ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸ್ಟಿಂಗ್‌ ಆಪರೇಷನ್‌ ವಿರುದ್ಧ ಬೀದಿಗಿಳಿದ ಎಚ್‌.ಡಿ. ಕುಮಾರಸ್ವಾಮಿ; ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ

Sting Operation: ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್ ಕಾವು ಹೆಚ್ಚಾಗುತ್ತಿದೆ. ಕುಟುಕು ಕಾರ್ಯಾಚರಣೆಯನ್ನು ಮುಂದಿಟ್ಟುಕೊಂಡು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಕಾಂಗ್ರೆಸ್‌ ಸರ್ಕಾರವನ್ನು ಕುಟುಕುತ್ತಿದ್ದಾರೆ. ಅಲ್ಲದೆ ಡಿಜಿ-ಐಜಿಪಿ ಎಂ.ಎ. ಸಲೀಂ ಅವರನ್ನು ಭೇಟಿಯಾಗಿ ಸ್ಟಿಂಗ್‌ ಆಪರೇಷನ್‌ ಮಾಡಿದವರನ್ನು ಬಂಧಿಸಬೇಕು ಎಂದು ಎಚ್‌ಡಿಕೆ ಆಗ್ರಹಿಸಿದ್ದಾರೆ.

ಎಚ್‌.ಡಿ. ಕುಮಾರಸ್ವಾಮಿ (ಸಂಗ್ರಹ ಚಿತ್ರ)

ಬೆಂಗಳೂರು, ಅ. 17: ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್ (Sting Operation) ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕುಟುಕು ಕಾರ್ಯಾಚರಣೆಯನ್ನು ಮುಂದಿಟ್ಟುಕೊಂಡು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಕಾಂಗ್ರೆಸ್‌ ಸರ್ಕಾರವನ್ನು ಕುಟುಕುತ್ತಿದ್ದಾರೆ. ಜತೆಗೆ ಡಿಜಿ-ಐಜಿಪಿ ಎಂ.ಎ. ಸಲೀಂ ಅವರನ್ನು ಭೇಟಿಯಾಗಿ ಸ್ಟಿಂಗ್‌ ಆಪರೇಷನ್‌ ಮಾಡಿದವರನ್ನು ಬಂಧಿಸಬೇಕು ಎಂದು ಎಚ್‌ಡಿಕೆ ಆಗ್ರಹಿಸಿದ್ದಾರೆ. ದೂರು ನೀಡಿದ ಬಳಿಕ ಎಚ್‌ಡಿಕೆ ವಾಪಸಾಗಿದ್ದು, ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಎಚ್‌ಡಿಕೆ ದೂರು ನೀಡಿದ ವೇಳೆ ಬೆಂಗಳೂರಿನ ಡಿಜಿ-ಐಜಿಪಿ ಕಚೇರಿ ಮುಂದೆ ಹೈಡ್ರಾಮವೇ ಕಂಡು ಬಂದಿದ್ದು, ಜೆಡಿಎಸ್‌ ಕಚೇರಿಯಿಂದ ಕಾರ್ಯಕರ್ತರ ಜತೆ ಆಗಮಿಸಿದ ಅವರು ದೂರು ಸಲ್ಲಿಸಿದ್ದಾರೆ.

ಇದೀಗ ಕಾಂಗ್ರೆಸ್‌ ವಿರುದ್ಧ ತಮ್ಮ ವಾಗ್ದಾಳಿಯನ್ನು ತೀಕ್ಷ್ಣಗೊಳಿಸಿದೆ ಎಚ್‌ಡಿಕೆ, ʼʼಸಿದ್ದರಾಮಯ್ಯ ಅವರನ್ನು ಹಣಿಯಲು ಡಿಕೆಶಿ ಸ್ಟಿಂಗ್ ಅಸ್ತ್ರ ಪ್ರಯೋಗಿಸಿದ್ದಾರೆ. ಸ್ವಪಕ್ಷೀಯರೇ ಬೆನ್ನಿಗೆ ಚೂರಿ ಇರಿಯುತ್ತಿರುವಾಗ ಇವರಿಂದ ಜನಪರ ಆಡಳಿತ ಸಾಧ್ಯವೇ?ʼʼ ಎಂದು ಪ್ರಶ್ನಿಸಿದ್ದಾರೆ.

ಸ್ಟಿಂಗ್‌ ಆಪರೇಷನ್‌ ಬಗ್ಗೆ ಎಚ್‌ಡಿಕೆ ಮಾತು:



ಸರ್ಕಾರದಲ್ಲಿ ನಡೆಯುತ್ತಿರುವುದು ಆಡಳಿತವಲ್ಲ, ಅಧಿಕಾರದ ಒಳಸಂಚು ಎಂದು ಎಚ್‌ಡಿಕೆ ಇದೇ ವೇಳೆ ಕಿಡಿಕಾರಿದ್ದಾರೆ. ʼʼಸ್ಟಿಂಗ್‌ ಆಪರೇಷನ್‌ ವಿರುದ್ದ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಆರೋಪ ಕೇಳಿ ಬಂದು 12 ದಿನವಾದರೂ ಈ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ನಿಷ್ಕಿಯವಾಗಿದೆ. ಹಲವು ಸಚಿವರ ಸ್ಟಿಂಗ್‌ ಆಪರೇಷನ್‌ ನಡೆದಿದೆʼʼ ಎಂದು ಆರೋಪಿಸಿದ್ದಾರೆ.

