Holi 2026: ಹಾವೇರಿ ಜಿಲ್ಲೆಯಲ್ಲಿ ಸಡಗರ ಸಂಭ್ರಮದಿಂದ ಹೋಳಿ ಆಚರಣೆ; ಬಣ್ಣದೋಕುಳಿಯಲ್ಲಿ ಮಿಂದೆದ್ದ ಜನ
Haveri News: ಹಾವೇರಿ ಸೇರಿದಂತೆ ಜಿಲ್ಲೆಯ ಬಹುತೇಕ ಹಳ್ಳಿ, ನಗರಗಳಲ್ಲಿ ಹೋಳಿ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಬುಧವಾರ ಬೆಳಿಗ್ಗೆಯೇ ನಗರದ ವಿವಿಧ ಗಲ್ಲಿ, ಓಣಿಗಳಲ್ಲಿ ಹೋಳಿ ಹಬ್ಬವು ತುಂಬಾ ಸಡಗರ ಸಂಭ್ರಮದಿಂದ ಜರುಗಿತು.
ಹಾವೇರಿಯಲ್ಲಿ ಸಡಗರ ಸಂಭ್ರಮದಿಂದ ಹೋಳಿ ಹಬ್ಬ ಆಚರಿಸಲಾಯಿತು. -
ಹಾವೇರಿ, ಮಾ.4: ಯಾಲಕ್ಕಿ ನಗರ ಹಾವೇರಿ ಸೇರಿದಂತೆ ಜಿಲ್ಲೆಯ (Haveri News) ಬಹುತೇಕ ಹಳ್ಳಿ, ನಗರಗಳಲ್ಲಿ ಹೋಳಿ ಹಬ್ಬವನ್ನು (Holi 2026) ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಬುಧವಾರ ಬೆಳಗ್ಗೆಯೇ ನಗರದ ವಿವಿಧ ಗಲ್ಲಿ, ಓಣಿಗಳಲ್ಲಿ ಹೋಳಿ ಹಬ್ಬವು ತುಂಬಾ ಸಡಗರ ಸಂಭ್ರಮದಿಂದ ಜರುಗಿತು.
ನಗರ ತುಂಬೆಲ್ಲಾ ರಂಗಿನಾಟ
ಬೆಳಗಾಗುತ್ತಿದ್ದಂತೆ ಪ್ರತಿ ಮನೆಯಲ್ಲಿ ಬಣ್ಣದ ಓಕುಳಿ ಹಿಡಿದು ಪರಸ್ಪರ ಬಣ್ಣವನ್ನು ಎರಚುವ ಮೂಲಕ ಅತ್ಯಂತ ಸಂತಸ, ಸಂಭ್ರಮದಿಂದ ಓಕುಳಿ ಆಡಿದರು.
ಡಿಸಿ ಕಚೇರಿಯಲ್ಲಿ ಭರ್ಜರಿ ಬಣ್ಣದೋಕುಳಿ
ಹೋಳಿ ಹಬ್ಬದ ಅಂಗವಾಗಿ ದೇವಗಿರಿಯಲ್ಲಿರುವ ಡಿಸಿ ಕಾರ್ಯಾಲಯದ ಆವರಣದಲ್ಲಿ ಸರ್ಕಾರಿ ನೌಕರರು ಸಾರ್ವಜನಿಕ ಬದುಕಿನ ಒತ್ತಡವನ್ನು ಬದಿಗಿಟ್ಟು ಭರ್ಜರಿ ರಂಗಿನಾಟ ಆಡಿದರು. ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದ್ಯಾಮಣ್ಣನವರ ಅವರು ಹೋಳಿಹಬ್ಬದಲ್ಲಿ ಭಾಗವಹಿಸಿ ಹೋಳಿ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದರು.
Stars Holi Fashion 2026: ಹೋಳಿಯ ಔಟ್‌ಫಿಟ್ಸ್‌ನಲ್ಲಿ ರಂಗೇರಿದ ತಾರೆಯರು
ವಿವಿಧೆಡೆ ಹೋಳಿ
ಹಾವೇರಿ ನಗರ ಸೇರಿದಂತೆ ಜಿಲ್ಲಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಪರಸ್ಪರ ಒಬ್ಬರಿಗೊಬ್ಬರು ಬಣ್ಣ ಎರಚುವ ಮೂಲಕ ಹೋಳಿ ಹಬ್ಬದ ಆಚರಣೆ ಎಲ್ಲೆಡೆ ಕಂಡುಬಂದಿತು.