Bank Janardhan Passes Away: ಹಾಸ್ಯನಟ ಜನಾರ್ದನ್ ಹೆಸರಿನ ಹಿಂದೆ ಬ್ಯಾಂಕ್ ಸೇರಿಕೊಂಡದ್ದು ಹೇಗೆ?
ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಜನಾರ್ದನ್ ‘ಗೌಡರ ಗದ್ದಲ’ ನಾಟಕ ಮಾಡಿದರು. ಇದರಲ್ಲಿ ಅವರ ನಟನೆ ನೋಡಿ ಅನೇಕರು ಮೆಚ್ಚಿಕೊಂಡರು. ಒಂದು ದಿನ ಇವರ ನಾಟಕವನ್ನು ಹಿರಿಯ ನಟ ಧೀರೇಂದ್ರ ಗೋಪಾಲ್ ಅವರು ನೋಡಿದರು. ಚಿತ್ರರಂಗಕ್ಕೆ ನೀವು ಬರಬೇಕು ಎಂದು ಆಹ್ವಾನ ಕೊಟ್ಟರು.

ಬ್ಯಾಂಕ್ ಜನಾರ್ದನ್

ಬೆಂಗಳೂರು: ಕನ್ನಡದಲ್ಲಿ 800ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಕನ್ನಡಗರಿಗೆ ಸದಾ ನಗುವಿನ ಕಚಗುಳಿ ನೀಡುತ್ತಿದ್ದ ಬ್ಯಾಂಕ್ ಜನಾರ್ದನ್ (comedy actor Bank Janardhan Passes Away) ಇನ್ನಿಲ್ಲ. ಹಾಸ್ಯನಟನೆಂದೇ ಖ್ಯಾತರಾದ ಅವರು ಹಲವು ಪೋಷಕ ಪಾತ್ರಗಳಲ್ಲೂ (Kannada actor) ನಟಿಸಿದ್ದರು. ಅವರ ಹೆಸರಿನ ಹಿಂದೆ ಬ್ಯಾಂಕ್ ಸೇರಿಕೊಳ್ಳಲೂ ಕುತೂಹಲಕಾರಿ ಕಾರಣವಿದೆ. ಕನ್ನಡ ಚಿತ್ರರಂಗದಲ್ಲಿ ಪೋಷಕ ನಟನಾಗಿಯೇ ಗುರುತಿಸಿಕೊಳ್ಳುವ ಮೂಲಕ ಅವರು ಸುಮಾರು 800ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.
ಜನಾರ್ದನ್ ಅವರು ಚಿತ್ರದುರ್ಗದ ಸಮೀಪದ ಹೊಳಲ್ಕೆರೆ ಬಳಿ ವಿಜಯಾ ಬ್ಯಾಂಕ್ ಬ್ರಾಂಚಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಅವರಿಗೆ ನಟನೆಯ ಬಗ್ಗೆ ತೀವ್ರ ಆಸಕ್ತಿ ಇತ್ತು. ಹೀಗಾಗಿ, ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ‘ಗೌಡರ ಗದ್ದಲ’ ನಾಟಕ ಮಾಡಿದರು. ಇದರಲ್ಲಿ ಅವರ ನಟನೆ ನೋಡಿ ಅನೇಕರು ಮೆಚ್ಚಿಕೊಂಡರು. ಒಂದು ದಿನ ಇವರ ನಾಟಕವನ್ನು ಹಿರಿಯ ನಟ ಧೀರೇಂದ್ರ ಗೋಪಾಲ್ ಅವರು ನೋಡಿದರು. ಚಿತ್ರರಂಗಕ್ಕೆ ನೀವು ಬರಬೇಕು ಎಂದು ಆಹ್ವಾನ ಕೊಟ್ಟರು. ಕೆಲ ಸಮಯ ಬಿಟ್ಟು ಜನಾರ್ಧನ್ ಅವರು ಧೀರೇಂದ್ರ ಗೋಪಾಲ್ ಅವರನ್ನು ಬೆಂಗಳೂರಿನಲ್ಲಿ ಭೇಟಿ ಆದರು. ಚಿತ್ರಗಳಲ್ಲಿ ನಟಿಸುವ ಅವಕಾಶಗಳು ಸಿಕ್ಕಿದವು.
ಜನಾರ್ಧನ್ ನಟಿಸಿದ ಮೊದಲ ಸಿನಿಮಾ ‘ಊರಿಗೆ ಉಪಕಾರಿ’. ವಿಷ್ಣುವರ್ಧನ್ ಜೊತೆ ಅವರ ಜೊತೆಗೆ. ಮೊದಲ ಚಿತ್ರದಲ್ಲೇ ಉತ್ತಮವಾಗಿ ನಟಿಸಿದರು. ಬ್ಯಾಂಕ್‌ನಲ್ಲಿ ಕೆಲಸ ಮಾಡಿಕೊಂಡೇ ಜನಾರ್ದನ್ ಅವರು 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ನಂತರ ಅವರು ಬೆಂಗಳೂರಿಗೆ ಟ್ರಾನ್ಸ್ಫರ್ ಮಾಡಿಸಿಕೊಂಡರು. ಕೊನೆಗೆ ಬ್ಯಾಂಕ್ಗೆ ಸರಿಯಾಗಿ ಹೋಗದೆ ಸಂಬಳವೇ ಇಲ್ಲದಂತಾಗಿ ಹೋಯಿತು.
