ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Hate Speech Bill: ರಾಜ್ಯ ಸರಕಾರ vs ರಾಜ್ಯಪಾಲ: ದ್ವೇಷ ಭಾಷಣ ಬಿಲ್‌ಗೆ ಸಹಿ ಹಾಕದೇ ರಾಷ್ಟ್ರಪತಿಗೆ ಕಳಿಸಿದ ರಾಜ್ಯಪಾಲರು

ದ್ವೇಷ ಭಾಷಣದ ವ್ಯಾಖ್ಯಾನವೇ ಮಸೂದೆಯಲ್ಲಿ ಅಸ್ಪಷ್ಟವಾಗಿದೆ. ಮಸೂದೆಗೆ ಒಪ್ಪಿಗೆ ಕೊಡದಂತೆ 40ಕ್ಕೂ ಹೆಚ್ಚು ಮನವಿ ಬಂದಿರುವ ಬಗ್ಗೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಉಲ್ಲೇಖ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಂಗಳಕ್ಕೆ ರವಾನೆ ಮಾಡಿದ್ದಾರೆ. ರಾಷ್ಟ್ರಪತಿಗಳಿಗೆ ಬಿಲ್ ವರ್ಗಾವಣೆ ಮಾಡೋದಕ್ಕೆ ರಾಜ್ಯಪಾಲರು 29 ಕಾರಣಗಳನ್ನ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ, ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್

ಬೆಂಗಳೂರು, ಫೆ.03: ರಾಜ್ಯಪಾಲರು vs ಸರ್ಕಾರ (state vs governor) ನಡುವಿನ ಸಂಘರ್ಷ ಮತ್ತೆ ಉಲ್ಬಣಗೊಂಡಿದೆ. ಬೆಳಗಾವಿ ಅಧಿವೇಶನದಲ್ಲಿ (Belagavi Session) ಪಾಸ್ ಆಗಿದ್ದ ದ್ವೇಷ ಭಾಷಣ ಬಿಲ್‌ಗೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್ (Thawar Chand Gehlot) ಕೊಕ್ಕೆ ಹಾಕಿದ್ದಾರೆ. ದ್ವೇಷ ಭಾಷಣ ವಿಧೇಯಕವನ್ನು (Hate Speech Bill) ರಾಜ್ಯಪಾಲರು ಸಹಿ ಹಾಕದೇ ರಾಷ್ಟ್ರಪತಿಗಳ ಅಂಗಳಕ್ಕೆ ಕಳಿಸಿದ್ದಾರೆ. ಈ ಮೂಲಕ ಮತ್ತೆ ಸರ್ಕಾರ- ರಾಜ್ಯಪಾಲರ ನಡುವೆ ವಾರ್ ಶುರುವಾಗಿದೆ.

ದ್ವೇಷ ಭಾಷಣದ ವ್ಯಾಖ್ಯಾನವೇ ಮಸೂದೆಯಲ್ಲಿ ಅಸ್ಪಷ್ಟವಾಗಿದೆ. ಮಸೂದೆಗೆ ಒಪ್ಪಿಗೆ ಕೊಡದಂತೆ 40ಕ್ಕೂ ಹೆಚ್ಚು ಮನವಿ ಬಂದಿರುವ ಬಗ್ಗೆ ರಾಜ್ಯಪಾಲರು ಉಲ್ಲೇಖ ಮಾಡಿ ರಾಷ್ಟ್ರಪತಿ ಅಂಗಳಕ್ಕೆ ರವಾನೆ ಮಾಡಿದ್ದಾರೆ. ರಾಷ್ಟ್ರಪತಿಗಳಿಗೆ ಬಿಲ್ ವರ್ಗಾವಣೆ ಮಾಡೋದಕ್ಕೆ ರಾಜ್ಯಪಾಲರು 29 ಕಾರಣಗಳನ್ನ ನೀಡಿದ್ದಾರೆ. ಈ ಬಿಲ್ ಅಭಿವ್ಯಕ್ತಿ ಸ್ವಾತಂತ್ರ‍್ಯಕ್ಕೆ ಧಕ್ಕೆ ಎಂಬ ಉಲ್ಲೇಖ ಮಾಡಿದ್ದಾರೆ.

