ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Raju Adakalli's Book Release: ಡಿ.27ರಂದು ರಾಜು ಅಡಕಳ್ಳಿ ಅವರ 'ಹಾಸ್ಯ ವಿಲಾಸ' ಕೃತಿ ಲೋಕಾರ್ಪಣೆ

ಲೇಖಕ ರಾಜು ಅಡಕಳ್ಳಿ ಅವರ ನೂತನ ಕೃತಿ ʼಹಾಸ್ಯ ವಿಲಾಸʼ ಡಿ.27ರಂದು ಶನಿವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ಬೆಳಗ್ಗೆ 10 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ. ರಾಜು ಅಡಕಳ್ಳಿ ಅವರ 11ನೇ ಕೃತಿಯಾದ ಈ ʼಹಾಸ್ಯ ವಿಲಾಸʼ ದಲ್ಲಿ, ಮನಸ್ಸಿಗೆ ಮುದ ನೀಡುವ, ನವಿರಾದ ಹಾಸ್ಯ ಭರಿತ ಲೇಖನಗಳ ಸಂಗ್ರಹವಿದೆ.

ರಾಜು ಅಡಕಳ್ಳಿ ಅವರ 'ಹಾಸ್ಯ ವಿಲಾಸ' ಕೃತಿ ಲೋಕಾರ್ಪಣೆ ನಾಳೆ

ಲೇಖಕ ರಾಜು ಅಡಕಳ್ಳಿ (ಸಂಗ್ರಹ ಚಿತ್ರ) -

Profile
Siddalinga Swamy Dec 26, 2025 6:12 PM

ಬೆಂಗಳೂರು, ಡಿ.26: ಲೇಖಕ ರಾಜು ಅಡಕಳ್ಳಿ (Raju Adakalli) ಅವರ ನೂತನ ಕೃತಿ ʼಹಾಸ್ಯ ವಿಲಾಸʼ ಡಿ.27ರಂದು ಶನಿವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ಬೆಳಗ್ಗೆ 10 ಗಂಟೆಗೆ (Book Release) ಲೋಕಾರ್ಪಣೆಗೊಳ್ಳಲಿದೆ. ಸಪ್ನ ಪುಸ್ತಕ ಪ್ರಕಾಶನವು ಪ್ರಕಟಿಸಿರುವ ಈ ʼಹಾಸ್ಯ ವಿಲಾಸʼ ಕೃತಿಯು ವಿಶಿಷ್ಟ ಶೈಲಿಯ ಗದ್ಯ ಪ್ರಯೋಗ ಮತ್ತು ಸಮಕಾಲೀನ ಸ್ವಾರಸ್ಯಗಳ ನಗೆ ಡಬ್ಬಿಯಂತಿದೆ. ಕಳೆದ ಒಂದು ವರ್ಷದಲ್ಲಿ ಒಟ್ಟು ಮೂರು ಹಾಸ್ಯ ಭರಿತ ಕೃತಿಗಳನ್ನು ನೀಡಿ ಅಡಕಳ್ಳಿ ಅವರು ಹ್ಯಾಟ್ರಿಕ್ ಸಾಧಿಸಿದ್ದಾರೆ.

ಬೆಂಗಳೂರಿನ ಗಾಂಧಿ ಭವನದಲ್ಲಿ ಡಿ.27ರಂದು ಶನಿವಾರ ಬೆಳಗ್ಗೆ 10 ಗಂಟೆಗೆ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ʼಹಾಸ್ಯ ವಿಲಾಸʼ ಕೃತಿಯನ್ನು ಸಾಹಿತಿ ಡಾ. ಹಂಪ ನಾಗರಾಜಯ್ಯ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮತ್ತು ಇತರ ಪ್ರಮುಖ ಸಾಹಿತಿಗಳೊಂದಿಗೆ ಬಿಡುಗಡೆಗೊಳಿಸಲಾಗುವುದು.

ಲೇಖಕ ರಾಜು ಅಡಕಳ್ಳಿ ಅವರ 11ನೇ ಕೃತಿಯಾದ ಈ ʼಹಾಸ್ಯ ವಿಲಾಸʼ ದಲ್ಲಿ, ಮನಸ್ಸಿಗೆ ಮುದ ನೀಡುವ, ನವಿರಾದ ಹಾಸ್ಯ ಭರಿತ ಲೇಖನಗಳ ಸಂಗ್ರಹವಿದೆ. ‌

Vishweshwar Bhat's Book Release: ವಿಶ್ವೇಶ್ವರ ಭಟ್‌ ಅವರ 103ನೇ ಪುಸ್ತಕ 'ಬದುಕುಳಿದವರು ಕಂಡಂತೆʼ ಬಿಡುಗಡೆ; ಫೋಟೊಗಳು ಇಲ್ಲಿವೆ

ಅಡಕಳ್ಳಿಯವರ ಹರಟೆ ಕಷಾಯ, ರಸಗುಲ್ಲಾ ಕೃತಿಗಳ ಯಶಸ್ಸಿನ ನಂತರ, ಹಾಸ್ಯ ಪ್ರಿಯರಿಗೆ ಮತ್ತೊಮ್ಮೆ ರಸದೌತಣ ನೀಡುವ ಕೃತಿ ಇದಾಗಿದೆ ಎಂದು ಸಪ್ನ ಬುಕ್ ಹೌಸ್‌ನ ದೊಡ್ಡೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.