ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karnataka Ratna: ರಾಜ್ಯ ಸರ್ಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿ ʼಕರ್ನಾಟಕ ರತ್ನʼ ಪಡೆದ ಸಾಧಕರ ಪಟ್ಟಿ

ಸ್ಯಾಂಡಲ್‌ವುಡ್‌ನ ಮೇರು ಕಲಾವಿದರಾದ ಡಾ. ವಿಷ್ಣುವರ್ಧನ್‌ ಮತ್ತು ಬಿ. ಸರೋಜಾ ದೇವಿ ಅವರಿಗೆ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದೆ. ಈ ಧೀಮಂತ ಕಲಾವಿದರಿಗೆ ಮರಣೋತ್ತರವಾಗಿ ಪ್ರಶಸ್ತಿ ಘೋಷಿಸಲಾಗಿದ್ದು, ಅಭಿಮಾನಿಗಳ ಬಹು ದಿನಗಳ ಕನಸು ಈಡೇರಿದಂತಾಗಿದೆ.

ಬೆಂಗಳೂರು: ಸ್ಯಾಂಡಲ್‌ವುಡ್‌ನ ಮೇರು ಕಲಾವಿದರಾದ ಡಾ. ವಿಷ್ಣುವರ್ಧನ್‌ (Vishnuvardhan) ಮತ್ತು ಬಿ. ಸರೋಜಾ ದೇವಿ (B. Saroja Devi) ಅವರಿಗೆ ರಾಜ್ಯ ಸರ್ಕಾರ ಕರ್ನಾಟಕ ರತ್ನ (Karnataka Ratna) ಪ್ರಶಸ್ತಿ ಘೋಷಿಸಿದೆ. ಗುರುವಾರ (ಸೆಪ್ಟೆಂಬರ್‌ 11) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಈ ಧೀಮಂತ ಕಲಾವಿದರಿಗೆ ಮರಣೋತ್ತರವಾಗಿ ಪ್ರಶಸ್ತಿ ಘೋಷಿಸಲಾಗಿದ್ದು, ಅಭಿಮಾನಿಗಳ ಬಹು ದಿನಗಳ ಕನಸು ಈಡೇರಿದಂತಾಗಿದೆ.

ಕರ್ನಾಟಕ ಸರ್ಕಾರ ನೀಡುವ ಅತೀ ದೊಡ್ಡ ನಾಗರಿಕ ಪ್ರಶಸ್ತಿ ಇದಾಗಿದ್ದು, ವಿವಿಧ ರಂಗಗಳಲ್ಲಿ ಗಣನೀಯ ಕೊಡುಗೆ ಸಲ್ಲಿಸಿದ ಸಾಧಕರಿಗೆ ಇದನ್ನು ವಿತರಿಸಲಾಗುತ್ತದೆ. 1992ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಈ ಪ್ರಶಸ್ತಿ ಆರಂಭಿಸಿದರು. 50 ಗ್ರಾಂ ತೂಕದ ಚಿನ್ನದ ಪದಕ, ಸ್ಮರಣಿಕೆ ಮತ್ತು ಶಾಲನ್ನು ಈ ಪ್ರಶಸ್ತಿ ಒಳಗೊಂಡಿದೆ. ಇದುವರೆಗೆ 12 ಸಾಧಕರಿಗೆ ಈ ಪ್ರಶಸ್ತಿ ಸಂದಿದೆ.



ಈ ಸುದ್ದಿಯನ್ನೂ ಓದಿ: Karnataka Ratna: ವಿಷ್ಣುವರ್ಧನ್​​, ಬಿ. ಸರೋಜಾದೇವಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಘೋಷಣೆ

ಇದುವರೆಗೆ ಕರ್ನಾಟಕ ರತ್ನ ಪ್ರಶಸ್ತಿ ಪಡೆದವರ ವಿವರ

1992-ಕುವೆಂಪು (ಸಾಹಿತ್ಯ), ಡಾ. ರಾಜ್‌ಕುಮಾರ್‌ (ಸಿನಿಮಾ)

1999-ಎಸ್‌. ನಿಜಲಿಂಗಪ್ಪ (ರಾಜಕೀಯ)

2000-ಸಿ.ಎನ್‌.ಆರ್‌. ರಾವ್‌ (ವಿಜ್ಞಾನ)

2001-ದೇವಿ ಶೆಟ್ಟಿ (ವೈದ್ಯಕೀಯ)