ಬಿಲ್ ವಾಪಸ್‌ಗೆ ಗವರ್ನರ್ ಕೊಟ್ಟ ಕಾರಣಗಳು

> ದ್ವೇಷ ಭಾಷಣದ ವ್ಯಾಖ್ಯಾನವೇ ಅಸ್ಪಷ್ಟವಾಗಿದೆ

> ಅರ್ಥಪೂರ್ಣ ಸಮಾಲೋಚನೆ ಮಾಡದೇ ಅಂಗೀಕಾರ

> ಮಸೂದೆ ಸಂಬಂಧ ಕೆಲವು ಕಾನೂನು ತೊಡಕುಗಳಿವೆ

> ಮಿತಿಮೀರಿದ ಮತ್ತು ಭಯಾನಕ ಪರಿಣಾಮಗಳನ್ನು ಬೀರಲಿವೆ

> ಅಭಿವ್ಯಕ್ತಿ ಸ್ವಾತಂತ್ರ್ಯ, ಮೂಲಭೂತ ಹಕ್ಕನ್ನು ಕಸಿಯುವ ಮುನ್ಸೂಚನೆ

> ಈ ಮಸೂದೆಯು ಉದ್ದೇಶಕ್ಕಿಂತ ಪರಿಣಾಮಕ್ಕೆ ಆದ್ಯತೆ ನೀಡಿರುತ್ತದೆ

> ಸತ್ಯವನ್ನು ಮಾತಾಡಿದ್ರೂ, ಬೌದ್ಧಿಕ ಟೀಕೆ ಮಾಡಿದ್ರೂ ಬಂಧಿಸಬಹುದಾಗಿದೆ

> ಅಭಿವ್ಯಕ್ತಿ ಸ್ವಾತಂತ್ರ‍್ಯದ ರಕ್ಷಣೆ ಒಬ್ಬ ವ್ಯಕ್ತಿ, ಸಮುದಾಯಕ್ಕೆ ಸೀಮಿತವಾಗಿರಬಾರದು

> ಇಡೀ ಸಮಾಜದ ಸಾಮೂಹಿಕ ಹಕ್ಕಾಗಿರಬೇಕು

> ಅಧಿಕಾರಿಗಳು ನಿರ್ಧರಿಸಿದರೆ ಯಾವುದೇ ಕಾರ್ಯಕ್ರಮ ನಿಷೇಧಿಸಬಹುದು

> ಮಸೂದೆಯಲ್ಲಿರುವ ಈ ಕ್ರಮ ಸರಿಯಲ್ಲ… ಎಂದು ಕಾರಣವನ್ನ ಉಲ್ಲೇಖಿಸಿದ ಗವರ್ನರ್ ದ್ವೇಷ ಭಾಷಣ ಬಿಲ್ ಅನ್ನು ಸಹಿ ಮಾಡದೇ ರಾಷ್ಟ್ರಪತಿ ಮುರ್ಮ ಅವರಿಗೆ ರವಾನೆ ಮಾಡಿದ್ದಾರೆ.

ರಾಜ್ಯಪಾಲ ನಡೆಗೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಕಾಂಗ್ರೆಸ್ ನಾಯಕರು ರಾಜ್ಯಪಾಲರ ನಡೆ ವಿರೋಧಿಸಿದ್ದು, ಬಿಜೆಪಿ ನಾಯಕರು ಸಮರ್ಥನೆ ಮಾಡಿಕೊಂಡಿದ್ದಾರೆ. ದ್ವೇಷ ಭಾಷಣ ನಾವು ಮಾಡೋದು ತಪ್ಪೇ ನೀವು ಮಾಡೋದು ತಪ್ಪೇ, ಅದಕ್ಕೆ ಬಿಲ್ ತಂದೆವು. ದ್ವೇಷ ಭಾಷಣ ಪಿತಾಮಹರು ರಾಜ್ಯದಲ್ಲಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಕುಟುಕಿದರೆ, ನೇರವಾಗಿ ಒಂದು ವರ್ಗವನ್ನ ಕಾನೂನಿನಲ್ಲಿ ಸಿಲುಕಿಸಲು ಬಿಲ್ ತಂದಿದ್ದರು. ಇದಕ್ಕೆ ನಾವು ವಿರೋಧಿಸಿದೆವು. ಹೀಗಾಗಿ ರಾಜ್ಯಪಾಲರು ದ್ವೇಷ ಭಾಷಣ ಬಿಲ್ ರಾಷ್ಟ್ರಪತಿಗಳಿಗೆ ಕಳಿಸಿದ್ದಾರೆ, ವಿಮರ್ಶೆ ಮಾಡಿ ಎಂದು ಹೇಳಿದ್ದಾರೆ ಅಂತ ಬಿಜೆಪಿ ಹೇಳ್ತಿದೆ.

Hate Speech Bill: 19 ವಿಧೇಯಕಗಳಿಗೆ ರಾಜ್ಯಪಾಲರ ಸಹಿ, ದ್ವೇಷ ಭಾಷಣ ಬಿಲ್‌ಗೆ ಅಂಕಿತವಿಲ್ಲ

ಹರೀಶ್‌ ಕೇರ

View all posts by this author