ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Weather Forecast: ಇಂದು ರಾಜ್ಯದಲ್ಲಿ ಹೇಗಿರಲಿದೆ ಹವಾಮಾನ? ಮಳೆ ಯಾವಾಗ?

Weather Forecast: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಮುಖ್ಯವಾಗಿ ಶುಭ್ರ ಆಕಾಶ ಇರಲಿದ್ದು, ಮಧ್ಯಾಹ್ನ ಅಥವಾ ಸಂಜೆಯ ವೇಳೆಗೆ ಭಾಗಶಃ ಮೋಡ ಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇಂದು ರಾಜ್ಯದಲ್ಲಿ ಹೇಗಿರಲಿದೆ ಹವಾಮಾನ? ಮಳೆ ಯಾವಾಗ?

Profile Prabhakara R Mar 15, 2025 6:00 AM

ಬೆಂಗಳೂರು: ರಾಜ್ಯದಾದ್ಯಂತ ಶುಕ್ರವಾರ ಒಣ ಹವೆಯ (weather forecast) ವಾತಾವರವಿತ್ತು. ಅದೇ ರೀತಿ ಮಾ. 15ರಂದು ಶನಿವಾರ ಕೂಡ ಕರ್ನಾಟಕದಲ್ಲಿ ಒಣ ಹವೆ ಇರುವ ಸಾಧ್ಯತೆ ಇದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಮುಖ್ಯವಾಗಿ ಶುಭ್ರ ಆಕಾಶ ಇರಲಿದ್ದು, ಮಧ್ಯಾಹ್ನ ಅಥವಾ ಸಂಜೆಯ ವೇಳೆಗೆ ಭಾಗಶಃ ಮೋಡ ಕವಿದ ವಾತಾವರಣವಿರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 35°C ಮತ್ತು 20°C ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇನ್ನು ಮಾ.16ರಂದು ಕೂಡ ರಾಜ್ಯದಾದ್ಯಂತ ಒಣ ಹವೆ ಇರುವ ಸಾಧ್ಯತೆಯಿದೆ. ಮಾ.17ರಂದು ಇದೇ ರೀತಿಯ ಹವಾಮಾನ ಇರಲಿದ್ದು, ಮಾ.18 ರಿಂದ 20ರವರೆಗೆ ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಮೈಸೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರುವ ಸಾಧ್ಯತೆಯಿದೆ.

ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಗುರುವಾರ ಕಲಬುರಗಿಯಲ್ಲಿ ಅತೀ ಹೆಚ್ಚು ಉಷ್ಣಾಂಶ 40.2 ಡಿ.ಸೆ ದಾಖಲಾಗಿದೆ. ಅದೇ ರೀತಿ ಚಾಮರಾಜನಗರದಲ್ಲಿ ಅತೀ ಕಡಿಮೆ ಉಷ್ಣಾಂಶ 17.6 ಡಿ.ಸೆ. ದಾಖಲಾಗಿದೆ.

ಈ ಸುದ್ದಿಯನ್ನೂ ಓದಿ | Summer Health Tips: ಬೇಸಿಗೆಯಲ್ಲಿ ಆರೋಗ್ಯಕರವಾಗಿರಲು ಇಲ್ಲಿವೆ ತಜ್ಞರ ಸಲಹೆ!

ವಿಸ್ತೃತ ಶ್ರೇಣಿಯ ಮುನ್ಸೂಚನೆ

ಹವಾಮಾನ ಇಲಾಖೆ ರಾಜ್ಯದ ಹವಾಮಾನದ ಕುರಿತ ನಾಲ್ಕು ವಾರಗಳ ವಿಸ್ತೃತ ಮುನ್ಸೂಚನೆಯನ್ನು ನೀಡಿದೆ.

ಮಾರ್ಚ್ 14 ರಿಂದ 20: ಮಳೆ ಪ್ರಮಾಣ ಸಾಮಾನ್ಯಕ್ಕಿಂತ ಕಡಿಮೆ ಇರಲಿದ್ದು, ಗರಿಷ್ಠ ತಾಪಮಾನ ಕರಾವಳಿ, ದಕ್ಷಿಣ ಕರ್ನಾಟಕದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಇರಲಿದೆ.

ಮಾರ್ಚ್ 21-27: ಸಾಮಾನ್ಯಕ್ಕಿಂತ 1-5 ಮಿ.ಮೀ. ಹೆಚ್ಚು ಮಳೆ, 1-4 ಡಿಗ್ರಿ ಸೆಲ್ಸಿಯಸ್ ಕಡಿಮೆ ಬಿಸಿಲು ಇರಲಿದೆ.

ಮಾರ್ಚ್ -28 ರಿಂದ ಏ. 3: ಸಾಮಾನ್ಯಕ್ಕಿಂತ 1-3 ಮಿಮೀ ಮಳೆ, 1-4 ಡಿಗ್ರಿ ಸೆಲ್ಸಿಯಸ್ ಕಡಿಮೆ ಗರಿಷ್ಠ ತಾಪಮಾನ ದಾಖಲಾಗಲಿದೆ.

ಮಾರ್ಚ್ 4 ರಿಂದ 10 ಏ. 10: ದಿನಕ್ಕೆ 1-3 ಮಿಮೀ ನಷ್ಟು ,ಸಾಮಾನ್ಯ ಹಾಗೂ ಸಾಮಾನ್ಯಕ್ಕಿಂತ ಹೆಚ್ಚು ಮಳೆ ಯಾಗುವ ಸಾಧ್ಯತೆ ಇದೆ. ಬಿಸಿಲು ಕಡಿಮೆ ಇರಲಿದೆ.