ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

2nd PUC Results 2025: ದ್ವಿತೀಯ ಪಿಯುಸಿಯಲ್ಲಿ ಈ ಬಾರಿ ರಾಜ್ಯದ ಟಾಪರ್ಸ್‌ ಇವರೇ ನೋಡಿ

2nd PUC Results 2025: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಎಕ್ಸಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಮೂಲ್ಯ ಕಾಮತ್, ವಾಣಿಜ್ಯ ವಿಭಾಗದಲ್ಲಿ ಮಂಗಳೂರಿನ ಕೆನರಾ ಪಿಯು ಕಾಲೇಜು‌ ವಿದ್ಯಾರ್ಥಿನಿ ದೀಪಶ್ರೀ ಹಾಗೂ ಕಲಾ ವಿಭಾಗದಲ್ಲಿ ವಿಜಯನಗರ ಜಿಲ್ಲೆಯ ಇಂದು ಪಿಯು ಕಾಲೇಜು ವಿದ್ಯಾರ್ಥಿನಿ ಸಂಜನಾ ಬಾಯಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ದ್ವಿತೀಯ ಪಿಯುಸಿಯಲ್ಲಿ ಈ ಬಾರಿ ರಾಜ್ಯದ ಟಾಪರ್ಸ್‌ ಇವರೇ ನೋಡಿ

ಅಮೂಲ್ಯ ಕಾಮತ್, ದೀಪಶ್ರೀ ಮತ್ತು ಸಂಜನಾ ಬಾಯಿ

Profile Prabhakara R Apr 8, 2025 5:49 PM

ಬೆಂಗಳೂರು: 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ (2nd PUC Results 2025) ಪ್ರಕಟವಾಗಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಎಕ್ಸಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಮೂಲ್ಯ ಕಾಮತ್ (600ಕ್ಕೆ 599 ಅಂಕ), ವಾಣಿಜ್ಯ ವಿಭಾಗದಲ್ಲಿ ಮಂಗಳೂರಿನ ಕೆನರಾ ಪಿಯು ಕಾಲೇಜು‌ ವಿದ್ಯಾರ್ಥಿನಿ ದೀಪಶ್ರೀ (598) ಹಾಗೂ ಕಲಾ ವಿಭಾಗದಲ್ಲಿ ವಿಜಯನಗರ ಜಿಲ್ಲೆಯ ಇಂದು ಪಿಯು ಕಾಲೇಜು ವಿದ್ಯಾರ್ಥಿನಿ ಸಂಜನಾ ಬಾಯಿ (597) ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ, ಗಮನ ಸೆಳೆದಿದ್ದಾರೆ.

ವಿಜ್ಞಾನ ವಿಭಾಗ; ಅಮೂಲ್ಯ ಕಾಮತ್​ ಪ್ರಥಮ ಸ್ಥಾನ

ವಿಜ್ಞಾನ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಎಕ್ಸಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಮೂಲ್ಯ ಕಾಮತ್ ಮೊದಲ ಸ್ಥಾನ ಪಡೆದಿದ್ದಾರೆ. ಇವರು ವಿಜ್ಞಾನ ವಿಭಾಗದಲ್ಲಿ 600ಕ್ಕೆ 599 ಅಂಕ ಪಡೆದಿದ್ದಾರೆ. ಇನ್ನು ವಿಜ್ಞಾನ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ವಾಗ್ದೇವಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಆರ್..ದೀಕ್ಷಾ 600ಕ್ಕೆ 599 ಅಂಕ ಪಡೆದಿದ್ದು, ದ್ವಿತೀಯ ಸ್ಥಾನ ಪಡೆದಿದ್ದಾರೆ. 598 ಅಂಕ ಪಡೆದು ಬಿಂದು ನವಲೆ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗ; ದೀಪಶ್ರೀ ಪ್ರಥಮ

ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡದ ಕೆನರಾ ಪಿಯು ಕಾಲೇಜು‌ ವಿದ್ಯಾರ್ಥಿನಿ ದೀಪಶ್ರೀ ಮೊದಲ ರ‍್ಯಾಂಕ್ ಗಳಿಸಿದ್ದಾರೆ. ಇವರು 599 ಅಂಕ ಗಳಿಸಿದ್ದಾರೆ. ಇನ್ನು ಕಾಮರ್ಸ್ ವಿಭಾಗದಲ್ಲಿ 598 ಅಂಕ ಪಡೆದ ಎಂ.ಎ.ತೇಜಸ್ವಿನಿ ರಾಜ್ಯಕ್ಕೆ 2ನೇ ಸ್ಥಾನ ಪಡೆದಿದ್ದಾರೆ. ಈಕೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಭಾರತಮ್ಮ ಪಿಯು ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ. ಕೋಲಾರ ಮಹಿಳಾ ಸಮಾಜ ಪಿಯು ಕಾಲೇಜಿನ ವಿದ್ಯಾರ್ಥಿನಿ ಎಚ್‌.ಬಿ. ಭಾರ್ಗವಿ 597 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.

ಕಲಾ ವಿಭಾಗ; ಸಂಜನಾ ಬಾಯಿ ಪ್ರಥಮ ರ‍್ಯಾಂಕ್‌

ಕಲಾ ವಿಭಾಗದಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕು ಗುಂಡಾ ಗ್ರಾಮದ ಲಾರಿ ಚಾಲಕ ರಾಮಾನಾಯ್ಕ್ ಮತ್ತು ಕಾವೇರಿ ಬಾಯಿ ದಂಪತಿ ಪುತ್ರಿ ಹಾಗೂ ಕೊಟ್ಟೂರಿನ ಇಂದು ಪಿಯು ಕಾಲೇಜಿನ ವಿದ್ಯಾರ್ಥಿನಿ ಸಂಜನಾಬಾಯಿ 600 ಕ್ಕೆ ‌597 ಅಂಕ ಗಳಿಸಿ ಮೊದಲ ರ್ಯಾಂಕ್ ಪಡೆದಿದ್ದಾರೆ. ಅದೇ ರೀತಿ 596 ಅಂಕ ಪಡೆದಿರುವ ವಿಜಯನಗರ ಜಿಲ್ಲೆಯ ಇಟ್ಟಿಗಿ ಗ್ರಾಮದ ಶ್ರೀಪಂಚಮಸಾಲಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಕೆ.ನಿರ್ಮಲಾ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಬೆಂಗಳೂರಿನ ಲಾ ಮಹಿಳಾ ಪಿಯು ಕಾಲೇಜಿನ ವಿದ್ಯಾರ್ಥಿನಿ ಕೆ.ಆರ್​.ಶ್ರೀಜಯದರ್ಶಿನಿ 595 ಅಂಕ ಗಳಿಸಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾರೆ.

ವಿಭಾಗವಾರು 10 ಟಾಪರ್‌ಗಳ ಪಟ್ಟಿ ಇಲ್ಲಿದೆ

ಕಲಾ ವಿಭಾಗ:

