ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹಾಸನದಲ್ಲಿ ಘೋರ ಘಟನೆ; ಬಟ್ಟೆ ನೆನೆಸಿದ್ದ ಬಕೆಟ್‌ಗೆ ಬಿದ್ದು 8 ತಿಂಗಳ ಮಗು ಸಾವು

ಹಾಸನ ನಗರದ ವಲ್ಲಭಭಾಯಿ ರಸ್ತೆಯಲ್ಲಿ ಘಟನೆ ನಡೆದಿದೆ. ತಾಯಿ ಬಕೆಟ್‌ನಲ್ಲಿ ಬಟ್ಟೆ ನೆನೆಯಲು ಹಾಕಿ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ತೆವಳುತ್ತಾ ಹೋದ ಕಂದಮ್ಮ ಬಕೆಟ್‌ನಲ್ಲಿ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹಾಸನ: ಬಟ್ಟೆ ನೆನೆಸಿದ್ದ ಬಕೆಟ್‌ಗೆ ಬಿದ್ದು 8 ತಿಂಗಳ ಮಗು ಮೃತಪಟ್ಟಿರುವ ಘಟನೆ (Child Death) ಹಾಸನ ನಗರದ ವಲ್ಲಭಭಾಯಿ ರಸ್ತೆಯಲ್ಲಿ ನಡೆದಿದೆ. ಗಿರೀಶ್-ಚೈತ್ರಾ ದಂಪತಿಯ ಮೂರನೇ ಪುತ್ರಿ ಪುಷ್ಪಾಲೋಚನ ಮೃತ ಮಗು.

ಗಿರೀಶ್ ಚಿನ್ನ-ಬೆಳ್ಳಿ ಕೆಲಸ ಮಾಡುತ್ತಿದ್ದು, ದಂಪತಿಗೆ ಮೂವರು ಹೆಣ್ಣುಮಕ್ಕಳು. ಈ ಪೈಕಿ ಪುಷ್ಪಾಲೋಚನ ಮೂರನೆಯವಳು. ಚೈತ್ರಾ ಬಕೆಟ್‌ನಲ್ಲಿ ಬಟ್ಟೆ ನೆನೆಯಲು ಹಾಕಿ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ತೆವಳುತ್ತಾ ಬಂದ ಕಂದಮ್ಮ ಬಕೆಟ್‌ನಲ್ಲಿ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೆನ್‌ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಥಾರ್‌ ಜೀಪ್‌ ಹರಿದು 10 ವರ್ಷದ ಬಾಲಕಿ ದುರ್ಮರಣ

ಬೆಂಗಳೂರು: ಬೆಂಗಳೂರಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಥಾರ್ ಜೀಪ್ ಹರಿದು 10 ವರ್ಷದ ಬಾಲಕಿ ಲಿಖಿತ ಸಾವನಪ್ಪಿದ್ದಾಳೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬೀರವಾರ ಗ್ರಾಮದ ಬಳಿ ಒಂದು ಅಪಘಾತ ಸಂಭವಿಸಿದೆ.

ಬೆಂಗಳೂರಿನಲ್ಲಿ ಪತ್ನಿಯನ್ನು ಕೊಂದು ಶವವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿಟ್ಟು ಪರಾರಿಯಾದ ಪತಿ; ಐದು ದಿನಗಳ ಬಳಿಕ ಕೊಲೆ ರಹಸ್ಯ ಬಯಲಾಗಿದ್ದೇಗೆ?

ದೊಡ್ಡಮ್ಮ ಜತೆ ಬಾಲಕಿ ಶಾಲೆಗೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ನೆಲಮಂಗಲ ಮಾರ್ಗದಿಂದ ಥಾರ್ ಜೀಪ್ ಕುಣಿಗಲ್ ಕಡೆಗೆ ತೆರಳುತ್ತಿತ್ತು. ಈ ವೇಳೆ ಏಕಾಏಕಿ ಜೀಪ್ ಹರಿದ ಪರಿಣಾಮ 10 ವರ್ಷದ ಬಾಲಕಿ ಲಿಖಿತ ಸಾವನಪ್ಪಿದ್ದು, ಅದೃಷ್ಟವಶಾತ್ ದೊಡ್ಡಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.