BBK 12: ಬಿಗ್ ಬಾಸ್ಗೆ ಹೋಗಲಿದ್ದಾರೆ ಎಂದವರಿಗೆ ವಿಡಿಯೋ ಮೂಲಕ ಬಿಸಿ ಮುಟ್ಟಿಸಿದ ಸುಧಾರಾಣಿ
ಕ ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭಕ್ಕೆ ದಿನಗಣನೆ ಶುರುವಾಗಿದೆ. ನ್ನಡ ಹಿರಿತೆರೆ ಮತ್ತು ಕಿರಿತೆರೆಯಲ್ಲಿ ಗುರಿತಿಸಿರುವ ಚಂದನವನದ ಎವರ್ ಗ್ರೀನ್ ನಟಿ ಸುಧಾರಾಣಿ ಈ ಬಾರಿಯ ಬಿಗ್ ಬಾಸ್ ಸ್ಪರ್ಧಿ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದೆ. ಆದರೀಗ ಬಿಗ್ ಬಾಸ್ಗೆ ಹೋಗುವ ಬಗ್ಗೆ ಸುಧಾರಾಣಿ ಸ್ಪಷ್ಟನೆ ಕೊಟ್ಟಿದ್ದಾರೆ.

Sudharani BBK 12 -

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇದೇ ಸೆಪ್ಟೆಂಬರ್ 28 ರಿಂದ ದೊಡ್ಮನೆ ಆಟ ಶುರುವಾಗಿದೆ. ಸಾಮಾನ್ಯವಾಗಿ ಬಿಗ್ ಬಾಸ್ ಪ್ರತಿ ಸೀಸನ್ ಆರಂಭಕ್ಕೂ ಮೊದಲು ಒಂದಷ್ಟು ಹೆಸರುಗಳು ಓಡಾಡುತ್ತವೆ. ಇದರಲ್ಲಿ ಅರ್ಧ ಸತ್ಯ- ಇನ್ನರ್ಧ ಸುಳ್ಳು ಇರುತ್ತದೆ. ಈ ಬಾರಿ ಕೂಡ ಸೋಷಿಯಲ್ ಮೀಡಿಯಾದಲ್ಲಿ ಬಿಬಿಕೆ 12 ಹೋಗುವ ಸ್ಪರ್ಧಿಗಳು ಇವರೇ ಎಂದು ಅನೇಕ ಲಿಸ್ಟ್ಗಳು ವೈರಲ್ ಆಗುತ್ತಿವೆ. ಈ ಲಿಸ್ಟ್‌ನಲ್ಲಿ ಕನ್ನಡದ ನಟಿ ಸುಧಾರಾಣಿ ಹೆಸರು ಕೂಡ ಇದೆ.
ಹೌದು, ಕನ್ನಡ ಹಿರಿತೆರೆ ಮತ್ತು ಕಿರಿತೆರೆಯಲ್ಲಿ ಗುರಿತಿಸಿರುವ ಚಂದನವನದ ಎವರ್ ಗ್ರೀನ್ ನಟಿ ಸುಧಾರಾಣಿ ಈ ಬಾರಿಯ ಬಿಗ್ ಬಾಸ್ ಸ್ಪರ್ಧಿ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದೆ. ಇದಕ್ಕೆ ಪುಷ್ಠಿ ಎಂಬಂತೆ ಇತ್ತೀಚೆಗಷ್ಟೆ ಝೀ ಕನ್ನಡ ವಾಹಿನಿಯಲ್ಲಿ ಇವರು ನಟಿಸುತ್ತಿದ್ದ ಶ್ರೀರಸ್ತು ಶುಭಮಸ್ತು ಧಾರಾವಾಹಿ ಮುಕ್ತಾಯಗೊಂಡಿತು. ಹೀಗಾಗಿ ಅವರು ಬಿಗ್ ಬಾಸ್‌ಗೆ ಹೋಗೋದು ಪಕ್ಕ ಎಂಬ ಮಾಹಿತಿ ವೈರಲ್ ಆಗಿತ್ತು.