ಸಣ್ಣಪುಟ್ಟ ಪಾತ್ರಗಳೇ ಆಗಿದ್ದರಿಂದ ಜನಾರ್ದನ್ ಅವರಿಗೆ ಬೇಸರ ಆಯಿತು. ಇನ್ನು ಮುಂದೆ ನಟನೆ ಮಾಡಬಾರದು ಎಂದು ಅವರು ನಿರ್ಧರಿಸಿದರು. ನಂತರ ಆರು ತಿಂಗಳು ಬ್ಯಾಂಕ್‌ನಲ್ಲಿ ಕೆಲಸ ಮಾಡಿದರು. ಇದರಿಂದ ಪ್ರಮೋಷನ್ ಕೂಡ ಸಿಕ್ಕಿತು. ಆ ಸಂದರ್ಭದಲ್ಲಿ ಕಾಶೀನಾಥ್ ಅವರು ‘ಅಜಗಜಾಂತರ’ ಹೆಸರಿನ ಸಿನಿಮಾ ಮಾಡಿದರು. ಇದರಲ್ಲಿ ಬ್ಯಾಂಕ್ ಜನಾರ್ದನ್ ಅವರಿಗೆ ದೊಡ್ಡ ಪಾತ್ರದ ಆಫರ್ ಕೊಟ್ಟರು. ಅಲ್ಲಿಂದ ಅವರ ವೃತ್ತಿ ಜೀವನ ಬದಲಾಗಿ ಹೋಯಿತು.
1948ರಲ್ಲಿ ಬ್ಯಾಂಕ್ ಜನಾರ್ಧನ್ ಅವರು ಬೆಂಗಳೂರಿನಲ್ಲಿ ಜನಿಸಿದರು. 1985ರಲ್ಲಿ ಪಿತಾಮಹ ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಉಪೇಂದ್ರ ನಿರ್ದೇಶನದ ಶ್, ತರ್ಲೆ ನನ್ ಮಗ, ಬೆಳ್ಳಿಯಪ್ಪ ಬಂಗಾರಪ್ಪ, ಜೀ ಬೂಂಬಾ, ಗಣೇಶ ಸುಬ್ರಮಣ್ಯ, ಕೌರವ ಸೇರಿದಂತೆ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬೆಟ್ಟದ ತಾಯಿ, ಪೊಲೀಸ್ ಹೆಂಡತಿ, ತರ್ಲೆ ನನ್ಮಗ ಹೀಗೆ ಹಲವು ಚಿತ್ರಗಳಲ್ಲಿ ನಟಿಸಿದರು. 2016ರಿಂದ ಈಚೆಗೆ ಅವರು ಚಿತ್ರರಂಗದಲ್ಲಿ ಕಾಣಿಸಿಕೊಂಡಿರಲಿಲ್ಲ. 2022ರ ಮಠ ಹಾಗೂ 2023ರ ಉಂಡೇನಾಮ ಚಿತ್ರದಲ್ಲಿ ನಟಿಸಿದ್ದರು. ಹಿರಿತೆರೆ ಜೊತೆ ಕಿರುತೆರೆಯಲ್ಲಿಯೂ ಬ್ಯಾಂಕ್ ಜನಾರ್ದನ್ ಕೆಲಸ ಮಾಡಿದ್ದಾರೆ. ಪಾಪ ಪಾಂಡು, ಜೋಕಾಲಿ, ರೋಬೋ ಫ್ಯಾಮಿಲಿ, ಮಾಂಗಲ್ಯ ಧಾರಾವಾಹಿಗಳಲ್ಲಿಯೂ ಕೂಡ ಬ್ಯಾಂಕ್ ಜನಾರ್ಧನ್ ಅವರು ನಟನೆ ಮಾಡಿದ್ದಾರೆ.
2023ರ ಸೆಪ್ಟಂಬರ್ 26ರಂದು ಅವರಿಗೆ ಹೃದಯಘಾತ ಆಗಿತ್ತು. ಬಳಿಕ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಂಡಿದ್ದರು.
ಇದನ್ನೂ ಓದಿ: Bank Janardhan passes away: ಹಿರಿಯ ಹಾಸ್ಯನಟ ಬ್ಯಾಂಕ್ ಜನಾರ್ದನ ಇನ್ನಿಲ್ಲ