ಭಾರತ vs ಆಸ್ಟ್ರೇಲಿಯಾ ಮಹಿಳಾ 3ನೇ ಏಕದಿನ ಪಂದ್ಯ ಮೆಲ್ಬೋರ್ನ್ ನಿಂದ ಹೋಬಾರ್ಟ್‌ಗೆ ಸ್ಥಳಾಂತರ
India vs Australia: ಫೆಬ್ರವರಿ 15 ರಿಂದ ಮಾರ್ಚ್ 9, 2026 ರವರೆಗೆ ನಡೆಯುವ ಭಾರತ ಮಹಿಳಾ ತಂಡದ ಆಸ್ಟ್ರೇಲಿಯಾ ಪ್ರವಾಸವು ಮೂರು ಟಿ20, ಮೂರು ಏಕದಿನ ಪಂದ್ಯಗಳು ಮತ್ತು ನಾಲ್ಕು ದಿನಗಳ ಏಕೈಕ ಟೆಸ್ಟ್ ಪಂದ್ಯವನ್ನು ಒಳಗೊಂಡಿದೆ.

-

ಮೆಲ್ಬೋರ್ನ್: ಮುಂದಿನ ವರ್ಷ ಮಾರ್ಚ್ 1, 2026 ರಂದು ಮೆಲ್ಬೋರ್ನ್(Melbourne)ನಲ್ಲಿ ನಿಗದಿಯಾಗಿದ್ದ ಆಸ್ಟ್ರೇಲಿಯಾ(India vs Australia) ಮತ್ತು ಭಾರತ ನಡುವಿನ ಮೂರನೇ ಮಹಿಳಾ ಏಕದಿನ ಪಂದ್ಯವು ಹೋಬಾರ್ಟ್(Hobart )ಗೆ ಸ್ಥಳಾಂತರಿಸಲಾಗಿದೆ. ಮೆಲ್ಬೋರ್ನ್‌ನ ಓವಲ್ ಮೈದಾನದಲ್ಲಿ ನವೀಕರಣ ಕಾರ್ಯ ನಡೆಯುತ್ತಿದ್ದು, ಪಂದ್ಯದ ವೇಳೆಗೆ ಹೊಸ ಫ್ಲಡ್‌ಲೈಟ್‌ಗಳು ಸಿದ್ಧವಾಗದ ಕಾರಣದಿಂದ ಅನಿವಾರ್ಯವಾಗಿ ಪಂದ್ಯವನ್ನು ಸ್ಥಳಾಂತರ ಮಾಡಲು ನಿರ್ಧರಿಸಲಾಯಿತು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಬುಧವಾರ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ಪಂದ್ಯಕ್ಕೂ ಮುನ್ನವೇ ಫ್ಲಡ್‌ಲೈಟ್‌ಗಳು ಪೂರ್ಣಗೊಳ್ಳುತ್ತವೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ನಿರೀಕ್ಷಿಸಿತ್ತು. ಆದಾಗ್ಯೂ, ಅನಿರೀಕ್ಷಿತ ಯೋಜನೆ ಮತ್ತು ನಿರ್ಮಾಣ ವಿಳಂಬಗಳದಿಂ ಇದು ಅಸಾಧ್ಯವಾಯಿತು. ಜತೆಗೆ ಎರಡನೇ ಮತ್ತು ಮೂರನೇ ಪಂದ್ಯಗಳ ನಡುವೆ ಕೇವಲ ಒಂದು ದಿನದ ಅಂತರ ಇದ್ದ ಕಾರಣ ಕಾರ್ಯಸಾಧ್ಯವಾಗಲಿಲ್ಲ.
ಫೆಬ್ರವರಿ 15 ರಿಂದ ಮಾರ್ಚ್ 9, 2026 ರವರೆಗೆ ನಡೆಯುವ ಭಾರತ ಮಹಿಳಾ ತಂಡದ ಆಸ್ಟ್ರೇಲಿಯಾ ಪ್ರವಾಸವು ಮೂರು ಟಿ20, ಮೂರು ಏಕದಿನ ಪಂದ್ಯಗಳು ಮತ್ತು ನಾಲ್ಕು ದಿನಗಳ ಏಕೈಕ ಟೆಸ್ಟ್ ಪಂದ್ಯವನ್ನು ಒಳಗೊಂಡಿದೆ.
ಇದನ್ನೂ ಓದಿ Asia Cup 2025: ಏಷ್ಯಾ ಕಪ್‌ನಲ್ಲಿ ಭಾರತ ಅತ್ಯಂತ ಯಶಸ್ವಿ ತಂಡ; ಅತ್ಯಧಿಕ 8 ಸಲ ಚಾಂಪಿಯನ್ ಆದ ಹೆಗ್ಗಳಿಕೆ
ಸರಣಿಯ ವೇಳಾಪಟ್ಟಿ
ಮೊದಲ T20I: ಫೆ. 15, 2026; ಸಿಡ್ನಿ ಕ್ರಿಕೆಟ್ ಮೈದಾನ
2ನೇ T20I: ಫೆ. 19, 2026; ಮನುಕಾ ಓವಲ್, ಕ್ಯಾನ್‌ಬೆರಾ
3ನೇ T20I: ಫೆ. 21, 2026; ಅಡಿಲೇಡ್ ಓವಲ್, ಅಡಿಲೇಡ್
1ನೇ ODI: ಫೆ. 24, 2026; ಅಲನ್ ಬಾರ್ಡರ್ ಫೀಲ್ಡ್, ಬ್ರಿಸ್ಬೇನ್
2ನೇ ODI: ಫೆ. 27, 2026; ಬೆಲ್ಲೆರಿವ್ ಓವಲ್, ಹೋಬಾರ್ಟ್
3ನೇ ODI: ಮಾ.1, 2026; ಬೆಲ್ಲೆರಿವ್ ಓವಲ್, ಹೋಬಾರ್ಟ್
ಏಕೈಕ ಟೆಸ್ಟ್: ಮಾ. 6-9 2026; ಪರ್ತ್