ಹಾಸನ, ಫೆ.23: ಬುಲೆಟ್ ಬೈಕ್ (bullet bike) ಚಲಾಯಿಸುತ್ತಿದ್ದಾಗ ರಸ್ತೆ ಉಬ್ಬು (road humps) ಕಾಣದೇ ಬೈಕ್ ಎಗರಿ (road accident) ಬಿದ್ದಿದ್ದು, ಚಲಾಯಿಸುತ್ತಿದ್ದ ಯುವತಿಯರು ರಸ್ತೆಗೆ ಹಾರಿ ಬಿದ್ದ ಪರಿಣಾಮ ಒಬ್ಬಾಕೆ ಯುವತಿ ಸಾವನ್ನಪ್ಪಿದ್ದಾಳೆ. ಮತ್ತೊಬ್ಬಳು ಗಂಭೀರವಾಗಿ ಗಾಯಗೊಂಡಿದ್ದಾಳೆ. ಈ ಘಟನೆ ಹಾಸನ (Hassan news) ನಗರ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಸತ್ಯಮಂಗಲ ಬಡಾವಣೆಯ ಪ್ರಿಯಾ (23) ಮೃತ ಯುವತಿ. ಮತ್ತೋರ್ವ ಯುವತಿ ಸ್ವಾತಿ (24) ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಪ್ರಿಯಾ ಖಾಸಗಿ ಕಾಲೇಜಿನಲ್ಲಿ ಎಂಸಿಎ ಫೈನಲ್ ಇಯರ್ ಓದುತ್ತಿದ್ದಳು. ಸ್ವಾತಿಗೆ ಕಳೆದ ನವೆಂಬರ್‌ನಲ್ಲಿ ಮದುವೆಯಾಗಿತ್ತು ಎಂದು ತಿಳಿದುಬಂದಿದೆ.
ಇಬ್ಬರು ಯುವತಿಯರು ಹೆಲ್ಮೆಟ್ ಧರಿಸದೇ ಬುಲೆಟ್ ಬೈಕ್‌ನಲ್ಲಿ ಹೊರಟಿದ್ದರು. ಪ್ರಿಯಾ ಬೈಕ್ ಚಲಾಯಿಸುತ್ತಿದ್ದು, ಸ್ವಾತಿ ಹಿಂಬದಿ ಸೀಟ್‌ನಲ್ಲಿ ಕುಳಿತಿದ್ದಳು. ಈ ವೇಳೆ ಹಂಪ್ಸ್ ಕಾಣದೇ ಇಬ್ಬರೂ ರಸ್ತೆಗೆ ಚಿಮ್ಮಿ ಬಿದ್ದಿದ್ದಾರೆ. ಹೆಲ್ಮೆಟ್ ಧರಿಸದ ಪರಿಣಾಮ ತಲೆಗೆ ಏಟು ಬಿದ್ದು ಪ್ರಿಯಾ ಮೃತಪಟ್ಟಿದ್ದಾಳೆ. ಸ್ವಾತಿ ಸ್ಥಿತಿ ಗಂಭೀರವಾಗಿದೆ. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಸ್ವಾತಿಯನ್ನು ಬೆಂಗಳೂರಿನ ಆಸ್ಪತ್ರೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Road Accident: ಭೀಕರ ರಸ್ತೆ ಅಪಘಾತ, ಟ್ರ್ಯಾಕ್ಟರ್ ಪಲ್ಟಿಯಾಗಿ ಮಗು ಸೇರಿ ನಾಲ್ವರು ಸಾವು
ಮದುವೆಯ ಆಮಿಷವೊಡ್ಡಿ ಯುವಕನಿಗೆ 21.22 ಲಕ್ಷ ರೂ. ವಂಚನೆ
ಬೆಂಗಳೂರು : ಮದುವೆ ಹೆಸರಿನಲ್ಲಿ ಕ್ರಿಪ್ಟೋದಲ್ಲಿ ಹಣ ಹೂಡಿಕೆ ಮಾಡಿಸಿ ವಂಚನೆ ಯುವಕನೊಬ್ಬನಿಗೆ ಎಸಗಲಾಗಿದೆ. ಯುವತಿಯೊಬ್ಬಳು ಯುವಕನಿಗೆ ಮದುವೆ ಹೆಸರಲ್ಲಿ 21.22 ಲಕ್ಷ ರೂ. ವಂಚಿಸಿದ್ದಾಳೆ. ಬೆಂಗಳೂರಿನ ಟಿ ದಾಸರಹಳ್ಳಿ ಮೂಲದ ಯುವಕನಿಗೆ ಧೋಖಾ ಮಾಡಿದ್ದಾಳೆ.
ಮ್ಯಾಟ್ರಿಮೋನಿಯಲ್ಲಿ ವಧು ಹುಡುಕುತ್ತಿದ್ದ ಸಿ.ಎಸ್ ರಾಕೇಶ್ ಎಂಬ ಯುವಕನಿಗೆ ಶಿರಿಷ ಎಂಬಾಕೆ ಪರಿಚಯವಾಗಿದ್ದಳು. ಇಬ್ಬರು ಪರಸ್ಪರ ಸ್ನೇಹಿತರಾಗಿ ಫೋನ್ ಕಾಂಟ್ಯಾಕ್ಟ್‌ನಲ್ಲಿದ್ದರು. ನಂತರ ಮದುವೆಯಾಗೋಣ ಎಂದು ಯುವಕನಿಗೆ ಶಿರೀಶ ಆಮಿಷ ಒಡ್ಡಿದ್ದಾಳೆ. ಕ್ರಿಪ್ಟೋದಲ್ಲಿ ಟ್ರೇಡಿಂಗ್ ಮಾಡಲು ಹೇಳಿದ್ದಳು. ವೆಬ್ಸೈಟ್ ಲಿಂಕ್ ಹಾಗೂ ಬ್ಯಾಂಕ್ ಖಾತೆ ನೀಡಿ ಹಣ ಹೂಡಿಕೆ ಮಾಡಲು ಹೇಳಿದ್ದಾಳೆ.
mysterious death: ಕರ್ನಾಟಕದ ಇನ್ನೊಬ್ಬ ಯುವಕ ಐರ್ಲೆಂಡ್‌ನಲ್ಲಿ ನಿಗೂಢ ಸಾವು
ಕೆಲ ದಿನಗಳ ಕಾಲ ಲಾಭದ ಅಂಶ ತೋರಿಸಿದ್ದ ಶಿರೀಷ ನಂತರ ಹಣ ಡ್ರಾ ಮಾಡಲು ಕಮಿಷನ್ ಕಟ್ಟಬೇಕು ಎಂದು ಸೂಚನೆ ನೀಡಿದ್ದಾಳೆ. ಹಂತ ಹಂತವಾಗಿ 21. 22 ಲಕ್ಷ ರೂಪಾಯಿ ಹಾಕಿಸಿಕೊಂಡು ವಂಚನೆ ಎಸಗಿದ್ದಾಳೆ. ಬಳಿಕ ಹೂಡಿಕೆ ಮಾಡಿದ ಹಣ ನೀಡದೆ, ಲಾಭವೂ ನೀಡದೆ ವಂಚನೆ ಎಸಗಿದ್ದಾಳೆ. ಮೋಸ ಹೋದ ವಿಚಾರ ತಿಳಿದು ಇದೀಗ ಯುವಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಉತ್ತರ ವಿಭಾಗದ ಸೆನ್ ಠಾಣೆಗೆ ಸಿಎಸ್ ರಾಕೇಶ್ ದೂರು ನೀಡಿದ್ದಾನೆ. ಎಫ್ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.