ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Honeytrap: ಅರೆಬೆತ್ತಲೆಗೊಳಿಸಿ ವಿಡಿಯೋ ಚಿತ್ರೀಕರಣ; ₹2 ಕೋಟಿ ಸುಲಿಗೆಗೆ ಬೇಡಿಕೆ ಆರೋಪ: ಹೂಡಿಕೆ ಆಮಿಷವೊಡ್ಡಿ ಹಾವೇರಿ ಉದ್ಯಮಿಗೆ ಹನಿಟ್ರ್ಯಾಪ್ ಬಲೆ?

ಸಾಮಾಜಿಕ ಜಾಲತಾಣ(Social Media)ದ ಮೂಲಕ ಪರಿಚಯವಾದ ಬೆಂಗಳೂರಿನ ಮಹಿಳೆ ಯೊಬ್ಬರು ಉದ್ಯಮಿಯೊಂದಿಗೆ ವ್ಯವಹಾರದ ಮಾತುಕತೆ ನಡೆಸಿ ಅ.28ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರಕ್ಕೆ ಕರೆಸಿಕೊಂಡಿದ್ದಾರೆ. ಬಳಿಕ ಮನೆಯೊಂದರಲ್ಲಿ ಮಹಿಳೆ ಸೇರಿದಂತೆ 6ರಿಂದ 7 ಮಂದಿ ಪುರುಷರು ಉದ್ಯಮಿಯನ್ನು ಅರೆಬೆತ್ತಲೆಗೊಳಿಸಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಹಾವೇರಿ: ಉದ್ಯಮದಲ್ಲಿ ₹25 ಲಕ್ಷ ಹೂಡಿಕೆ ಮಾಡಿ ಪ್ರತಿ ತಿಂಗಳು ₹50 ಸಾವಿರ ಲಾಭ ನೀಡುವ ಆಮಿಷವೊಡ್ಡಿ ಹಾವೇರಿಯ ಸಿಸಿಟಿವಿ ಉದ್ಯಮಿಯೊಬ್ಬರನ್ನು ಬೆಂಗಳೂರಿಗೆ ಕರೆಸಿಕೊಂಡು ಹನಿ ಟ್ರ್ಯಾಪ್(Honeytrap) ಮಾದರಿಯಲ್ಲಿ ಸಿಲುಕಿಸಿ ₹2 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿರುವ ಗಂಭೀರ ಆರೋಪ ಕೇಳಿಬಂದಿದೆ.

ಸಾಮಾಜಿಕ ಜಾಲತಾಣ(Social Media)ದ ಮೂಲಕ ಪರಿಚಯವಾದ ಬೆಂಗಳೂರಿನ ಮಹಿಳೆ ಯೊಬ್ಬರು ಉದ್ಯಮಿಯೊಂದಿಗೆ ವ್ಯವಹಾರದ ಮಾತುಕತೆ ನಡೆಸಿ ಅ.28ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರಕ್ಕೆ ಕರೆಸಿಕೊಂಡಿದ್ದಾರೆ. ಬಳಿಕ ಮನೆಯೊಂದರಲ್ಲಿ ಮಹಿಳೆ ಸೇರಿದಂತೆ 6ರಿಂದ 7 ಮಂದಿ ಪುರುಷರು ಉದ್ಯಮಿಯನ್ನು ಅರೆಬೆತ್ತಲೆಗೊಳಿಸಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ: Honeytrap Case: ಇನ್‌ಸ್ಟಾಗ್ರಾಂನಲ್ಲಿ ಮಿಲಿಯನ್‌ಗಟ್ಟಲೇ ಫಾಲೋವರ್ಸ್‌... ಫೇಮ್‌, ನೇಮ್‌ ಸಿಕ್ತಿದ್ದಂತೆ ಈಕೆ ಮಾಡಿದ ಕೆಲ್ಸ ಎಂತಹದ್ದು ಗೊತ್ತಾ?

ನಂತರ ಮಹಿಳೆಯನ್ನು ಮದುವೆಯಾಗಬೇಕು, ಇಲ್ಲವೇ ₹2 ಕೋಟಿ ಹಣ ನೀಡಬೇಕು ಎಂದು ಬೆದರಿಕೆ ಹಾಕಿದ್ದಲ್ಲದೆ, ಉದ್ಯಮಿಯ ಕೈಯಲ್ಲಿದ್ದ ಎರಡು ಚಿನ್ನದ ಉಂಗುರಗಳನ್ನು ಕಿತ್ತುಕೊಂಡಿ ದ್ದಾರೆ ಎನ್ನಲಾಗಿದೆ.

ಘಟನೆಯ ಬಳಿಕ ಸ್ನೇಹಿತರ ಸಲಹೆಯಂತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಉದ್ಯಮಿ ಅ.29ರಂದು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಮಹಿಳೆ ಸೇರಿದಂತೆ ಇತರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 308(2)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಉದ್ಯಮದಲ್ಲಿ ಹೂಡಿಕೆಯ ಆಮಿಷವೊಡ್ಡಿ ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯ ಬೆಳೆಸಿಕೊಂಡು ಸುಲಿಗೆಗೆ ಯತ್ನಿಸಿರುವ ಆರೋಪ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಆರೋಪಗಳ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.