ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hassan News: ತಾಳಿ‌ ಕಟ್ಟುವ ವೇಳೆ ಫೋನ್‌ ಕಾಲ್‌; ಮದುವೆ ಬೇಡ ಎಂದು ಹೊರನಡೆದ ವಧು!

Hassan News: ಮುಹೂರ್ತದ ವೇಳೆ ಪ್ರಿಯಕರನಿಂದ ಯುವತಿಗೆ ದೂರವಾಣಿ ಕರೆ ಬಂದಿದ್ದು, ತಕ್ಷಣವೇ ಮದುವೆ ಬೇಡ ಎಂದು ಯುವತಿ ನಿರಾಕರಿಸಿದ್ದಾಳೆ. ಯುವತಿ ಹಠ ಮಾಡಿದ್ದಕ್ಕೆ ವರ ಕೂಡ ನನಗೂ ಈ ಮದುವೆ ಬೇಡ ಎಂದು ಕಣ್ಣೀರಿಡುತ್ತಾ ಹೋಗಿದ್ದಾನೆ.

ತಾಳಿ‌ ಕಟ್ಟುವ ವೇಳೆ ಮದುವೆ ಬೇಡ ಎಂದು ಹೊರನಡೆದ ವಧು!

Prabhakara R Prabhakara R May 23, 2025 4:13 PM

ಹಾಸನ: ತಾಳಿ‌ ಕಟ್ಟುವ ಸಮಯದಲ್ಲಿ ಮದುವೆ ಬೇಡ ಎಂದು ಹಸೆಮಣೆಯಿಂದ ವಧು ಹೊರ ನಡೆದಿರುವುದು ನಗರದ (Hassan News) ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೇನೆಂದು ವಧು ಮದುವೆ ನಿರಾಕರಿಸಿದ್ದಾಳೆ. ಹಾಸನ ತಾಲೂಕಿನ ಬೂವನಹಳ್ಳಿ ಗ್ರಾಮದ ಯುವತಿ ಹಾಗೂ ಆಲೂರು ತಾಲೂಕಿನ ಯುವಕನ ಜತೆ ಮದುವೆ ನಿಶ್ಚಯವಾಗಿತ್ತು. ವರ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವಧು ತಲೆ ಅಲ್ಲಾಡಿಸುತ್ತಾ ನನಗೆ ಮದುವೆ ಬೇಡ ಎಂದು ಹೇಳಿದ್ದಾಳೆ.

ಮುಹೂರ್ತದ ವೇಳೆ ಪ್ರಿಯಕರನಿಂದ ಯುವತಿಗೆ ದೂರವಾಣಿ ಕರೆ ಬಂದಿದ್ದು, ತಕ್ಷಣವೇ ಮದುವೆ ಬೇಡ ಎಂದು ಯುವತಿ ನಿರಾಕರಿಸಿದ್ದಾಳೆ. ಯುವತಿ ಹಠ ಮಾಡಿದ್ದಕ್ಕೆ ವರ ಕೂಡ ನನಗೂ ಈ ಮದುವೆ ಬೇಡ ಎಂದು ಕಣ್ಣೀರಿಡುತ್ತಾ ಹೋಗಿದ್ದಾನೆ. ಹೆತ್ತವರು, ಸಂಬಂಧಿಕರು ಯಾರು ಏನೇ ಹೇಳಿದರೂ ಕೇಳದ ವಧು, ರೂಮ್‌ಗೆ ಹೋಗಿ ಮದುವೆ ಬೇಡವೇ ಬೇಡ ಎಂದು ಹಠ ಹಿಡಿದಿದ್ದಾಳೆ.

ವಧು ಮದುವೆ ಬೇಡ ಎಂದಾಗ ಕೈಯಲ್ಲಿ ತಾಳಿ ಹಿಡಿದಿದ್ದ ವರ ಯಾಕೆ ಮದುವೆ ಬೇಡ ಎಂದು ಕೇಳಿದ್ದಾನೆ. ಕೊನೆಗೆ ಹಠ ಹಿಡಿದ ಬೆನ್ನಲ್ಲೇ ವರ ಕೂಡ ನನಗೂ ಮದುವೆ ಬೇಡ ಎನ್ನುತ್ತಾ ಕಣ್ಣೀರು ಹಾಕಿದ್ದಾನೆ. ಮಗಳು ಮದುವೆ ಬೇಡ ಎಂದಿದ್ದಕ್ಕೆ ಪೋಷಕರು ಸಹ ಕಣ್ಣೀರಿಟ್ಟಿದ್ದಾರೆ. ಕಲ್ಯಾಣ ಮಂಟಪದಲ್ಲಿ ಮದುವೆ ನೋಡಲು ಬಂದಿದ್ದ ನೂರಾರು ಸಂಬಂಧಿಕರು ಹುಡುಗಿಯ ಮಾತಿಗೆ ಶಾಕ್ ಆಗಿದ್ದಾರೆ. ತಾಳಿ ಕಟ್ಟಲು ಬಂದಾಗಲೇ ಹುಡುಗಿ ಮತ್ತೊಬ್ಬ ಹುಡುಗನನ್ನು ಪ್ರೀತಿಸುವ ವಿಚಾರ ತಂದೆ, ತಾಯಿಗೆ ಗೊತ್ತಾಗಿದೆ. ಇದರಿಂದ ಹುಡುಗಿ ಮನೆಯವರು ಈಗ ಕಣ್ಣೀರು ಹಾಕಿದ್ದಾರೆ.

