ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Basavaraj Bommai: ರಾಜ್ಯ ಸರ್ಕಾರದ ಅಧಿಕಾರ ದಾಹದಲ್ಲಿ ಜನತೆ ಅನಾಥ: ಬಸವರಾಜ ಬೊಮ್ಮಾಯಿ ಟೀಕೆ

ರಾಜ್ಯದಲ್ಲಿ ಅಧಿಕಾರಕ್ಕಾಗಿ ಕುರ್ಚಿಯಲ್ಲಿ ಕೂಡುವುದೇ ಸಾಧನೆಯಾಗಿದೆ. ಕುರ್ಚಿಯಲ್ಲಿ ಕೂಡಿಸಿದ ಯಜಮಾನರು ಜನರ ಬಗ್ಗೆ ಯೋಚನೆಯನ್ನೇ ಮಾಡುತ್ತಿಲ್ಲ. ಅಧಿಕಾರದ ದಾಹದಲ್ಲಿ ರಾಜ್ಯದ ಜನರನ್ನು ಅನಾಥ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿದ್ದಾರೆ.

ಅಧಿಕಾರಕ್ಕಾಗಿ ಕುರ್ಚಿಯಲ್ಲಿ ಕೂಡುವುದೇ ಸಾಧನೆ: ಬೊಮ್ಮಾಯಿ

ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಸವರಾಜ ಬೊಮ್ಮಾಯಿ -

Profile
Siddalinga Swamy Nov 21, 2025 8:07 PM

ಹಾನಗಲ್, ನ. 21: ರಾಜ್ಯದಲ್ಲಿ ಅಧಿಕಾರಕ್ಕಾಗಿ ಕುರ್ಚಿಯಲ್ಲಿ ಕೂಡುವುದೇ ಸಾಧನೆಯಾಗಿದೆ. ಕುರ್ಚಿಯಲ್ಲಿ ಕೂಡಿಸಿದ ಯಜಮಾನರು ಜನರ ಬಗ್ಗೆ ಯೋಚನೆಯನ್ನೇ ಮಾಡುತ್ತಿಲ್ಲ. ಅಧಿಕಾರದ ದಾಹದಲ್ಲಿ ರಾಜ್ಯದ ಜನರನ್ನು ಅನಾಥ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಆರೋಪಿದರು. ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಅಕ್ಕಿವಳ್ಳಿ ಗ್ರಾಮದಲ್ಲಿ ಮನೋಹರ್‌ ತಹಶೀಲ್ದಾರ್‌ ಅಭಿಮಾನಿ ಬಳಗದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ದಿವಂಗತ ಮನೋಹರ್‌ ತಹಶೀಲ್ದಾರ್ ಅವರ ಪ್ರಥಮ ಪುಣ್ಯಸ್ಮರಣೆ ಹಾಗೂ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈಗೆಲ್ಲ ಒಬ್ಬರು ಎರಡೂವರೆ ವರ್ಷ ಅಂತಾರೆ, ಇನ್ನೊಬ್ಬರು ಇಲ್ಲ ಅಂತಾರೆ‌. ಕುರ್ಚಿಯಲ್ಲಿ ಕೂಡುವುದೇ ಸಾಧನೆಯಾಗಿದೆ. ಕುರ್ಚಿಯಲ್ಲಿ ಕೂಡಿಸಿದ ಯಜಮಾನರು ಜನರ ಬಗ್ಗೆ ಯೋಚನೆಯನ್ನೇ ಮಾಡುತ್ತಿಲ್ಲ. ಕುರ್ಚಿ ಉಳಿಸಿಕೊಳ್ಳುವುದಕ್ಕೆ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಅವರು ಐದು ವರ್ಷ ಸಿಎಂ ಆಗಲು ಪ್ರಯತ್ನಿಸುತ್ತಿದ್ದಾರೆ‌. ಒಬ್ಬ ಮುಖ್ಯಮಂತ್ರಿ ಪ್ರತಿ ದಿನ ನಾನು ಸಿಎಂ ಅಂತ ಹೇಳಿಕೊಳ್ಳುವ ಪರಿಸ್ಥಿತಿ ಬಂದಿದೆ. ಅಧಿಕಾರದ ದಾಹದಲ್ಲಿ ರಾಜ್ಯದ ಜನರನ್ನು ಅನಾಥ ಮಾಡುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ಅಭಿವೃದ್ಧಿಗೆ ಪೈಪೋಟಿ

ಹಾನಗಲ್ ತಾಲೂಕಿನಲ್ಲಿ ಉದಾಸಿ, ತಹಶೀಲ್ದಾರ್‌ ಅಭಿವೃದ್ಧಿಗಾಗಿ ಪೈಪೋಟಿ ನಡೆಸಿದ್ದರು. ಇವರು ಜನರ ಕೆಲಸಕ್ಕಾಗಿ ಪೈಪೋಟಿ ನಡೆಸಿದ್ದರು‌. ಕೆಲವು ಮೂಲಭೂತ ಆದರ್ಶ ಉಳಿಸಿಕೊಳ್ಳಬೇಕೆಂದರೆ ಇವರಿಬ್ಬರ ಜೀವನ ಅರಿತುಕೊಳ್ಳಬೇಕಿದೆ. ಹಾನಗಲ್ ತಾಲೂಕಿನ ಜನರು ಬುದ್ದಿವಂತರಿದ್ದಾರೆ. ಅವರ ಆಶೋತ್ತರ ಈಡೇರಿಸಲು ನಿಮ್ಮ ಜತೆಗೆ ನಾನು ಇರುತ್ತೇನೆ. ತಹಶೀಲ್ದಾರ್ ಅವರ, ಉದಾಸಿ ಅವರ ಸಂಬಂಧ ನಮಗೆ ಆದರ್ಶ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ರಾಜ್ಯ ಸರ್ಕಾರ 3,000 ರೂ. ಕೊಟ್ಟು ಮೆಕ್ಕೆಜೋಳ ಖರೀದಿಸಲಿ: ಬಸವರಾಜ ಬೊಮ್ಮಾಯಿ

ಶ್ರೀ ಮ.ನಿ.ಪ್ರ. ಶಿವಯೋಗಿಶ್ವರ ಮಹಾಸ್ವಾಮೀಜಿ, ಶ್ರೀ ಸದ್ಗುರು ಶಂಕರಾನಂದ ಮಹಾಸ್ವಾಮೀಜಿ, ಶ್ರೀ ಮ.ನಿ.ಪ್ರ. ಶಿವಬಸವ ಮಹಾಸ್ವಾಮೀಜಿ, ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ, ಶ್ರೀ ಮ.ಘ.ಚ. ಗುರುಮಹೇಶ್ವರ ಮಹಾಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಮಾಜಿ ಸಚಿವ ಬಿ.ಸಿ. ಪಾಟೀಲ್, ಮಾಜಿ ಶಾಸಕರಾದ ಶಿವರಾಜ ಸಜ್ಜನ, ಅರುಣ ಕುಮಾರ ಪೂಜಾರ, ಮುಖಂಡರಾದ ರಾಘವೇಂದ್ರ ತಹಶೀಲ್ದಾರ್‌ ಮತ್ತಿತರರು ಉಪಸ್ಥಿತರಿದ್ದರು.