ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Hubballi news: ಸ್ಟಂಟ್ & ಕ್ರ್ಯಾಶ್‌ ರೀಲ್ಸ್‌ ಹುಚ್ಚಾಟಕ್ಕೆ ಬಿಜೆಪಿ ಮುಖಂಡನ ಪುತ್ರ ಬಲಿ

ಆಡಿ (AUDI) ಕಾರು ಮತ್ತು ಬೈಕ್‌ನಲ್ಲಿ ಅತೀ ವೇಗವಾಗಿ ರೈಡ್‌ ಮಾಡಿ ‘ಸ್ಟಂಟ್ ಹಾಗೂ ಕ್ರ್ಯಾಶ್’ ರೀಲ್ಸ್ ಚಿತ್ರೀಕರಿಸಲು ಈ ಬಾಲಕರು ಪ್ಲ್ಯಾನ್‌ ಮಾಡಿದ್ದರು. ವೇಗವಾಗಿ ಬಂದ ಕಾರು, ಬೈಕ್‌ನಲ್ಲಿದ್ದ ನಮೀಷ್‌ಗೆ ಬಲವಾಗಿ ಗುದ್ದಿದೆ. ಕಾರು ಬೈಕ್‌ಗೆ ಗುದ್ದಿದ ರಭಸಕ್ಕೆ ನಮೀಷ್ ಸುಮಾರು 30 ಅಡಿ ದೂರಕ್ಕೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸ್ಟಂಟ್ & ಕ್ರ್ಯಾಶ್‌ ರೀಲ್ಸ್‌ ಹುಚ್ಚಾಟಕ್ಕೆ ಬಿಜೆಪಿ ಮುಖಂಡನ ಪುತ್ರ ಬಲಿ

ಮೃತ ನಮೀಷ್ ಸಂಗಳದ -

ಹರೀಶ್‌ ಕೇರ
ಹರೀಶ್‌ ಕೇರ Mar 20, 2026 7:09 AM

ಧಾರವಾಡ, ಮಾ.20: ಅತೀ ವೇಗದ ಸ್ಟಂಟ್‌ ಮತ್ತು ಕ್ರ್ಯಾಶ್ ರೀಲ್ಸ್‌ ವಿಡಿಯೋ (Reels) ಮಾಡಲು ಹೋಗಿ ಬಿಜೆಪಿ ಮುಖಂಡ ವೀರೇಶ್ ಸಂಗಳದ ಅವರ ಪುತ್ರ ಮೃತಪಟ್ಟಿದ್ದಾನೆ. ಮೈಸೂರಿನಲ್ಲಿ 9ನೇ ತರಗತಿ ಓದುತ್ತಿದ್ದ ನಮೀಷ್ ಸಂಗಳದ (15) ಮೃತ ಬಾಲಕ. ಯುಗಾದಿ ಹಬ್ಬದ ರಜೆಗಾಗಿ ಹುಬ್ಬಳ್ಳಿಯ (Hubballi news) ಮನೆಗೆ ಬಂದಿದ್ದ ನಮೀಶ್‌ ಗುರುವಾರ ಸಂಜೆ ತನ್ನ ಸ್ನೇಹಿತನ ಜೊತೆ ಸೇರಿ ಶೇಜವಾಡಕ್ಕರ್ ಪ್ಲಾಟ್‌ಗೆ ರೀಲ್ಸ್ ಮಾಡಲು ತೆರಳಿದ್ದಾನೆ.

ಆಡಿ (AUDI) ಕಾರು ಮತ್ತು ಬೈಕ್‌ನಲ್ಲಿ ಅತೀ ವೇಗವಾಗಿ ರೈಡ್‌ ಮಾಡಿ ‘ಸ್ಟಂಟ್ ಹಾಗೂ ಕ್ರ್ಯಾಶ್’ ರೀಲ್ಸ್ ಚಿತ್ರೀಕರಿಸಲು ಈ ಬಾಲಕರು ಪ್ಲ್ಯಾನ್‌ ಮಾಡಿದ್ದರು. ವೇಗವಾಗಿ ಬಂದ ಕಾರು, ಬೈಕ್‌ನಲ್ಲಿದ್ದ ನಮೀಷ್‌ಗೆ ಬಲವಾಗಿ ಗುದ್ದಿದೆ. ಕಾರು ಬೈಕ್‌ಗೆ ಗುದ್ದಿದ ರಭಸಕ್ಕೆ ನಮೀಷ್ ಸುಮಾರು 30 ಅಡಿ ದೂರಕ್ಕೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸ್ಥಳೀಯರು ಆಡಿ ಚಾಲನೆ ಮಾಡುತ್ತಿದ್ದ 15 ವರ್ಷದ ಅಪ್ರಾಪ್ತ ಬಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಾವಿಬ್ಬರು ಸ್ನೇಹಿತರು. ನಾನು ಕಾರನ್ನು ನಿಲ್ಲಿಸಿದ್ದೆ. ಆದರೆ ಅವನೇ ಓಲಾ ಸ್ಕೂಟಿಯಲ್ಲಿ ವೇಗವಾಗಿ ಬಂದು ನನಗೆ ಗುದ್ದಿದ್ದಾನೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾನೆ. ಆಡಿ ಕಾರು ಯಾರದ್ದು ಎಂದಿದ್ದಕ್ಕೆ ತಂದೆಯವರ ಕಾರು ಎಂದು ಅಪ್ರಾಪ್ತ ಉತ್ತರಿಸಿದ್ದಾನೆ. ಮಗನನ್ನು ಕಳೆದುಕೊಂಡ ಸಂಗಳದ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

Reels craze: ರೀಲ್ಸ್‌ಗಾಗಿ ಜೀವಂತ ತಂದೆಯನ್ನೇ ಚೀಲಕ್ಕೆ ತುಂಬಿ ಪಾರ್ಸೆಲ್‌ ಮಾಡಹೊರಟ ಫ್ಯಾಮಿಲಿ!