗ್ ವ್ಯವಸ್ಥೆಗೆ ಆದ್ಯತೆ ನೀಡಲಾಗುತ್ತಿದೆ. ಇದು ಸ್ಟ್ಯಾಂಪ್ ಪೇಪರ್‌ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ರಾಜ್ಯ ಸರ್ಕಾರವು 2025ರ ಕರ್ನಾಟಕ ಸ್ಟ್ಯಾಂಪ್ ತಿದ್ದುಪಡಿ ಕಾಯ್ದೆಯನ್ನು ಹೊರಡಿಸಿದ್ದು, ಇದರಿಂದಾಗಿ ಇ-ಸ್ಟ್ಯಾಂಪ್ ವ್ಯವಸ್ಥೆಯನ್ನು ಹಂತ ಹಂತವಾಗಿ ನಿಲ್ಲಿಸುವ ಯೋಜನೆ ರೂಪಿಸಲಾಗಿದೆ.

ಇಡೀ ದೇಶಕ್ಕೆ ಮಾದರಿ ಈ ಗ್ರಾಮ- ಉದ್ಯಮಿ ಆನಂದ್ ಮಹೀಂದ್ರಾ ಶೇರ್ ಮಾಡಿದ ವಿಡಿಯೊದಲ್ಲಿ ಏನಿದೆ?

ಏನು ಪ್ರಯೋಜನ?

ಇ- ಸ್ಟ್ಯಾಂಪ್ ಸೇವೆಯಿಂದ ಅನೇಕ ಪ್ರಯೋಜನಗಳಿವೆ. ಮುಖ್ಯವಾಗಿ ಇದು ಸಂಪೂರ್ಣವಾಗಿ ಡಿಜಿಟಲ್ ಸೇವೆಯಲ್ಲಿ ಮಾತ್ರ ಲಭ್ಯವಾಗಲಿದೆ. 24x7 ಲಭ್ಯವಿರುವ ಪಾವತಿ ಸೌಲಭ್ಯದಿಂದಾಗಿ ವೇಗವಾಗಿ ಮತ್ತು ಸುರಕ್ಷಿತವಾಗಿ ಈ ಸೇವೆಯನ್ನು ಬಳಸಬಹುದಾಗಿದೆ. ದಿನದಲ್ಲಿ ಯಾವಾಗ ಬೇಕಾದರೂ, ಎಲ್ಲಿಂದ ಬೇಕಾದರೂ ಇದನ್ನು ಪಡೆಯಬಹುದಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿಗಳು ಉಳಿತಾಯವಾಗಲಿದೆ. ಪಾವತಿಯಲ್ಲಿ ವಂಚನೆಯನ್ನು ತಡೆಯಬಹುದು. ಅಲ್ಲದೇ ಎಲ್ಲಾದರೂ ಕಳೆದು ಹೋದರೂ ಕೂಡ ಇದನ್ನು ಡಿಜಿಟಲ್ ವ್ಯವಸ್ಥೆಯಲ್ಲಿ ಮರಳಿ ಪಡೆಯಲು ಸಾಧ್ಯವಿದೆ.

ವಿದ್ಯಾ ಇರ್ವತ್ತೂರು

View all posts by this author