ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Heart Attack: ಬಿಕಾಂ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ದಿಶಾ, ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಜೆಸಿಬಿಎಂ ಕಾಲೇಜಿನಲ್ಲಿ ಬಿಕಾಂ (ಅಂತಿಮ ವರ್ಷ) ವ್ಯಾಸಂಗ ಮಾಡುತ್ತಿದ್ದಳು. ಇಂದು ಬೆಳಗ್ಗೆ ಶೃಂಗೇರಿ ಪಟ್ಟಣದ ಬಿಸಿಎಂ ಹಾಸ್ಟೆಲ್‌ನಲ್ಲಿದ್ದಾಗ (BCM Hostel) ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡು, ಕುಸಿದು ಬಿದ್ದು, ಸಾವನ್ನಪ್ಪಿದ್ದಾಳೆ.

ಮೃತ ವಿದ್ಯಾರ್ಥಿನಿ ದಿಶಾ

ಚಿಕ್ಕಮಗಳೂರು, ಡಿ.17: ರಾಜ್ಯದಲ್ಲಿ ಹೃದಯಾಘಾತದಿಂದ (Heart Attack) ಎಳೆಯ ಪ್ರಾಯದವರ ಸಾವಿನ ಪ್ರಮಾಣ ಮುಂದುವರಿದಿದೆ. 22 ವರ್ಷದ ವಿದ್ಯಾರ್ಥಿನಿ ಹೃದಯಾಘಾತಕ್ಕೆ (Heart failure) ಬಲಿಯಾಗಿರುವ ಘಟನೆ ಚಿಕ್ಕಮಗಳೂರಿನ ಶೃಂಗೇರಿ ತಾಲ್ಲೂಕಿನಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು (Student) ದಿಶಾ (22) ಎಂದು ಗುರುತಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ದಿಶಾ, ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಜೆಸಿಬಿಎಂ ಕಾಲೇಜಿನಲ್ಲಿ ಬಿಕಾಂ (ಅಂತಿಮ ವರ್ಷ) ವ್ಯಾಸಂಗ ಮಾಡುತ್ತಿದ್ದಳು. ಇಂದು ಬೆಳಗ್ಗೆ ಶೃಂಗೇರಿ ಪಟ್ಟಣದ ಬಿಸಿಎಂ ಹಾಸ್ಟೆಲ್‌ನಲ್ಲಿದ್ದಾಗ (BCM Hostel) ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡು, ಕುಸಿದು ಬಿದ್ದು, ಸಾವನ್ನಪ್ಪಿದ್ದಾಳೆ.

ತಾಯಿಯ ಕೈಯಿಂದ ಬಾವಿಗೆ ಬಿದ್ದು ಮಗು ಸಾವು

ಉಡುಪಿ: ತಾಯಿಯ (Mother) ಕೈಯಿಂದ ಜಾರಿ ಬಾವಿಗೆ ಬಿದ್ದು ಒಂದೂವರೆ ವರ್ಷದ ಮಗು (Child) ಸಾವನ್ನಪ್ಪಿರುವ ಘಟನೆ ಉಡುಪಿ (Udupi) ನಗರದ ಕಿನ್ನಿಮೂಲ್ಕಿ (Kinnimulki) ಬಳಿ ನಡೆದಿದೆ. ಕೀರ್ತನ ಮೃತ ಮಗು. ನೀರು ಸೇದುತ್ತಿದ್ದ ವೇಳೆ ತಾಯಿಯ ಕೈಯಿಂದ ಜಾರಿ ಮಗು ಬಾವಿಯೊಳಗೆ ಬಿದ್ದಿದೆ.

ಸಿನಿಮಾ ಶೂಟಿಂಗ್‌ ವೇಳೆಯೇ ನಿರ್ದೇಶಕ ಸಂಗೀತ್‌ ಸಾಗರ್‌ಗೆ ಹೃದಯಾಘಾತ, ಸಾವು

ಆಯತಪ್ಪಿ ಬಿದ್ದ ಮಗುವಿನ ರಕ್ಷಣೆಗೆ ತಕ್ಷಣವೇ ತಾಯಿ ಬಾವಿಗಿಳಿದಿದ್ದಾರೆ. ತಾಯಿ ನಯನ ಹಗ್ಗದ ಸಹಾಯದಿಂದ ಬಾವಿಗಿಳಿದಿದ್ದಾರೆ. ಆದರೆ ಅಷ್ಟುಹೊತ್ತಿಗಾಗಲೇ ಮಗು ಕೊನೆಯುಸಿರೆಳೆದಿತ್ತು. ಘಟನಾ ಸ್ಥಳಕ್ಕೆ ಉಡುಪಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹರೀಶ್‌ ಕೇರ

View all posts by this author