ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bagepally News: ವ್ಯವಹಾರಿಕ ಕೌಶಲ ಹೆಚ್ಚಿಸಲು ಮಕ್ಕಳ ಸಂತೆ ಸಹಕಾರಿ: ಆರ್.ಹನುಮಂತ ರೆಡ್ಡಿ

ವಿದ್ಯಾರ್ಥಿಗಳಲ್ಲಿ ಸ್ವ ಉದ್ಯೋಗದ ಮೂಲಕ ಸ್ವಾವಲಂಬಿ ಜೀವನ ನಡೆಸಲು ಪ್ರೋತ್ಸಾಹ ನೀಡ ಬೇಕು. ಸಂವಹನ ಕಲೆ, ವ್ಯವಹಾರ ಪ್ರಜ್ಞೆ, ಶ್ರಮದ ಮಹತ್ವ, ಸೃಜನಾತ್ಮಕ ಅಲೋಚನೆ, ಆತ್ಮ ವಿಶ್ವಾಸ ಹೆಚ್ಚಿಸುವ ಮೂಲಕ ಭವಿಷ್ಯದ ಪ್ರಜೆಗಳನ್ನು ಯಶಸ್ವಿ ವ್ಯಕ್ತಿಗಳನ್ನಾಗಿ ರೂಪಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ

ವ್ಯವಹಾರಿಕ ಕೌಶಲ ಹೆಚ್ಚಿಸಲು ಮಕ್ಕಳ ಸಂತೆ ಸಹಕಾರಿ: ಆರ್.ಹನುಮಂತ ರೆಡ್ಡಿ

-

Ashok Nayak
Ashok Nayak Mar 17, 2026 11:34 PM

ಬಾಗೇಪಲ್ಲಿ: ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಹುಟ್ಟು ಹಾಕುವ ಮೂಲಕ ಸ್ವಯಂ ಉದ್ಯೋಗದ ಕೌಶಲ(Self-employment skills)ಗಳನ್ನು ರೂಢಿಸುವಲ್ಲಿ ಮಕ್ಕಳ ಸಂತೆಯಂತಹ ಕಾರ್ಯ ಕ್ರಮ ಗಳು ಸಹಕಾರಿ ಎಂದು ಪಿ.ಎಂ.ಶ್ರೀ ಶಾಲೆಯ ಮುಖ್ಯ ಶಿಕ್ಷಕ ಆರ್.ಹನುಮಂತ ರೆಡ್ಡಿ ತಿಳಿಸಿ ದರು.

ಪಟ್ಟಣದ ಪಿ.ಎಂ.ಶ್ರೀ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಮಕ್ಕಳ ಸಂತೆ ಕಾರ್ಯಕ್ರಮವನ್ನು ಮಕ್ಕಳಿಂದ ತರಕಾರಿ, ಹಣ್ಣುಗಳು ವಸ್ತುಗಳನ್ನು ಖರೀದಿಸುವ ಮೂಲಕ ಚಾಲನೆ ನೀಡಿ ಮಾತನಾಡಿ ದರು.

ಇದನ್ನೂ ಓದಿ:Bagepally News: ಒಕ್ಕೂಟದ ಅಭಿವೃದ್ದಿಗೆ ಹಾಲು ಉತ್ಪಾಧಕರು ಕೈಜೋಡಿಸಿ: ಚಿಮುಲ್ ಅಧ್ಯಕ್ಷ ವಿ.ಮಂಜುನಾಥರೆಡ್ಡಿ

ವಿದ್ಯಾರ್ಥಿಗಳಲ್ಲಿ ಸ್ವ ಉದ್ಯೋಗದ ಮೂಲಕ ಸ್ವಾವಲಂಬಿ ಜೀವನ ನಡೆಸಲು ಪ್ರೋತ್ಸಾಹ ನೀಡ ಬೇಕು. ಸಂವಹನ ಕಲೆ, ವ್ಯವಹಾರ ಪ್ರಜ್ಞೆ, ಶ್ರಮದ ಮಹತ್ವ, ಸೃಜನಾತ್ಮಕ ಅಲೋಚನೆ, ಆತ್ಮ ವಿಶ್ವಾಸ ಹೆಚ್ಚಿಸುವ ಮೂಲಕ ಭವಿಷ್ಯದ ಪ್ರಜೆಗಳನ್ನು ಯಶಸ್ವಿ ವ್ಯಕ್ತಿಗಳನ್ನಾಗಿ ರೂಪಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ,'' ಎಂದರು.

ಪಠ್ಯದಲ್ಲಿ ಆಸಕ್ತಿಯನ್ನು ರೂಢಿಸುವಲ್ಲಿ ಪಠ್ಯೇತರ ಚಟುವಟಿಕೆಗಳು ಸಹಕಾರಿ. ಗ್ರಾಮೀಣ ಪರಂಪರೆಯ ಪರಿಚಯದೊಂದಿಗೆ ಶೈಕ್ಷ ಣಿಕ ಚಟುವಟಿಕೆಗಳಲ್ಲಿ ಮಕ್ಕಳು ಸಂತಸದಿಂದ ಪಾಲ್ಗೊಳ್ಳುವಂತೆ ಮಾಡಬೇಕಾದ್ದು ಶಿಕ್ಷಕರ ಆದ್ಯಕರ್ತವ್ಯ,'' ಎಂದರು.

ಈ ಸಂದರ್ಭದಲ್ಲಿ ಬಿ.ಆರ್.ಸಿ.ಮಂಜುನಾಥ್, ಶಿವಪ್ಪ, ಕುಶಲ್ ಕುಮಾರ್, ನಸರುದ್ದೀನ್, ಶಿಕ್ಷಕರಾದ ಧರ್ಮಪುತ್ರಿ, ಪ್ರಭಾವತಿ,ಪದ್ಮಾವತಿ ಪದ್ಮಜ, ರಜನಿ, ಕೋದಂಡರಾಮಿರೆಡ್ಡಿ, ಶ್ರೀರಾಮ, ಕವಿತ, ವಿಜಯಲಕ್ಷ್ಮಿ, ಗಣೇಶ್, ಭಾಸ್ಕರ, ಮಧುಶ್ರೀ, ಪೋಷಕರು ಹಾಗೂ ಶಾಲಾ ಮಕ್ಕಳು ಹಾಜರಿದ್ದರು.