  1. ಆರ್.ಸಂಜನಾ ಬಾಯಿ (597)- ಇಂದು ಐಎನ್‌ಡಿಪಿ ಪಿಯು ಕಾಲೇಜು, ಕೊಟ್ಟೂರು, ವಿಜಯನಗರ ಜಿಲ್ಲೆ
  2. ಕೆ.ನಿರ್ಮಲಾ (596)- ಶ್ರೀ ಪಂಚಮಶಾಲಿ ಪಿಯು ಕಾಲೇಜು, ಇಟ್ಟಿಗಿ, ವಿಜಯನಗರ ಜಿಲ್ಲೆ
  3. ಕೆ.ಆರ್. ಶ್ರೀಜೆಯ ದರ್ಶಿನಿ (595)- ಮಹಾರಾಣಿ ಕಾನೂನು ಮಹಿಳಾ ಪಿಯು ಕಾಲೇಜು, ಮಲ್ಲೇಶ್ವರಂ, ಬೆಂಗಳೂರು
  4. ಇನೇಶ್ಕ ನಡುಗಡ್ಡಿ (594)- ಎಸ್‌ಕೆ ಆರ್ಟ್ಸ್‌ ಎಚ್‌ಎಸ್‌ಕೆ ಎಸ್‌ಸಿ ಪಿಯು ಕಾಲೇಜು, ವಿದ್ಯಾನಗರ, ಹುಬ್ಬಳ್ಳಿ
  5. ಕಾವೇರಿ ಪವಡಿ ಮಲ್ಲಪುರೆ (594)- ಸರ್ಕಾರಿ ಪಿಯು ಕಾಲೇಜು, ಮಜಲಟ್ಟಿ, ಚಿಕ್ಕೋಡಿ
  6. ನಾಗವೇಣಿ ಆಂಥೋನಿ ರಾಯಚೂರು (593)- ಸರ್ಕಾರಿ ಪಿಯು ಕಾಲೇಜು, ಗೋಪನಕೊಪ್ಪ, ಹುಬ್ಬಳ್ಳಿ
  7. ಪಿ.ಯುಕ್ತಶ್ರೀ (593)- ವಿವೇಕಾನಂದ ಪಿಯು ಕಾಲೇಜು, ನೆಹರು ನಗರ ಪುತ್ತೂರು, ದ.ಕನ್ನಡ
  8. ಸುನೀತ ಎಚ್ (592)-ಎಸ್‌ಯುಜೆಎಸ್‌ ಸಿಒಎಂಪಿ ಪಿಯು ಕಾಲೇಜು, ಉಜ್ಜಯಿನಿ ವಿಜಯನಗರ ಜಿಲ್ಲೆ
  9. ಗೌಥಮಿ ಬಿ (591)- ಇಂದು ಐಎನ್‌ಡಿಪಿ ಪಿಯು ಕಾಲೇಜು, ಕೊಟ್ಟೂರು, ವಿಜಯನಗರ ಜಿಲ್ಲೆ
  10. ಪ್ರಕೃತಿ.ಎನ್ (591)- ಆಳ್ವಾಸ್ ಪಿಯು ಕಾಲೇಜು, ಮೂಡುಬಿದಿರೆ, ಮಂಗಳೂರು

ವಾಣಿಜ್ಯ ವಿಭಾಗ:

  1. ದೀಪಶ್ರೀ. ಎಸ್‌ (599)- ಕೆನರಾ ಪಿಯು ಕಾಲೇಜು, ಮಂಗಳೂರು, ದಕ್ಷಿಣ ಕನ್ನಡ
  2. ತೇಜಸ್ವಿನಿ ಎಂ.ಎ.(598)- ಭಾರತ್‌ಮತಾ ಪಿಯು ಕಾಲೇಜು, ಕೊಪ್ಪ, ಮೈಸೂರು ಜಿಲ್ಲೆ
  3. ಎಚ್‌.ಬಿ. ಭಾರ್ಗವಿ (597)- ಮಹಿಳಾ ಸಮಾಜ ಪಿಯು ಕಾಲೇಜು, ಕೋಲಾರ
  4. ಪ್ರಣಯ್ ಬಾಳಾಸಾಹೇಬ್ (597)- ಅಲಗೌಡ ಆಳ್ವಾಸ್ ಪಿಯು ಕಾಲೇಜು, ಮೂಡುಬಿದಿರೆ
  5. ಪ್ರತೀಕ್ಷ.ಪಿ(597)-ಎಎಸ್‌ಸಿ ಪಿಯು ಕಾಲೇಜು, ರಾಜಾಜಿನಗರ, ಬೆಂಗಳೂರು
  6. ತಾನ್ವಿ ಹೇಮಂತ್ ಪಾಟೀಲ್ ( 597)- ಗೋಗ್ಟೆ ಪಿಯು ಕಾಲೇಜು ಆಫ್‌ ಕಾಮರ್ಸ್‌, ತಿಲಕವಾಡಿ, ಬೆಳಗಾವಿ ಜಿಲ್ಲೆ
  7. ವೈಷ್ಣವಿ ಪ್ರಸಾದ್ ಭಟ್ (597)- ಆಳ್ವಾಸ್ ಪಿಯು ಕಾಲೇಜು, ಮೂಡುಬಿದಿರೆ, ದಕ್ಷಿಣ ಕನ್ನಡ ಜಿಲ್ಲೆ
  8. ಅಮೃತವರ್ಷಿಣಿ. ಎಸ್‌ (596) ಜೈನ್ ಪಿಯು ಕಾಲೇಜು, ಜಯನಗರ, ಬೆಂಗಳೂರು
  9. ಅನೂಪ್ ಶಾವ್ನ್‌ ಗೋಮ್ಸ್‌ (596) ಎಕ್ಸಲೆಂಟ್ ಪಿಯು ಕಾಲೇಜು, ಕಳ್ಳಬೆಟ್ಟು, ಮೂಡುಬಿದಿರೆ
  10. ಧಾತ್ರಿ.ಜಿ ಸದ್ವಿದ್ಯಾ (596)-ಸೆಮಿ ರೆಸಿಡೆನ್ಷಿಯಲ್ ಪಿಯು ಕಾಲೇಜು, ವಿಜಯನಗರ, ಮೈಸೂರು

