ಹಾವೇರಿ: ವಿಶ್ವವಾಣಿಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್(Vishweshwar Bhat) ಅವರ ನೇತೃತ್ವದಲ್ಲಿ ಪ್ರಕಟ ಗೊಂಡಿರುವ 'ವಿಶ್ವವಾಣಿ ದೀಪಾವಳಿ ವಿಶೇಷಾಂಕ' ಪುಸ್ತಕವನ್ನು ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ನಿರ್ದೇಶನಾಲಯದ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ (Rudrappa Manappa Lamani) ಅವರಿಗೆ ಜಿಲ್ಲಾ ವರದಿಗಾರ ಪರಶುರಾಮ ಡೂಗನವರ ಅವರು ತಲುಪಿಸಿದರು.
ಇದನ್ನೂ ಓದಿ: Deepavali 2026: ಬೆಳಕಿನ ಹಬ್ಬ ದೀಪಾವಳಿ ತರದಿರಲಿ ನಿಮ್ಮ ಬಾಳಿಗೆ ಅಂಧಕಾರ!
ವಿಶೇಷಾಂಕವನ್ನು ಆಸಕ್ತಿಯಿಂದ ವೀಕ್ಷಿಸಿದ ಸಚಿವ ರುದ್ರಪ್ಪ ಲಮಾಣಿ ಅವರು ಅದರಲ್ಲಿನ ಲೇಖನಗಳು, ವಿಶೇಷ ಬರಹಗಳು ಹಾಗೂ ವಿಷಯ ವೈವಿಧ್ಯತೆಯನ್ನು ಕಂಡು ಹರ್ಷ ವ್ಯಕ್ತಪಡಿಸಿ ದರು. ದೀಪಾವಳಿ ಹಬ್ಬದ ಸಂಭ್ರಮಕ್ಕೆ ಸಾಹಿತ್ಯದ ಸೊಬಗು ಹೆಚ್ಚಿಸಿರುವ ವಿಶ್ವವಾಣಿಯ ವಿಶೇಷ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.