ಈ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಮಾತನಾಡಿ, ತಾಳಿ ಕಟ್ಟಬೇಕಾದರೆ ವಧು ತಲೆ ಅಲ್ಲಾಡಿಸಿದಳು. ಆಗ ಪಾಪ ಮದುಮಗ ಮದುವೆ ಆಗ್ತಿಯಾ ಎಂದು ಕೇಳಿದ. ಆಕೆ ಇಲ್ಲ ಎಂದಳು. ಮದುಮಗ ತುಂಬಾ ಒಳ್ಳೆಯ ಹುಡುಗ. ಸರ್ಕಾರಿ ಶಾಲೆಯ ಶಿಕ್ಷಕನಾಗಿರುವ ಹುಡುಗ ಕೂಡ ಕಣ್ಣೀರು ಹಾಕಿದ. ಮದುವೆ ಹುಡುಗಿ ಹೀಗೆ ಮಾಡಬಾರದಿತ್ತು ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Madenuru Manu Case: ನನ್ನ ಗಂಡ ಬೆಳೀತಿದ್ದಾನೆ ಎಂದು ಷಡ್ಯಂತ್ರ: ಮಡೆನೂರು ಮನು‌ ಪತ್ನಿ ಆರೋಪ

ಕಲ್ಯಾಣ ಮಂಟಪಕ್ಕೆ ಹಾಸನ ಪೊಲೀಸರು ಭೇಟಿ ನೀಡಿ ಹುಡುಗ, ಹುಡುಗಿ ಹಾಗೂ ಸಂಬಂಧಿಕರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಮುರಿದು ಬಿದ್ದ ಮದುವೆ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ನನ್ನ ಗಂಡ ಬೆಳೀತಿದ್ದಾನೆ ಎಂದು ಷಡ್ಯಂತ್ರ: ಮಡೆನೂರು ಮನು‌ ಪತ್ನಿ ಆರೋಪ

Madenuru Manu's wife

ಬೆಂಗಳೂರು: ನನ್ನ ಗಂಡ ಬೆಳೀತಿದ್ದಾನೆ ಎಂದು ಷಡ್ಯಂತ್ರ ಮಾಡಲಾಗಿದೆ. ಬೇಕಂತಲೇ ನನ್ನ ಗಂಡನ ವಿರುದ್ಧ ಪಿತೂರಿ ಮಾಡಲಾಗಿದೆ. ಮಚ್ಚಾ ನೀನು ಬೆಳೀಬೇಕು ಎಂದು ಹೇಳುತ್ತಿದ್ದ ಗೆಳತಿ, ಈಗ ಯಾಕೆ ಆರೋಪ ಮಾಡಿದ್ದಾಳೆ. ಇದು ಬೇಕು ಅಂತಲೇ ಮಾಡಿರುವ ಆರೋಪ. ಆಕೆ ಬೇರೆಯವರ ಬಗ್ಗೆಯೂ ಇದೇ ರೀತಿ ಆರೋಪ ಮಾಡಿದ್ದಾಳೆ. ಅವರಿಬ್ಬರ ಸಂಬಂಧದ ಬಗ್ಗೆ ನನಗೇನು ಗೊತ್ತಿಲ್ಲ. ಆಕೆ ಹೇಳಿರೋದೆಲ್ಲ ಸುಳ್ಳು. ನನ್ನ ಗಂಡನಿಗೆ ನ್ಯಾಯ ಸಿಗುವ ತನಕ ಹೋರಾಡ್ತೀನಿ ಎಂದು ನಟ ಮಡೆನೂರು ಮನು (Madenuru Manu Case) ಪತ್ನಿ ದಿವ್ಯಾ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಅವರು, ಇವತ್ತು ನನ್ನ ಗಂಡ ಚಿತ್ರಕ್ಕಾಗಿ ಎಷ್ಟು ಕಷ್ಟ ಪಟ್ಟಿದ್ದಾರೆ. ರಿಲೀಸ್‌ ಸಮಯದಲ್ಲಿ ಅವರೇ ಇಲ್ಲ. ಈಗ ಅವರು ಪೊಲೀಸ್‌ ಠಾಣೆಯಲ್ಲಿ ಇದ್ದಾರೆ. ನನ್ನ ಗಂಡ ತಪ್ಪು ಮಾಡಿಲ್ಲ, ಹೀಗಾಗಿ ಗಂಡನನ್ನು ನಾನು ಬಿಟ್ಟುಕೊಡಲ್ಲ. ಸಾಕ್ಷ್ಯಗಳ ಸಮೇತವಾಗಿ ನಾವು ಕಾನೂನು ಹೋರಾಟ ನಡೆಸುತ್ತೇವೆ ಎಂದು ತಿಳಿಸಿದರು.

ನಾನು ರಾಜ್ಯದ ಜನರಲ್ಲಿ ಕೇಳಿಕೊಳ್ಳುವುದು ಒಂದೇ, ನನ್ನ ಗಂಡ ಚಿತ್ರಕ್ಕೋಸ್ಕರ ಮೂರು ವರ್ಷಗಳಿಂದ ಕಷ್ಟ ಪಟ್ಟಿದ್ದಾರೆ. ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳಲು ನಿರ್ಮಾಪಕರು, ನಿರ್ದೇಶಕರು ಸಾಕಷ್ಟು ಸಹಾಯ ಮಾಡಿದ್ದಾರೆ. ಹೀಗಾಗಿ ವೀಕ್ಷಕರು ಸಿನಿಮಾ ನೋಡಿ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ | Madenuru Manu: ಕಿರುತೆರೆ ನಟಿ ಮೇಲೆ ಅತ್ಯಾಚಾರ ಆರೋಪ; ನಟ ಮಡೆನೂರು ಮನು ಅರೆಸ್ಟ್