ವಿಜ್ಞಾನ ವಿಭಾಗ:

  1. ಅಮೂಲ್ಯ ಕಾಮತ್ ( 599)- ಎಕ್ಸ್‌ಪರ್ಟ್‌ ಪಿಯು ಕಾಲೇಜು, ಮಂಗಳೂರು
  2. ದೀಕ್ಷಾ.ಆರ್ (599)- ವಾಗ್ದೇವಿ ಪಿಯು ಕಾಲೇಜು, ತೀರ್ಥಹಳ್ಳಿ, ಶಿವಮೊಗ್ಗ
  3. ಬಿಂದು ನವಲೆ (598)- ಆಳ್ವಾಸ್ ಪಿಯು ಕಾಲೇಜು, ಮೂಡುಬಿದಿರೆ, ದಕ್ಷಿಣ ಕನ್ನಡ ಜಿಲ್ಲೆ
  4. ರಾಜ ಯದು ವಂಶಿ ಯಾದವ್ (598)- ಆಳ್ವಾಸ್ ಪಿಯು ಕಾಲೇಜು, ದಕ್ಷಿಣ ಕನ್ನಡ ಜಿಲ್ಲೆ
  5. ವಿಜೇತ್ ಜಿ.ಗೌಡ (598)-ಆಳ್ವಾಸ್ ಪಿಯು ಕಾಲೇಜು, ಮೂಡುಬಿದಿರೆ, ದಕ್ಷಿಣ ಕನ್ನಡ
  6. ಅದಿತಿ ವೀರೇಶ್ ಅಂಗಡಿ (597) -ಸರ್‌ಎಂವಿ ಪಿಯು ಕಾಲೇಜು, ದಾವಣಗೆರೆ ಜಿಲ್ಲೆ
  7. ಅಕ್ಷಯ ಎಂ.ಹೆಗ್ಡೆ (597)- ಆಳ್ವಾಸ್ ಪಿಯು ಕಾಲೇಜು, ಮೂಡುಬಿದಿರೆ,
  8. ಕ್ಷಮಾ ಸಿ.ಪಿ ಕಣ್ಣೂರು (597)- ವಿದ್ಯಾನಿಕೇತನ್ ಪಿಯು ಕಾಲೇಜು, ರಾಣಿಬೆನ್ನೂರು, ಹಾವೇರಿ ಜಿಲ್ಲೆ
  9. ಪ್ರಣತಿ. ಎನ್‌. ಜೆ. (597) -ಮಾಸ್ಟರ್ ಪಿಯು ಕಾಲೇಜು ನಂ 20 ಹೊಯ್ಸಳನಗರ್, ಬೀರನಹಳ್ಳಿ, ಹಾಸನ ಜಿಲ್ಲೆ
  10. ಪ್ರೇಕ್ಷಾ ಎಂ.ಎಸ್. ( 597)- ಆಳ್ವಾಸ್ ಪಿಯು ಕಾಲೇಜು, ಮೂಡುಬಿದಿರೆ, ದಕ್ಷಿಣ ಕನ್ನಡ ಜಿಲ್ಲೆ

ಈ ಸುದ್ದಿಯನ್ನೂ ಓದಿ | 2nd PUC Results 2025: ದ್ವಿತೀಯ ಪಿಯುಸಿ ಫಲಿತಾಂಶ; ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?