ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

MLA Swaroop Prakash: ಕಮಿಷನ್‌ಗೆ ಬೇಡಿಕೆ ವಿಡಿಯೊ ವೈರಲ್‌; ಜೆಡಿಎಸ್ ಶಾಸಕ ಸ್ವರೂಪ್ ಪ್ರಕಾಶ್‌ಗೆ ಪಕ್ಷದ ವರಿಷ್ಠರಿಂದ ನೋಟಿಸ್‌

Sting video: ಗುತ್ತಿಗೆದಾರರ ಜತೆ ಮಾತುಕತೆ ವೇಳೆ ಸ್ವರೂಪ್ ಪ್ರಕಾಶ್ ಶೇ. 8ರಷ್ಟು ಕಮಿಷನ್‌ಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗುತ್ತಿಗೆದಾರರು ಶೇ 5ರಷ್ಟು ನೀಡುವುದಾಗಿ ಹೇಳಿದ್ದು, ಅದಕ್ಕೆ ಶಾಸಕ ಒಪ್ಪಿಕೊಂಡಿರುವುದು ವಿಡಿಯೊದಲ್ಲಿದೆ. ಜತೆಗೆ ಕೈಯಲ್ಲಿ ಹಣ ಪಡೆದಿರುವುದೂ ಸ್ಟಿಂಗ್ ಆಪರೇಷನ್‌ ವಿಡಿಯೊದಲ್ಲಿ ಸೆರೆಯಾಗಿದೆ.

ಹಾಸನ: ಜೆಡಿಎಸ್ ಶಾಸಕ ಸ್ವರೂಪ್ ಪ್ರಕಾಶ್ (MLA Swaroop Prakash) ಅವರಿಗೆ ಸಂಬಂಧಿಸಿದೆ ಎನ್ನಲಾದ ಖಾಸಗಿ ನ್ಯೂಸ್‌ ಚಾನೆಲ್‌ನ ಸ್ಟಿಂಗ್ ಆಪರೇಷನ್‌ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಕಾಮಗಾರಿಗೆ ಸಂಬಂಧಿಸಿ ಕಮಿಷನ್ ಮಾತುಕತೆ ಹಾಗೂ ಹಣ ಪಡೆಯುವ ದೃಶ್ಯಗಳು ವಿಡಿಯೊದಲ್ಲಿವೆ. ಈ ಹಿನ್ನೆಲೆಯಲ್ಲಿ ಜೆಡಿಎಸ್‌ ವರಿಷ್ಠರಿಂದ ಶಾಸಕನಿಗೆ ನೋಟಿಸ್‌ ನೀಡಲಾಗಿದೆ.

ಗುತ್ತಿಗೆದಾರರ ಜತೆ ಮಾತುಕತೆ ವೇಳೆ ಸ್ವರೂಪ್ ಪ್ರಕಾಶ್ ಶೇ. 8ರಷ್ಟು ಕಮಿಷನ್‌ಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗುತ್ತಿಗೆದಾರರು ಶೇ 5ರಷ್ಟು ನೀಡುವುದಾಗಿ ಹೇಳಿದ್ದು, ಅದಕ್ಕೆ ಶಾಸಕ ಒಪ್ಪಿಕೊಂಡಿರುವುದು ವಿಡಿಯೊದಲ್ಲಿದೆ. ಜತೆಗೆ ಕೈಯಲ್ಲಿ ಹಣ ಪಡೆದಿರುವುದೂ ಸ್ಟಿಂಗ್ ಆಪರೇಷನ್‌ನಲ್ಲಿ ಸೆರೆಯಾಗಿದೆ.

ಕಮಿಷನ್ ಆರೋಪದ ವಿಡಿಯೊ ಪ್ರಕರಣಕ್ಕೆ ಸಂಬಂಧಿಸಿ ಜೆಡಿಎಸ್ ವರಿಷ್ಠರು ಸ್ವರೂಪ್ ಪ್ರಕಾಶ್ ಅವರಿಗೆ ನೋಟಿಸ್‌ ನೀಡಿದ್ದಾರೆ. ಅವರ ಉತ್ತರ ಬಂದ ಬಳಿಕ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ತಿಳಿಸಿದ್ದಾರೆ.

ಬೊಕ್ಕಸ ಭರ್ತಿಗೆ ಇಡೀ KMF ಅನ್ನೇ ಗುತ್ತಿಗೆ ಪಡೆದ ಕಾಂಗ್ರೆಸ್ ಸರ್ಕಾರ: ಪ್ರಲ್ಹಾದ್‌ ಜೋಶಿ ಆಕ್ರೋಶ

ಶಾಸಕನ ರಾಜೀನಾಮೆಗೆ ಕಾಂಗ್ರೆಸ್‌ ಆಗ್ರಹ

ಹಾಸನ ಶಾಸಕ ಸ್ವರೂಪ್ ಪ್ರಕಾಶ್ ಅವರಿಗೆ ಸಂಬಂಧಿಸಿದೆ ಎನ್ನಲಾದ ಕಮಿಷನ್ ಆರೋಪದ ವಿಡಿಯೊ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಶಾಸಕ ಸ್ವರೂಪ್ ಪ್ರಕಾಶ್ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಹಾಸನ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬನವಾಸೆ ರಂಗಸ್ವಾಮಿ ಆಗ್ರಹಿಸಿದ್ದಾರೆ.