Haveri News: ʼರೀ ಡಾಬಾ ಬಂತು, ಊಟ ಮಾಡ್ರಿʼ ಎಂದ ಪತ್ನಿ; ಆಂಬ್ಯುಲೆನ್ಸ್‌ನಲ್ಲೇ ಎದ್ದು ಕೂತ ಸತ್ತ ಗಂಡ!
Haveri News: ಹಾವೇರಿ ಜಿಲ್ಲೆಯ ಬಂಕಾಪುರದಲ್ಲಿ ಇಂತಹದೊಂದು ವಿಸ್ಮಯಕಾರಿ ಘಟನೆ ನಡೆದಿದೆ. ಅಂತ್ಯಸಂಸ್ಕಾರಕ್ಕೆಂದು ಮೃತದೇಹವನ್ನು ಆಂಬ್ಯುಲೆನ್ಸ್‌ನಲ್ಲಿ ಊರಿಗೆ ಸಾಗಿಸುವಾಗ ಅಚ್ಚರಿ ರೀತಿಯಲ್ಲಿ ಸತ್ತ ವ್ಯಕ್ತಿ ದಿಢೀರನೆ ಎದ್ದು ಕುಳಿತಿದ್ದಾರೆ. ಹೀಗಾಗಿ ಆತನನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ತಪಾಸಣೆ ಮಾಡಿ, ಚಿಕಿತ್ಸೆ ನೀಡುತ್ತಿದ್ದಾರೆ.
![ಆಂಬ್ಯುಲೆನ್ಸ್‌ನಲ್ಲಿ ಹೋಗುತ್ತಿದ್ದಾಗ ದಿಢೀರನೆ ಎದ್ದು ಕೂತ ಸತ್ತ ವ್ಯಕ್ತಿ!](https://cdn-vishwavani-prod.hindverse.com/media/original_images/Haveri_News.jpg)
![Profile](https://vishwavani.news/static/img/user.png)
ಹಾವೇರಿ: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿರುವುದಾಗಿ ವೈದ್ಯರು ಖಚಿತ ಪಡಿಸಿದ್ದರು. ಹೀಗಾಗಿ ಅಂತ್ಯಸಂಸ್ಕಾರಕ್ಕೆಂದು ಮೃತದೇಹವನ್ನು ಆಂಬ್ಯುಲೆನ್ಸ್‌ನಲ್ಲಿ ಊರಿಗೆ ಸಾಗಿಸುವಾಗ ಅಚ್ಚರಿ ರೀತಿಯಲ್ಲಿ ಸತ್ತ ವ್ಯಕ್ತಿ ದಿಢೀರನೆ ಎದ್ದು ಕುಳಿತಿದ್ದಾರೆ. ಹೌದು, ಜಿಲ್ಲೆಯ ಬಂಕಾಪುರದಲ್ಲಿ ಇಂತಹದೊಂದು ವಿಸ್ಮಯಕಾರಿ ಘಟನೆ (Haveri News) ನಡೆದಿದೆ. ಆಂಬ್ಯುಲೆನ್ಸ್‌ನಲ್ಲಿ ಪಕ್ಕದಲ್ಲೇ ಕುಳಿತು ಗೋಳಾಡುತ್ತಿದ್ದ ಪತ್ನಿ, ಡಾಬಾದ ಬಳಿ ಊಟ ಮಾಡುತ್ತೀಯ? ಎಂದು ಹೇಳಿ ಕಣ್ಣೀರಿಟ್ಟಿದ್ದಾಳೆ. ಈ ವೇಳೆ ಮೃತ ಗಂಡನಿಗೆ ಜೀವ ಬಂದಿದೆ. ಹೀಗಾಗಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದಾಗ, ವ್ಯಕ್ತಿ ಬದುಕಿರೋದಾಗಿ ವೈದ್ಯರು ಧೃಡಪಡಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ನಂತರ ಆತನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಬಂಕಾಪುರದ ಮಂಜುನಾಥ್ ನಗರದ ನಿವಾಸಿಯಾದ ಬಿಷ್ಣಪ್ಪ ಅಶೋಕ ಗುಡಿಮನಿ ಅಲಿಯಾಸ್ ಮಾಸ್ತರ್ ಅನಾರೋಗ್ಯದಿಂದ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಬಿಷ್ಣಪ್ಪ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು. ಹೀಗಾಗಿ ಮೃತ ಬಿಷ್ಣಪ್ಪ ಅವರ ಪತ್ನಿ ಶೀಲಾ, ಸಂಬಂಧಿಕರ ಜತೆಗೆ ಶವವನ್ನು ಆಂಬ್ಯುಲೆನ್ಸ್‌ನಲ್ಲಿ ಬಂಕಾಪುರಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಬಂಕಾಪುರ ಹತ್ತಿರ ಬರುತ್ತಿದ್ದಂತೆ ಪತ್ನಿ ಶೀಲಾ, “ಡಾಬಾ ಬಂತು ನೋಡು, ಊಟ ಮಾಡುತ್ತೀಯಾ?" ಎಂದು ಗೋಳಾಡಿದ್ದಾಳೆ. ಈ ವೇಳೆ ಬಿಷ್ಣಪ್ಪ ಮತ್ತೆ ಉಸಿರಾಡಲು ಆರಂಭಿಸಿದ್ದಾನೆ.