ಸ್ಟಿಂಗ್ ಆಪರೇಷನ್ ವಿಡಿಯೊಗೂ ನನಗೂ ಯಾವುದೇ ಸಂಬಂಧ ಇಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಎಚ್‌ಡಿಕೆ ಹೇಳಿದ್ದೇನು?

ʼʼಒಂದು ಸ್ಟಿಂಗ್ ಆಪರೇಷನ್ ಘಟನೆ 2011ರಲ್ಲಿ ನಡೆದಿದೆ ಎಂದು ಮೊದಲು ಭಾವಿಸಲಾಗಿತ್ತು, ಆದರೆ ಇತ್ತೀಚಿನ ವರದಿಯ ಪ್ರಕಾರ ಅದು 2023ರಲ್ಲಿ ನಡೆದಿದೆ. ಆ ವಿಡಿಯೊ ಇಟ್ಟುಕೊಂಡು ಎಲ್ಲರನ್ನೂ ಕೈಗೊಂಬೆ ಮಾಡಿಕೊಂಡಿರಬೇಕುʼʼ ಎಂದಿದ್ದಾರೆ. ʼʼಈ ಎಲ್ಲ ವಿಷಯಗಳ ಬಗ್ಗೆ ಡಿಜಿ ಜತೆ ಚರ್ಚಿಸಿದ್ದೇನೆ. ಕಿಂಗ್‌ಪಿನ್‌ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದೇನೆ. ಸಿದ್ದರಾಮಯ್ಯ ಅವರ ಹೆಸರು ಹಾಳು ಮಾಡಲು ಸ್ಪಂಗ್‌ ಆಪರೇಷನ್‌ ನಡೆಸಲಾಗಿದೆ. ಅವರು ಅದರಲ್ಲಿ ಭಾಗವಹಿಸಿಲ್ಲ. ಸಿದ್ದರಾಮಯ್ಯ ಅವರ ವರ್ಚಸ್ಸು ಹಾಳು ಮಾಡಲು ಸಂಚು ನಡೆದಿದೆʼʼ ಎಂದಿದ್ದಾರೆ.

ತಮ್ಮ ಈ ನಿಲುವು ಯಾವುದೇ ವೈಯಕ್ತಿಕ ದ್ವೇಷಕ್ಕೆ ಅಲ್ಲ, ಬದಲಾಗಿ ಪಕ್ಷದ ಜವಾಬ್ದಾರಿ ಹಾಗೂ ನಾಡಿನ ಜನತೆಯ ಹಿತದೃಷ್ಟಿಯಿಂದ ಎಂದು ಸ್ಪಷ್ಟಪಡಿಸಿದ ಅವರು, ಪತ್ರಿಕೋದ್ಯಮಕ್ಕೆ ಕಳಂಕ ತರುತ್ತಿರುವ ಇಂತಹ ನಡವಳಿಕೆಗಳಿಗೆ ರಾಜ್ಯದಲ್ಲಿ ಸಂಪೂರ್ಣ ತೆರೆ ಎಳೆಯಬೇಕು ಎಂದು ಆಗ್ರಹಿಸಿದ್ದಾರೆ.

ಈ ಮಧ್ಯೆ ಸ್ಟಿಂಗ್ ಆಪರೇಷನ್ ವಿಷಯವಾಗಿ ಆಡಳಿತ-ಪ್ರತಿಪಕ್ಷದ ನಡುವೆ ವಾಗ್ದಾಳಿ ನಡೆಯುತ್ತಿರುವ ಹೊತ್ತಿನಲ್ಲಿ ಹಲವು ಸಚಿವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ 'ವಿವರಣೆ' ನೀಡಿರುವುದು ಕುತೂಹಲ ಕೆರಳಿಸಿದೆ.

ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ಪ್ರಶ್ನಿಸಿದ್ದಕ್ಕೆ ಟಾರ್ಗೆಟ್; ನಮ್ಮವರಿಗೆ ಕಿರುಕುಳ ಕೊಟ್ರೆ ಕೈಕಟ್ಟಿ ಕೂರಲ್ಲ ಎಂದು ಎಚ್‌ಡಿಕೆ ಕಿಡಿ

ಕೆಪಿಎಸ್‌ಸಿ ಅಕ್ರಮದ ಬಗ್ಗೆ ಹೇಳಿದ್ದೇನು?

ಇನ್ನು ಕೆಪಿಎಸ್‌ಸಿ ಅಕ್ರಮದ ಬಗ್ಗೆ ಮಾತನಾಡಿದೆ ಎಚ್‌ಡಿಕೆ, ʼʼಅಕ್ರಮ ಮುಚ್ಚಿಹಾಕಲು ತನಿಖಾಧಿಕಾರಿ ಬಗ್ಗೆಯೇ ಕಾಂಗ್ರೆಸ್‌ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಪ್ಪು ಮಾಹಿತಿ ನೀಡಿದೆ. ತಪ್ಪು ಮಾಹಿತಿ ನೀಡುವಲ್ಲಿ, ನಕಲಿ ದಾಖಲೆ ಸೃಷ್ಟಿಸುವಲ್ಲಿ ಈ ಸರ್ಕಾರ ಮುಂದಿದೆʼʼ ಎಂದು ಹೇಳಿದ್ದಾರೆ.

ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author