ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Haveri News: ಹಾವೇರಿನಲ್ಲಿ ರೈತನ ಬಲಿ ಪಡೆದ ಚಿರತೆ ಸೆರೆ; ನಿಟ್ಟುಸಿರು ಬಿಟ್ಟ ಜನ

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಣವಿ ಸಿದ್ದಗೇರಿ ಗ್ರಾಮದ ಬಳಿ ಚಿರತೆಯನ್ನು ಸೆರೆ ಹಿಡಿಯಲಾಗಿದೆ. ಎರಡು ಗ್ರಾಮಗಳ ರೈತರ ನೆಮ್ಮದಿ ಕೆಡಿಸಿದ್ದ ಚಿರತೆಯನ್ನು ಸೋಮವಾರ ಬೆಳಗಿನ ಜಾವ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯವರು ಯಶಸ್ವಿಯಾಗಿದ್ದಾರೆ.

ಹಾವೇರಿನಲ್ಲಿ ರೈತನ ಬಲಿ ಪಡೆದ ಚಿರತೆ ಸೆರೆ; ನಿಟ್ಟುಸಿರು ಬಿಟ್ಟ ಜನ

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನಲ್ಲಿ ಚಿರತೆ ಸೆರೆ. -

Prabhakara R
Prabhakara R Dec 4, 2025 3:25 PM

ಹಾವೇರಿ, ಡಿ.4: ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಣವಿ ಸಿದ್ದಗೇರಿ ಗ್ರಾಮದಲ್ಲಿ ರೈತನನ್ನು ಬಲಿ ಪಡೆದಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಇತ್ತೀಚೆಗೆ ಹೊಲಕ್ಕೆ ನೀರು ಹಾಯಿಸಲು ಹೋದ ವೇಳೆ ರೈತನ ಮೇಲೆ ಚಿರತೆ ದಾಳಿ ಮಾಡಿ ಕೊಂದಿತ್ತು. ಇದರಿಂದ ಕಡೂರು ಹಾಗೂ ಕಣವಿ ಸಿದಗೇರಿ ಗ್ರಾಮದ ಜನರು ಆತಂಕದಲ್ಲಿದ್ದರು. ಇದೀಗ ಚಿರತೆ ಸೆರೆಯಾಗಿರುವುದರಿಂದ ಜನ ನಿಟ್ಟುಸಿರು ಬಿಡುವಂತಾಗಿದೆ.

ಚಿರತೆ ದಾಳಿ ಹಿನ್ನೆಲೆಯಲ್ಲಿ ಪ್ರತಿ ದಿನ ಭಯದಲ್ಲಿ ಬುದುಕುವ ದುಸ್ಥಿತಿ ನಿರ್ಮಾಣವಾಗಿತ್ತು. ಎರಡು ಗ್ರಾಮಗಳ ರೈತರ ನೆಮ್ಮದಿ ಕೆಡಿಸಿದ್ದ ಚಿರತೆಯನ್ನು ಕಡೂರು ಬಳಿ ಸೋಮವಾರ ಬೆಳಗಿನ ಜಾವ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯವರು ಯಶಸ್ವಿಯಾಗಿದ್ದಾರೆ. ಚಿರತೆ ಸೆರೆ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಪೂಜಾರ್ ಮತ್ತು ಸಿಬ್ಬಂದಿ ಭಾಗಿಯಾಗಿದ್ದರು.

ಕುರಿಗಾಹಿಯ ಮೇಲೆ ಚಿರತೆ ದಾಳಿ; ಪ್ರಾಣಾಪಾಯದಿಂದ ಪಾರು

ತಿಪಟೂರು: ತಾಲೂಕಿನ ಕಸಬಾ ಹೋಬಳಿಯ ರಾಮಶೆಟ್ಟಿಹಳ್ಳಿ ಗ್ರಾಮದ ಕುರಿಗಾಹಿಯೊಬ್ಬರ ಮೇಲೆ ಇತ್ತೀಚೆಗೆ ಚಿರತೆ ದಾಳಿ ಮಾಡಿತ್ತು. ಹೊಲದಲ್ಲಿ ಕುರಿ ಮೇಯಿಸುವಾಗ ರಾಜಣ್ಣ ಎಂಬುವರ ಮೇಲೆ ಚಿರತೆ ದಾಳಿ ಮಾಡಿ ಕೈ ಮತ್ತು ದೇಹದ ವಿವಿಧ ಭಾಗಗಳ ಮೇಲೆ ಕಚ್ಚಿ ಗಾಯಗೊಳಿಸಿತ್ತು. ಕುರಿಗಾಹಿ ಕೂಗಿಕೊಂಡಾಗ ಚಿರತೆ ಅಲ್ಲಿಂದ ಓಡಿಹೋಗಿದೆ. ಇದರಿಂದ ಅದೃಷ್ಟವಶಾತ್ ಪ್ರಾಣಾಪಯದಿಂದ ಪಾರಾಗಿದ್ದರು.

ಶೌಚಾಲಯಕ್ಕೆ ನಡೆದು ಹೋಗುವಾಗಲೇ ಹೆರಿಗೆ; ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಬಲಿ

ಪದೇಪದೇ ನಮ್ಮ ಗ್ರಾಮ ಮತ್ತು ಜಮೀನುಗಳಲ್ಲಿ ಓಡಾಡಲು ತುಂಬಾ ಕಷ್ಟವಾಗುತ್ತಿದೆ ಹಗಲು ಮತ್ತು ರಾತ್ರಿ ವೇಳೆ ಚಿರತೆಗಳ ದಾಳಿ ಮುಂದುವರೆದಿದ್ದು, ಅರಣ್ಯ ಇಲಾಖೆಗೆ ತಿಳಿಸಿದರು,ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ಗ್ರಾಮಸ್ಥರ ಆಕ್ರೋಶವಾಗಿದೆ.