ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Airplane tech snag: ತಾಂತ್ರಿಕ ದೋಷ, 4 ಗಂಟೆ ಆಗಸದಲ್ಲಿ ಸುತ್ತಾಡಿದ ಹೈದರಾಬಾದ್-‌ ಹುಬ್ಬಳ್ಳಿ ವಿಮಾನ, ತಪ್ಪಿದ ಭೀಕರ ಅನಾಹುತ

Fly91 ಏರ್ ಲೈನ್ಸ್ IC3401( ATRTURBOPROP AT7) ಸಂಖ್ಯೆಯ ಫ್ಲೈಟ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ನಿನ್ನೆ ಮಧ್ಯಾಹ್ನ 3 ಗಂಟೆ ಹೈದರಾಬಾದ್ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಫ್ಲೈಟ್ ಸಂಜೆ 4.30ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದ್ರೆ ಹುಬ್ಬಳ್ಳಿ ಸಮೀಪ ವಿಮಾನ ನಿಯಂತ್ರಣ ಕಳೆದುಕೊಂಡಿತ್ತು.

ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ, ಏ.20: ವಿಮಾನ ದುರಂತಗಳ (flight tragedy) ಸಂಖ್ಯೆ ಹೆಚ್ಚುತ್ತಿರುವಾಗಲೇ ರಾಜ್ಯದಲ್ಲಿ ದೊಡ್ಡ ಅನಾಹುತವೊಂದು ತಪ್ಪಿದೆ. ಹೈದರಾಬಾದ್​ನಿಂದ ಹುಬ್ಬಳ್ಳಿಗೆ (Hubballi) ಬರುತ್ತಿದ್ದ ಫ್ಲೈಟ್ ಏಕಾಏಕಿ ನಿಯಂತ್ರಣ ಕಳೆದುಕೊಂಡಿದ್ದು, ಬಳಿಕ ವಿಮಾನ (Airplane tech snag) ನಾಲ್ಕು ಗಂಟೆ ಕಾಲ ಆಕಾಶದಲ್ಲೇ ಸುತ್ತಾಡಿದೆ. ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಕಣ್ಣೀರು ಹಾಕಿರುವ ವಿಡಿಯೋ ಕೂಡ ಇದೀಗ ಕಂಡುಬಂದಿದೆ.

ಏಕಾಏಕಿ ವೇಗದ ನಿಯಂತ್ರಣ ಕಳೆದುಕೊಂಡ ಫ್ಲೈಟ್ ಅನ್ನು ಸೇಫ್ ಆಗಿ ಲ್ಯಾಂಡ್ ಮಾಡಲು ಪೈಲಟ್​​ ಹರಸಾಹಸಪಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿದ್ದ ಫ್ಲೈಟ್ ನಾಲ್ಕು ಗಂಟೆ ತಡವಾಗಿ ಬೆಂಗಳೂರಿನಲ್ಲಿ ಲ್ಯಾಂಡ್ ಆಗಿದೆ.

ಹೈದರಾಬಾದ್​ನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಫ್ಲೈಟ್​​ನಲ್ಲಿ ಅವಘಡ ಸಂಭವಿಸಿದೆ. Fly91 ಏರ್ ಲೈನ್ಸ್ IC3401( ATRTURBOPROP AT7) ಸಂಖ್ಯೆಯ ಫ್ಲೈಟ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ನಿನ್ನೆ ಮಧ್ಯಾಹ್ನ 3 ಗಂಟೆ ಹೈದರಾಬಾದ್ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಫ್ಲೈಟ್ ಸಂಜೆ 4.30ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದ್ರೆ ಹುಬ್ಬಳ್ಳಿ ಸಮೀಪ ವಿಮಾನ ನಿಯಂತ್ರಣ ಕಳೆದುಕೊಂಡಿತ್ತು.

ಹುಬ್ಬಳ್ಳಿ ಸಮೀಪಿಸುತ್ತಿದ್ದಂತೆ ಏಕಾಏಕಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಕಂಟ್ರೋಲ್ ಕಳೆದುಕೊಂಡ ಫ್ಲೈಟ್ ಆಕಾಶದಲ್ಲೇ ಸುಮಾರು ನಾಲ್ಕು ಗಂಟೆ ಕಾಲ ಸುತ್ತಾಡಿದೆ. ಮುಂಡಗೋಡ, ದಾವಣಗೆರೆ , ಶಿವಮೊಗ್ಗದಲ್ಲಿ ಸುತ್ತಾಡಿದ ಫ್ಲೈಟ್​ ಅನ್ನು ಪೈಲೆಟ್‌ ಬಳಿಕ ಸಂಜೆ 7.30ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಂದು ಲ್ಯಾಂಡ್ ಮಾಡಿದ್ದಾನೆ.

ಇದರಿಂದ ಕಂಗಾಲಾದ ಪ್ರಯಾಣಿಕರು, ಫ್ಲೈಟ್​ನಲ್ಲಿಯೇ ದೇವರಿಗೆ ಕೈಮುಗಿದು ಬೇಡಿಕೊಂಡು ಕಣ್ಣಿರು ಹಾಕಿದ್ದಾರೆ. ನಾವು ಜೀವಂತವಾಗಿ ಬರುವುದು ಅನುಮಾನ ಅಂತ ಕುಟುಂಬಸ್ಥರಿಗೆ ಮೊಬೈಲ್‌ನಲ್ಲಿ ಕೆಲವರು ಸಂದೇಶ ಕಳುಹಿಸಿದ್ದಾರೆ. ಮತ್ತೊಂದು ಕಡೆ Fly91 ಏರ್ ಲೈನ್ಸ್ ವಿರುದ್ಧ ಪ್ರಯಾಣಿಕರ ಕುಟುಂಬಸ್ಥರು ಅಸಮಾಧಾನಗೊಂಡಿದ್ದಾರೆ. ಫ್ಲೈಟ್​​​​ ನಿಯಂತ್ರಣ ಕಳೆದುಕೊಂಡ ಘಟನೆ ಬಗ್ಗೆ ಯಾವುದೇ ಮಾಹಿತಿ ನೀಡದೆ ನಿರ್ಲಕ್ಷ್ಯ ತೋರಿದ ಆರೋಪ ಮಾಡಿದ್ದಾರೆ.

ಕೊನೆಗೂ ಹುಬ್ಬಳ್ಳಿಯಲ್ಲಿ ಹವಾಮಾನ ಸಹಕರಿಸದ ಕಾರಣ ಮತ್ತು ತಾಂತ್ರಿಕ ದೋಷದ ಭೀತಿಯಿಂದಾಗಿ ಪೈಲಟ್ ವಿಮಾನವನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತಿರುಗಿಸಿದರು. ಅದೃಷ್ಟವಶಾತ್ ರಾತ್ರಿ ವೇಳೆ ಬೆಂಗಳೂರಿನಲ್ಲಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದ್ದು, 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿ ನಿಟ್ಟುಸಿರು ಬಿಟ್ಟಿದ್ದಾರೆ.

Indigo Flight Issue: ಇಂಡಿಗೋದ 4 ಫ್ಲೈಟ್ ಇನ್ಸ್‌ಪೆಕ್ಟರ್‌ಗಳ ವಜಾ; ಡಿಜಿಸಿಎ ಮಹತ್ವದ ಆದೇಶ

ಹರೀಶ್‌ ಕೇರ

View all posts by this author