ಮೃತ ವ್ಯಕ್ತಿ ಎದ್ದು ಕೂರುತ್ತಿದ್ದಂತೆ ಗಾಬರಿಯಾದ ಸಂಬಂಧಿಕರು ಮತ್ತೆ ಶಿಗ್ಗಾವಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ವೇಳೆ ತಪಾಸಣೆ ಮಾಡಿದ ವೈದ್ಯರು ವ್ಯಕ್ತಿ ಬದುಕಿರುವುದಾಗಿ ಧೃಡಪಡಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಜತೆಗೆ ಬಿಷ್ಣಪ್ಪನನ್ನು ಅದೇ ಆಂಬ್ಯುಲೆನ್ಸ್‌ನಲ್ಲಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಸದ್ಯ ಬಿಷ್ಣಪ್ಪನಿಗೆ ಕಿಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಮತ್ತೊಂದೆಡೆ ಬಿಷ್ಣಪ್ಪ ಸತ್ತ ಸುದ್ದಿ ಕೇಳಿ ಕುಟುಂಬಸ್ಥರು ಬಂಕಾಪುರದಲ್ಲಿ ಶ್ರದ್ಧಾಂಜಲಿ ಬ್ಯಾನರ್‌ಗಳನ್ನು ಹಾಕಿದ್ದರು. ಮೃತನ ಅಂತ್ಯಕ್ರಿಯೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದ ಕುಟುಂಬಸ್ಥರು, ಆಪ್ತರು, ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದರು ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ | Viral Video: ಪೊಲೀಸ್ ಅಧಿಕಾರಿಯ ವಿರುದ್ಧ ಟ್ರಕ್ ಚಾಲಕನಿಂದ ಸುಲಿಗೆ ಆರೋಪ; ವಿಡಿಯೊ ವೈರಲ್
ಆತ್ಮಹತ್ಯೆ ಬೆದರಿಕೆ; ಉಪನ್ಯಾಸಕನನ್ನು ಜಡ್ಜ್ ಎಂದು ತೋರಿಸಿ ಆರೋಪಿಯನ್ನು ಬಂಧಿಸಿದ ಪೊಲೀಸರು
![Dharwad news](https://cdn-vishwavani-prod.hindverse.com/media/images/Dharwad_news.width-800.jpg)
ಧಾರವಾಡ: ಜೈಲಿಗೆ ಕರೆದೊಯ್ಯವಾಗ ಪೋಕ್ಸೊ ಪ್ರಕರಣದ ಆರೋಪಿಯೊಬ್ಬ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ ಹೈಡ್ರಾಮಾ ಸೃಷ್ಟಿಸಿದ ಘಟನೆ ನಗರದಲ್ಲಿ ನಡೆದಿದೆ. ಆದರೆ, ಪೊಲೀಸರು ಚಾಕಚಕ್ಯತೆಯಿಂದ ಸಿನಿಮೀಯ ರೀತಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧನ ವಾರಂಟ್ ಜಾರಿಯಾಗಿದ್ದರಿಂದ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಕರೆದೊಯ್ಯುತ್ತಿದ್ದರು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಂಡು ಕಟ್ಟಡವೇರಿದ ಆರೋಪಿ, ನ್ಯಾಯಾಧೀಶರನ್ನು ಸ್ಥಳಕ್ಕೇ ಕರೆಸಬೇಕು, ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾನೆ. ಆದ್ದರಿಂದ ಸ್ಥಳದಲ್ಲೇ ಇದ್ದ ಉಪನ್ಯಾಸಕನನ್ನೇ ಜಡ್ಜ್ ಎಂದು ಬಿಂಬಿಸಿದ್ದು, ಜಡ್ಜ್ ಮಾತನಾಡುತ್ತಿದ್ದಾಗ ಉಪಾಯದಿಂದ ಆರೋಪಿಯನ್ನು ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಧಾರವಾಡ ಪೊಲೀಸರ ಕಾರ್ಯವೈಖರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಅಣ್ಣಿಗೇರಿ ನಿವಾಸಿಯಾಗಿರುವ ವಿಜಯ ಉಣಕಲ್ ವಿರುದ್ಧ 2021ರಲ್ಲಿ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿತ್ತು. ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕೋರ್ಟ್‌ನಿಂದ ಬಂಧನ ವಾರಂಟ್ ಜಾರಿಯಾಗಿತ್ತು. ಹೀಗಾಗಿ ಪೊಲೀಸರು ಆರೋಪಿ ವಿಜಯ ಉಣಕಲ್ನನ್ನು ಬಂಧಿಸಿ ಜಡ್ಜ್ ಮುಂದೆ ಹಾಜರುಪಡಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹೀಗಾಗಿ ಆರೋಪಿ ವಿಜಯ್ ಉಣಕಲ್ನನ್ನು ಪೊಲೀಸರು ಜೈಲಿಗೆ ಕರೆದೊಯ್ಯೊತ್ತಿದ್ದರು. ಈ ವೇಳೆ ವಿಜಯ್ ಉಣಕಲ್ ಪೊಲೀಸರಿಂದ ತಪ್ಪಿಸಿಕೊಂಡು ಕಟ್ಟಡದ ಮೇಲೇರಿದ್ದನು. ಬಳಿಕ, ಸ್ಥಳಕ್ಕೆ ನ್ಯಾಯಾಧೀಶರು ಬರಬೇಕು, ಇಲ್ಲದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ವಿಚಾರ ತಿಳಿದು ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ದೌಡಾಯಿಸಿ, ಆರೋಪಿಯನ್ನು ಯಾಮಾರಿಸಿ ಬಂಧನ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ | Kolkata Horrror: 8ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ: ಆರೋಪಿ ಅರೆಸ್ಟ್!
ಆರೋಪಿಯ ಹೈಡ್ರಾಮಾ ನೋಡಲು ಸ್ಥಳಕ್ಕೆ ಕರ್ನಾಟಕ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ. ವಿಶ್ವನಾಥ್ ಚಿಂತಾಮಣಿ ಆಗಮಿಸಿದ್ದರು. ಈ ವೇಳೆ ಪೊಲೀಸರು, ಪ್ಲ್ಯಾನ್ಮಾಡಿ ಇವರೇ ಜಡ್ಜ್ ಎಂದು ಉಪನ್ಯಾಸಕರನ್ನು ತೋರಿಸಿ ನಂಬಿಸಿದ್ದಾರೆ. ಪೊಲೀಸರ ಪ್ಲ್ಯಾನ್ನಂತೆ ಉಪನ್ಯಾಸಕ ವಿಶ್ವನಾಥ್ ಚಿಂತಾಮಣಿ ಅವರು ಕೂಡ ನಟಿಸಿದ್ದಾರೆ. ಅದನ್ನು ನಂಬಿ, ಆರೋಪಿಯು ಉಪನ್ಯಾಸಕನ ಜತೆ ಮಾತನಾಡುತ್ತಿದ್ದಾಗ ಆತನನ್ನು ಕಟ್ಟಡದಿಂದ ಕೆಳಗೆ ಇಳಿಸಿ, ಬಂಧಿಸಲಾಗಿದೆ. ನಂತರ ಕೇಂದ್ರ ಕಾರಾಗೃಹಕ್ಕೆ ಕರೆದುಕೊಂಡು ಹೋಗಲಾಗಿದೆ.