ಹಾವೇರಿ, ಜ.19: ಹಾವೇರಿ- ಗುತ್ತಲ ರಸ್ತೆ ಬದಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಹಾವೇರಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. (Haveri News) ಹಾವೇರಿ ಜಿಲ್ಲಾ ಎಸ್ಪಿ ಯಶೋಧಾ ವಂಟಗೋಡಿ ನಿರ್ದೇಶನದಂತೆ ಹಾವೇರಿ ಶಹರ ಠಾಣೆ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಮೂವರನ್ನು ಭಾನುವಾರ ಬಂಧಿಸಿದೆ.
ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿದ್ದ ಮೂವರು ದಂಧೆಕೋರರನ್ನು ರವಿವಾರ ಬಂಧಿಸಿದ್ದು, ಆರೋಪಿತರಿಂದ 7935 ಗ್ರಾಂ ಅಂದರೆ ಅಂದಾಜು 3,17,400 ರೂ. ಮೌಲ್ಯದ ಗಾಂಜಾ ಜತೆಗೆ 3,370 ರೂಪಾಯಿ ನಗದು ಹಣವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಲೋಹಿತ ಕೃಷ್ಣಪ್ಪ ಮುನಿಯಪ್ಪನವರ (23), ಮಹೇಶ ಅಶೋಕ ಮೈಲಮ್ಮನವರ (23) ಹಾಗೂ ಮನೋಜ ಕರಿಯಪ್ಪ ಚಾರಿ (21) ಬಂಧಿತ ಆರೋಪಿಗಳು. ಈ ಮೂವರು ಸವಣೂರು ತಾಲೂಕಿನವರಾಗಿದ್ದು ಇಬ್ಬರು ಹೆಸರಿಗೆ ಪೇಟಿಂಗ್ ಕೆಲಸ, ಮತ್ತೊಬ್ಬ ಕೂಲಿ ಕೆಲಸ ಮಾಡಿಕೊಂಡಿದ್ದರೆಂದು ತನಿಖೆಯಿಂದ ತಿಳಿದು ಬಂದಿದೆ.
Road Accident: ಕಾಲೇಜು ಬಸ್ ಡಿಕ್ಕಿ ಹೊಡೆದು ಶಾಲೆಗೆ ಹೋಗುತ್ತಿದ್ದ ತಾಯಿ -ಮಗ ಸಾವು; ಚಾಲಕ ಎಸ್ಕೇಪ್
ಜಿಲ್ಲಾ ಎಸ್ಪಿ ಯಶೋಧಾ ವಂಟಗೋಡಿ, ಎಎಸ್‌ಪಿ ಎಲ್.ವೈ. ಶಿರಕೋಳ ಮಾರ್ಗದರ್ಶನದಲ್ಲಿ ಡಿಎಸ್‌ಪಿ ಎಂ.ಎಸ್. ಪಾಟೀಲ್ ನೇತೃತ್ವದ ತಂಡ ಶಹರ ಠಾಣೆಯ ಸಿಪಿಐ ಮೋತಿಲಾಲ್ ಪವಾರ, ಪಿಎಸ್ಐ ಬಿ.ಜಿ. ದೊಡ್ಡಮನಿ, ಎಂ.ಜಿ. ವಗ್ಗಣ್ಣನವರ, ಎನ್.ಎನ್. ಶಿಶುನಾಳ, ಸಿಬ್ಬಂದಿಗಳಾದ ಯಲ್ಲಪ್ಪ ತಹಸೀಲ್ದಾರ, ಕುಬೇರಪ್ಪ ಲಮಾಣಿ, ಮುತ್ತಪ್ಪ ಲಮಾಣಿ, ಶಂಕರ ಲಮಾಣಿ, ಚನ್ನಬಸಪ್ಪ ಆರ್.ಬಿ., ಎಂ.ಎನ್. ಹಿತ್ತಲಮನಿ, ಮಾಲತೇಶ ಕಬ್ಬೂರ, ಪರಶುರಾಮ ಸಕನಳ್ಳಿ ಸೇರಿದಂತೆ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.