ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Puttappa Basappa Kuri: ಅಹಿಂದ ಸಂಘಟನೆಯ ಬೆಂಬಲ; ನಾಲ್ಕು ದಶಕಗಳ ಕಾಂಗ್ರೆಸ್ ನಂಟು: ಕಬ್ಬೂರ ಜಿಪಂ ಕ್ಷೇತ್ರಕ್ಕೆ ಪುಟ್ಟಪ್ಪ ಕುರಿ ಪ್ರಬಲ ಆಕಾಂಕ್ಷಿ

ಚಿಕ್ಕಲಿಂಗದಹಳ್ಳಿ ಗ್ರಾಮದ ನಿವಾಸಿಯಾಗಿರುವ ಪುಟ್ಟಪ್ಪ ಕುರಿ ಅವರು ಕಳೆದ ನಾಲ್ಕು ದಶಕ ಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪಕ್ಷದ ಸಂಘಟನೆ ಹಾಗೂ ಚುನಾವಣೆಗಳಲ್ಲಿ ದುಡಿದಿದ್ದಾರೆ. ಶಾಸಕ ಬಸವರಾಜ ಶಿವಣ್ಣನವರ(MLA Basavaraj Shivanna) ಅವರ ಆಪ್ತರಾಗಿರುವ ಇವರು, ಮಾಜಿ ಜಿಪಂ ಸದಸ್ಯ ಎಸ್.ಎಫ್.ಎನ್. ಗಾಜಿಗೌಡ್ರ ಅವರ ಗೆಲುವಿಗೂ ಶ್ರಮಿಸಿದ್ದಾರೆ.

ಹಾವೇರಿ: ಅಹಿಂದ ಸಂಘಟನೆಯ ರಾಜ್ಯಾಧ್ಯಕ್ಷ ಮುತ್ತಣ್ಣ ಶಿವಳ್ಳಿ ಅವರ ನಿರ್ದೇಶನದ ಮೇರೆಗೆ ಹಾವೇರಿ ಜಿಲ್ಲೆಯ ಅಹಿಂದ ಸಂಘಟನೆಯ ಪ್ರಮುಖರ ಬೆಂಬಲದೊಂದಿಗೆ ತಾಲೂಕಿನ ಕಬ್ಬೂರ ಜಿಲ್ಲಾ ಪಂಚಾಯಿತಿ(Zilla Panchayat) ಕ್ಷೇತ್ರದಿಂದ ಪುಟ್ಟಪ್ಪ ಬಸಪ್ಪ ಕುರಿ(Puttappa Basappa Kuri) ಅವರು ಪ್ರಬಲ ಆಕಾಂಕ್ಷಿಯಾಗಿ ಹೊರಹೊಮ್ಮಿದ್ದಾರೆ.

ಚಿಕ್ಕಲಿಂಗದಹಳ್ಳಿ ಗ್ರಾಮದ ನಿವಾಸಿಯಾಗಿರುವ ಪುಟ್ಟಪ್ಪ ಕುರಿ ಅವರು ಕಳೆದ ನಾಲ್ಕು ದಶಕ ಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪಕ್ಷದ ಸಂಘಟನೆ ಹಾಗೂ ಚುನಾವಣೆಗಳಲ್ಲಿ ದುಡಿದಿದ್ದಾರೆ. ಶಾಸಕ ಬಸವರಾಜ ಶಿವಣ್ಣನವರ(MLA Basavaraj Shivanna) ಅವರ ಆಪ್ತರಾಗಿರುವ ಇವರು, ಮಾಜಿ ಜಿಪಂ ಸದಸ್ಯ ಎಸ್.ಎಫ್.ಎನ್. ಗಾಜಿಗೌಡ್ರ ಅವರ ಗೆಲುವಿಗೂ ಶ್ರಮಿಸಿದ್ದಾರೆ. ಇವರ ಪತ್ನಿ ಈ ಹಿಂದೆ ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದು, ಕಾಂಗ್ರೆಸ್ ಆಡಳಿತಾವಧಿಯಲ್ಲಿ ಕುರಿ ಅವರನ್ನು ಅಕ್ರಮ-ಸಕ್ರಮ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು.

ಇದನ್ನೂ ಓದಿ: Haveri News: ನಿವೇಶನ, ಕೃಷಿ ಭೂಮಿಗೆ ಹಕ್ಕುಪತ್ರ ವಿತರಣೆಗೆ ಆಗ್ರಹ; ಹಾವೇರಿಯ ಡಿಸಿ ಕಚೇರಿ ಎದುರು ವಿವಿಧ ಗ್ರಾಮಸ್ಥರ ಪ್ರತಿಭಟನೆ

ಅಹಿಂದ ವರ್ಗಗಳ ಹಕ್ಕು ಮತ್ತು ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಪುಟ್ಟಪ್ಪ ಕುರಿ ಅವರು ಸರ್ವ ಜನಾಂಗದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕಬ್ಬೂರ ಜಿಪಂ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದು, ಅಹಿಂದ ಸಂಘಟನೆಯ ಪ್ರಮುಖರು ಇವರ ಬೆನ್ನಿಗೆ ನಿಂತಿದ್ದಾರೆ.

ಅಹಿಂದ ಸಂಘಟನೆಯ ಜಿಲ್ಲಾಧ್ಯಕ್ಷ ಪರಮೇಶ ದೇಸಳ್ಳಿ, ಕಾನೂನು ಘಟಕದ ಅಧ್ಯಕ್ಷ ಜಗದೀಶ ಮಲ್ಲಿಕೇರಿ, ರಾಜ್ಯ ಮುಖಂಡ ಉಡಣಪ್ಪ ಮಾಳಗಿ, ರಾಜ್ಯ ಉಪಾಧ್ಯಕ್ಷ ನಾಗರಾಜ ಬಾಲಣ್ಣನವರ, ಮಹಿಳಾ ಘಟಕದ ಅಧ್ಯಕ್ಷೆ ಯಲ್ಲಪ್ಪ ಹರಿಜನ, ಮಹಿಳಾ ರಾಜ್ಯ ಉಪಾಧ್ಯಕ್ಷೆ ಜ್ಯೋತಿ ಉಳಗುಂದಿ, ಪದಾಧಿಕಾರಿಗಳಾದ ಭಾರತಿ ಮರಾಠಿ, ಮಹಾಂತೇಶ ಹಟ್ಟಿ, ಮಣಿಕಂಠ ಬಳ್ಳಾರಿ ಸೇರಿದಂತೆ ಹಲವು ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ದೊರೆಯುವ ವಿಶ್ವಾಸವಿದೆ. ಒಂದು ವೇಳೆ ಟಿಕೆಟ್ ಲಭಿಸದಿದ್ದರೆ ಅಹಿಂದ ಸಂಘಟನೆಯ ಬೆಂಬಲದೊಂದಿಗೆ ಚುನಾವಣಾ ಕಣಕ್ಕಿಳಿಯಲು ಸಿದ್ಧನಿದ್ದೇನೆ. ಕಬ್ಬೂರ ಕ್ಷೇತ್ರದ ಜನರ ಸೇವೆ ಮಾಡುವ ಉದ್ದೇಶದಿಂದ ಈ ಬಾರಿ ಸ್ಪರ್ಧೆ ಖಚಿತ ಎಂದು ಪುಟ್ಟಪ್ಪ ಕುರಿ ತಿಳಿಸಿದ್ದಾರೆ.