Jewel Fashion 2025: ಎಥ್ನಿಕ್ ಆಭರಣಗಳ ಲಿಸ್ಟ್ಗೆ ಸೇರಿದ ಮಲ್ಟಿಪಲ್ ಜುಮಕಿ ಫ್ಯಾಷನ್
Jewel Fashion 2025: ಮಲ್ಟಿಪಲ್ ಜುಮಕಿಗಳು ಇಂದು ಎಥ್ನಿಕ್ ಜ್ಯುವೆಲರಿ ಟ್ರೆಂಡ್ನ ಟಾಪ್ ಲಿಸ್ಟ್ನಲ್ಲಿವೆ. ಒಂದೇ ಸೆಟ್ನಲ್ಲಿ ಎರಡಕ್ಕಿಂತ ಹೆಚ್ಚು ಜುಮಕಿಗಳಿರುವ ಡಿಸೈನ್ನ ಇಯರಿಂಗ್ಸ್ ಇಂದಿನ ಜ್ಯುವೆಲರಿ ಕೆಟಗರಿಯಲ್ಲಿ ಟ್ರೆಂಡಿಯಾಗಿವೆ. ಯಾವ್ಯಾವ ಬಗೆಯವು ಚಾಲ್ತಿಯಲ್ಲಿವೆ? ಸ್ಟೈಲಿಂಗ್ ಹೇಗೆ? ಎಂಬುದರ ಬಗ್ಗೆ ಇಲ್ಲಿದೆ ವಿವರ.

ಚಿತ್ರಕೃಪೆ: ಪಿಕ್ಸೆಲ್ -


ಮಲ್ಟಿಪಲ್ ಜುಮಕಿಗಳು ಇಂದು ಎಥ್ನಿಕ್ ಜ್ಯುವೆಲರಿ ಟ್ರೆಂಡ್ನ ಟಾಪ್ ಲಿಸ್ಟ್ನಲ್ಲಿವೆ. ಹೌದು, ಒಂದೇ ಸೆಟ್ನಲ್ಲಿ ಎರಡಕ್ಕಿಂತ ಹೆಚ್ಚು ಜುಮಕಿಗಳಿರುವುದು ಈ ಸೀಸನ್ನಲ್ಲಿ ಟ್ರೆಂಡಿಯಾಗಿವೆ.
ಮಲ್ಟಿಪಲ್ ಜುಮಕಿಗಳ ಜಾದೂ
ಪುಟ್ಟ ಪುಟ್ಟ ಜುಮಕಿಗಳ ಸಾಲು, ಇಲ್ಲವೇ ದೊಡ್ಡ ಜುಮಕಿಯೊಳಗಿನಿಂದ ಇಳಿ ಬಿಟ್ಟಂತಿರುವ ನೇತಾಡುವ ಪುಟ್ಟ ಪುಟ್ಟ ಜುಮಕಿಗಳು, ಇಲ್ಲವೇ ರಿಂಗ್ ಸುತ್ತ ಅಲಂಕೃತಗೊಂಡ ಸಾಲು ಸಾಲು ಜುಮಕಿಗಳು ಸೇರಿದಂತೆ ನಾನಾ ಬಗೆಯವು ಈ ಸೀಸನ್ನಲ್ಲಿ ಜ್ಯುವೆಲರಿ ಪ್ರಿಯರನ್ನು ಆಕರ್ಷಿಸಿವೆ. ಅವುಗಳಲ್ಲಿ ಕಲಾತ್ಮಕ ಮೀನಾಂಕಾರಿ ವಿನ್ಯಾಸ, ಬೆಲ್, ಹೂಪ್, ಕುಂದನ್, ಆ್ಯಂಟಿಕ್ ವಿನ್ಯಾಸದ ಮಲ್ಟಿಪಲ್ ಜುಮಕಿ ಡಿಸೈನ್ಗಳು ಬೇಡಿಕೆ ಹೆಚ್ಚಿಸಿಕೊಂಡಿವೆ. ಅವುಗಳಲ್ಲಿ ಡ್ಯಾಂಜ್ಲರ್, ಪೊಲ್ಕಿ, ಪಂಜಾಬಿ ಶೈಲಿಯ ಮಲ್ಟಿಪಲ್ ಜುಮಕಿಗಳು ಹೆಚ್ಚು ಮಾರಾಟವಾಗುತ್ತಿವೆ ಎನ್ನುತ್ತಾರೆ ಜುಮಕಿ ಮಾರಾಟಗಾರರು.

ಕಲಾತ್ಮಕ ಡಿಸೈನ್ನಲ್ಲಿ ಮಲ್ಟಿಪಲ್ ಜುಮಕಿಗಳು
ಹಿಂದೆ ಚಿನ್ನದಲ್ಲಿ ದೊರೆಯುತ್ತಿದ್ದ ಕಲಾತ್ಮಕ ಮೀನಾಕಾರಿ ಜುಮಕಿಗಳು ಪಂಜಾಬ್ ಹಾಗೂ ರಾಜಾಸ್ಥಾನ್ಗಳಲ್ಲಿ ಮಾತ್ರ ಚಾಲ್ತಿಯಲ್ಲಿದ್ದವು. ಇದೀಗ ಆರ್ಟಿಫಿಶಿಯಲ್ ಲೋಹದಲ್ಲಿ ನಾನಾ ಡಿಸೈನ್ಗಳಲ್ಲಿ ಎಲ್ಲೆಡೆ ದೊರೆಯುತ್ತಿವೆ. ಹಾಗಾಗಿ ಮಹಿಳೆಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ.
ಈ ಹಿಂದೆ ರಾಜ-ಮಹಾರಾಜರ ಕಾಲದಲ್ಲಿ ರಾಣಿಯರು ಧರಿಸುತ್ತಿದ್ದ ಭಾರಿ ಗಾತ್ರದ ಕಲಾಕಾರಿ ವಿನ್ಯಾಸ ಹಾಗೂ ಅತಿ ಬೆಲೆ ಬಾಳುವ ವಜ್ರ ವೈಢೂರ್ಯ ಹೊಂದಿದ ಪುರಾತನ ವಿನ್ಯಾಸದವು ಇಂದು ಕೃತಕ ಲೋಹದಲ್ಲಿ ಬಿಡುಗಡೆಗೊಂಡಿರುವುದು ಸಾಕಷ್ಟು ಪಾಪುಲರ್ ಆಗಿವೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ರಾಜ್.

ಗೋಲ್ಡ್ ಕೋಟೆಡ್ ಜುಮಕಿ
ಇನ್ನು, ನಾನಾ ಬಗೆಯ ಗೋಲ್ಡ್ ಕೋಟೆಡ್ ಜುಮಕಿಗಳು ಸೌತ್ ಇಂಡಿಯನ್ ಲುಕ್ನಲ್ಲೂ ಆಗಮಿಸಿರುವುದು ಎಲ್ಲಾ ವರ್ಗದ ಮಹಿಳೆಯರಿಗೂ ಪ್ರಿಯವಾಗತೊಡಗಿವೆ. ಆದರೆ, ಇವುಗಳ ಬೆಲೆ ಮಾತ್ರ ಕೊಂಚ ದುಬಾರಿ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ಸ್.

ಜುಮಕಿ ಬಳೆಗಳು/ ಮಾಟಿ
ನೇತಾಡುವ ಜುಮಕಿಗಳನ್ನು ಹೊಂದಿದ ಬಳೆಗಳು ಕೂಡ ಇಂದು ಸಾಕಷ್ಟು ಟ್ರೆಂಡಿಯಾಗಿವೆ. ಇವುಗಳೊಂದಿಗೆ ಕಿವಿಯ ಓಲೆ ಹಾಗೂ ಇಯರಿಂಗ್ಗಳಿಂದ ಹೇರ್ಸ್ಟೈಲ್ವರೆಗೂ ನೇತಾಡುವಂತೆ, ಆಕರ್ಷಕವಾಗಿ ಕಾಣುವಂತಹ ಜುಮಕಿ ಮಾಟಿಗಳು ಕೂಡ ಈ ಸೀಸನ್ನಲ್ಲೆ ಲಗ್ಗೆ ಇಟ್ಟಿವೆ. ಇವು ಕೂಡ ಮಾನಿನಿಯರಿಗೆ ಪ್ರಿಯವಾಗಿವೆ ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್ಗಳು.

ಮಲ್ಟಿಪಲ್ ಜುಮಕಿ ಧರಿಸುವವರಿಗೆ 3 ಟಿಪ್ಸ್
- ಫಿನಿಶಿಂಗ್ ಸರಿಯಾಗಿ ಇರುವಂತಹ ಮಲ್ಟಿಪಲ್ ಜುಮಕಿಗಳನ್ನು ಮಾತ್ರ ಧರಿಸಿ.
- ಲೈಟ್ವೈಟ್ ಮಲ್ಟಿಪಲ್ ಜುಮಕಿ ಆಯ್ಕೆ ಮಾಡಿ.
- ಸರಿಯಾದ ನಿರ್ವಹಣೆ ಮಾಡಿದಲ್ಲಿ ಹೆಚ್ಚು ಕಾಲ ಬಾಳಿಕೆ ಬರುವುದು.