ಈ ಹಿಂದೆ ನಟಿ ಶ್ರುತಿ ಅವರು ಬಿಗ್ ಬಾಸ್ ಸೀಸನ್ 3ರಲ್ಲಿ ಸ್ಪರ್ಧಿಸಿದ್ದರು. ಅವರೇ ಗೆದ್ದಿದ್ದರು.. ಇನ್ಯಾವುದೇ ಸೀಸನ್‌ನಲ್ಲಿ ಮಹಿಳಾ ಸ್ಪರ್ಧಿಗಳು ಗೆದ್ದಿಲ್ಲ. ಈ ಬಾರಿ ಸುಧಾರಾಣಿ ಅವರು ಬಿಗ್ ಬಾಸ್ ಬಂದರೆ ಅವರೇ ವಿನ್ ಆಗುತ್ತಾರೆ ಎಂಬ ಪೋಸ್ಟ್ ಹರಿದಾಡಿತ್ತು. ಆದರೀಗ ಬಿಗ್ ಬಾಸ್ಗೆ ಹೋಗುವ ಬಗ್ಗೆ ಸುಧಾರಾಣಿ ಸ್ಪಷ್ಟನೆ ಕೊಟ್ಟಿದ್ದಾರೆ.
ಬಿಗ್ ಬಾಸ್ ಕನ್ನಡ 12 ಕಾರ್ಯಕ್ರಮದ ಕನ್‌ಫರ್ಮ್ಡ್ ಕಂಟೆಸ್ಟೆಂಟ್ ಸುಧಾರಾಣಿ ಎಂದು ಬರೆಯಲಾದ ವೈರಲ್ ಫೋಟೋವನ್ ಸ್ಕ್ರೀನ್ ಶಾಟ್ ತೆಗೆದುಕೊಂಡು ‘ಯಾರು ಹೇಳಿದ್ದು?’ ಎಂಬ ತಮ್ಮ ಡೈಲಾಗ್ ಅನ್ನೇ ಮಿಕ್ಸ್ ಮಾಡಿ ವಿಡಿಯೋ ಪೋಸ್ಟ್ ಮಾಡಿದ್ದಾರೆ ಸುಧಾರಾಣಿ. ಅಲ್ಲಿಗೆ, ಸುಧಾರಾಣಿ ಬಿಗ್ ಬಾಸ್ ಕನ್ನಡ 12 ಸ್ಪರ್ಧಿ ಅಲ್ಲ ಎಂಬುದು ಸ್ಪಷ್ಟವಾಗಿದೆ. ಸದ್ಯ ಈ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.
ಬಿಗ್ ಬಾಸ್ ಸಂಭಾವ್ಯ ಸ್ಪರ್ಧಿಗಳ ಲಿಸ್ಟ್‌ನಲ್ಲಿ ಸುಧಾರಾಣಿ ಹೆಸರು ಬಂದಿರುವುದು ಇದೇ ಮೊದಲೇನಲ್ಲ. ಈ ಹಿಂದಿನ ಸೀಸನ್‌ಗಳಲ್ಲೂ ಸುಧಾರಾಣಿ ಹೆಸರು ಕೇಳಿಬಂದಿತ್ತು. ಆಗಲೂ ತಾವು ಹೋಗಲ್ಲ ಎಂದು ನಟಿ ಹೇಳಿದ್ದರು. ಈಗಲೂ ಬಿಗ್ ಬಾಸ್ಗೆ ಹೋಗುತ್ತಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
Bhagya Lakshmi Serial: ಸನ್ಮಾನ ಕಾರ್ಯಕ್ರಮದಲ್ಲಿ ಭಾಗ್ಯಾಳನ್ನು ಹಾಡಿಹೊಗಳಿದ ಆದೀಶ್ವರ್