ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Actress Ranya Rao: ಹಾಸನಾಂಬೆ ದರ್ಶನ ಪಡೆದ ನಟಿ ರನ್ಯಾ ರಾವ್; ಚಿನ್ನ ಕಳ್ಳ ಸಾಗಣೆ ಆರೋಪಿಗೆ ವಿಐಪಿ ಪ್ರೋಟೋಕಾಲ್‌ ನೀಡಿದ್ದಕ್ಕೆ ಭಾರಿ ಟೀಕೆ

ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧನವಾಗಿ, ಸದ್ಯ ಜಾಮೀನಿನ ಮೇಲೆ ಹೊರಗಿರುವ ನಟಿ, ಅಧಿಕೃತ ಶಿಷ್ಟಾಚಾರದ ಸೌಲಭ್ಯ ಬಳಸಿಕೊಂಡು ಹಾಸನಾಂಬೆ ದೇವಾಲಯಕ್ಕೆ ಆಗಮಿಸಿ ದೇವಿಯ ದರ್ಶನ ಮಾಡಿದ್ದಾರೆ. ಆರೋಪಿಗೆ ಪ್ರೊಟೋಕಾಲ್ ದರ್ಶನ ನೀಡಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಹಾಸನ: ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ, ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟಿ ರನ್ಯಾ ರಾವ್ (Actress Ranya Rao) ಇಂದು ಹಾಸನಾಂಬೆ ದೇವಿಯ ದರ್ಶನ ಪಡೆದಿದ್ದಾರೆ. ಆದರೆ, ನಟಿಗೆ ಸರ್ಕಾರಿ ಸಿಬ್ಬಂದಿ ಹಾಗೂ ಪೊಲೀಸರ ನೆರವಿನೊಂದಿಗೆ ವಿಶೇಷ ಶಿಷ್ಟಾಚಾರದ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿರುವುದು ಸಾರ್ವಜನಿಕ ವಲಯದಿಂದ ಭಾರಿ ಟೀಕೆ ವ್ಯಕ್ತವಾಗಿದೆ.

Actress Ranya Rao  (1)

ತಂದೆ, ನಿವೃತ್ತ ಡಿಜಿಪಿ ರಾಮಚಂದ್ರರಾವ್ ಹಾಗೂ ಕುಟುಂಬ ಸದಸ್ಯರೊಂದಿಗೆ ಹಾಸನಕ್ಕೆ ಭೇಟಿ ನೀಡಿದ್ದ ರನ್ಯಾ ರಾವ್, ನಗರದ ಪ್ರವಾಸಿ ಮಂದಿರದಿಂದ ಹಾಸನಾಂಬೆ ದೇವಾಲಯಕ್ಕೆ ಶಿಷ್ಟಾಚಾರದ ವಾಹನದಲ್ಲಿ ತೆರಳಿ ದರ್ಶನ ಪಡೆದರು. ಈ ವೇಳೆ ಪೊಲೀಸ್ ಸಿಬ್ಬಂದಿ ಸಿಬ್ಬಂದಿ ಭದ್ರತೆ ಒದಗಿಸಿದ್ದರು.

Actress Ranya Rao  (2)

ಹಾಸನಾಂಬೆ ದರ್ಶನಕ್ಕಾಗಿ ಸಾವಿರಾರು ಭಕ್ತರು ಸುದೀರ್ಘ ಸಮಯ ಕಾಯುತ್ತಿರುವ ಸಂದರ್ಭದಲ್ಲಿ, ಗಂಭೀರ ಆರೋಪ ಎದುರಿಸಿರುವ ನಟಿಗೆ ಶಿಷ್ಟಾಚಾರದ ವಿಐಪಿ ದರ್ಶನ ವ್ಯವಸ್ಥೆ ಕಲ್ಪಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಶಿಷ್ಟಾಚಾರಕ್ಕೆ ನಿಯಮಾನುಸಾರ ಅವಕಾಶವಿದೆಯೇ? ಸಾಮಾನ್ಯ ಭಕ್ತರಿಗೂ ಇದೇ ರೀತಿಯ ಆದ್ಯತೆ ಸಿಗಬೇಕಲ್ಲವೇ? ಎಂದು ಜಿಲ್ಲಾಡಳಿತದ ವಿರುದ್ಧ ಭಕ್ತರು ಅಸಮಾಧಾನ ಹೊರಹಾಕಿದ್ದಾರೆ.

ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲುವಾಸ ಅನುಭವಿಸಿದ್ದ ರನ್ಯಾ ರಾವ್, ಜಾಮೀನು ದೊರೆತಿದ್ದರೂ COFEPOSA ಕಾಯ್ದೆಯಡಿ ಬಂಧನ ಮುಂದುವರಿದಿತ್ತು. ಒಂದು ವರ್ಷದ ಬಂಧನ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ 2026ರ ಏಪ್ರಿಲ್‌ನಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದರು. ಇದೀಗ ತಂದೆ ಹಾಗೂ ಕುಟುಂಬದವರೊಂದಿಗೆ ಹಾಸನಕ್ಕೆ ಆಗಮಿಸಿ ಹಾಸನಾಂಬೆ ದೇವಿಯ ದರ್ಶನ ಪಡೆದಿರುವುದು ಸಾರ್ವಜನಿಕರ ಗಮನ ಸೆಳೆದಿದೆ. ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಬಳಿಕ ಇದೇ ಮೊದಲ ಬಾರಿಗೆ ರನ್ಯಾ ರಾವ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.