2005-ಭೀಮ್‌ಸೇನ್‌ ಜೋಷಿ (ಸಂಗೀತ)

2007-ಶಿವಕುಮಾರ ಸ್ವಾಮಿ (ಸಮಾಜ ಸೇವೆ)

2008-ಜವರೇ ಗೌಡ (ಶಿಕ್ಷಣ, ಸಾಹಿತ್ಯ)

2009-ಡಾ. ವೀರೇಂದ್ರ ಹೆಗ್ಗಡೆ (ಸಮಾಜ ಸೇವೆ)

2022-ಪುನೀತ್‌ ರಾಜ್‌ಕುಮಾರ್‌ (ಸಿನಿಮಾ ಮತ್ತು ಸಮಾಜ ಸೇವೆ) (ಮರಣೋತ್ತರ)

2025-ವಿಷ್ಣುವರ್ಧನ್‌, ಬಿ. ಸರೋಜಾ ದೇವಿ (ಸಿನಿಮಾ) (ಮರಣೋತ್ತರ)

ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ವಿಷ್ಣುವರ್ಧನ್‌ ಅವರಿಗೆ ಕರ್ನಾಟಕ ರತ್ನ ಪ್ರಸಸ್ತಿ ದೊರೆಯಬೇಕು ಎನ್ನುವುದು ಹಲವರ ಕೋರಿಕೆಯಾಗಿತ್ತು. ಈ ಬಗ್ಗೆ ಹಲವು ಸೆಲೆಬ್ರಿಟಿಗಳು, ಅಭಿಮಾನಿಗಳು ಧ್ವನಿ ಎತ್ತಿದ್ದರು.

ವಿಷ್ಣುವರ್ಧನ್‌ ಅವರಿಗೆ ದೊರೆತ ಪ್ರಮುಖ ಪ್ರಶಸ್ತಿಗಳು

ಕನ್ನಡ ಚಿತ್ರರಂಗದ ಪ್ರಮುಖ ನಾಯಕರಾಗಿದ್ದ ವಿಷ್ಣುವರ್ಧನ್‌ ವಿವಿಧ ಭಾಷೆಯ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಅವರಿಗೆ ಹಲವು ಪ್ರತಿಷ್ಠಿತ ಪ್ರಶಸ್ತಿ ದೊರೆತಿವೆ. 8 ಬಾರಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, 7 ಬಾರಿ ಫಿಲ್ಮ್‌ಫೇರ್‌ ಅವಾರ್ಡ್‌, ತಮಿಳುನಾಡಿನ ಕಲಾದೇವಿ ಅವಾರ್ಡ್‌, ಇಂದಿರಾ ಪ್ರತಿಷ್ಠಾನ ನ್ಯಾಷನಲ್‌ ಅವಾರ್ಡ್‌, ತರಂಗಿಣಿ ಬಾರ್ಕ್ಲಿ ಪ್ರಶಸ್ತಿ ಅವರನ್ನು ಅರಸಿಕೊಂಡು ಬಂದಿದೆ.

ಬಿ. ಸರೋಜಾ ದೇವಿ ಅವರಿಗೆ ದೊರೆತ ಪ್ರಮುಖ ಪ್ರಶಸ್ತಿಗಳು

ಕನ್ನಡ ಜತೆಗೆ ಹಲವು ಭಾಷೆಗಳಲ್ಲಿ ನಟಿಸಿರುವ ಬಿ. ಸರೋಜಾ ದೇವಿ ಕೂಡ ಹಲವು ಮುಖ್ಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ಜೀವಮಾನದ ಸಾಧನೆ ಪ್ರಶಸ್ತಿ, ಪದ್ಮ ಭೂಷಣ, ಪದ್ಮ ಶ್ರೀ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ತಮಿಳುನಾಡು, ಆಂಧ್ರ ಪ್ರದೇಶದ ರಾಜ್ಯ ಚಲನಚಿತ್ರ ಪ್ರಶಸ್ತಿ, ಫಿಲ್ಮ್‌ಫೇರ್‌ ಅವಾರ್ಡ್‌, ಕರ್ನಾಟಕ ಸರ್ಕಾರದಿಂದ ಅಭಿನಯ ಸರಸ್ವತಿ ಬಿರುದು ಅವರಿಗೆ ಸಿಕ್ಕಿದೆ.