ಕಲಬುರಗಿ: ವಿಶೇಷ ಸ್ಥಾನಮಾನದ ಮೂಲಕ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಕಲ್ಯಾಣ ಕರ್ನಾಟಕಕ್ಕೆ ಗುರುವಾರ ಭೇಟಿ ನೀಡಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಏಳು ಜಿಲ್ಲೆಗಳಿಗೆ ಸಂಬಂಧಿಸಿದ 1,917.13 ಕೋಟಿ ರು. ಮೊತ್ತದ 940 ಕಾಮಗಾರಿಗಳಿಗೆ ಚಾಲನೆ ನೀಡಿದರು. ಇದರಲ್ಲಿ ಕೆಕೆಆರ್ಡಿಬಿಯ 768.75 ಕೋಟಿ ರು. ಮೊತ್ತದ 687 ಕಾಮಗಾರಿಗಳು ಮತ್ತು ಇತರೆ ಇಲಾಖೆಯ 1,148.38 ಕೋಟಿ ರೂ. ಮೊತ್ತದ 253 ಕಾಮಗಾರಿಗಳು ಸೇರಿವೆ.
ಈ ವೇಳೆ ಮಾತನಾಡಿದ ಅವರು ಕಲ್ಯಾಣ ಭಾಗಕ್ಕೆಂದೇ, ಉದ್ಯೋಗ ಸೃಷ್ಟಿ, ಮಾನವ ಸಂಪನ್ಮೂಲ, ಆರೋಗ್ಯ ಸೇವೆ ಹಾಗೂ ಬಂಡವಾಳ ಹೂಡಿಕೆಗೆ ಆದ್ಯತೆ ನೀಡುವ 10 ವಿಶೇಷ ಯೋಜನೆಗಳನ್ನು ಪ್ರಕಟಿಸಿದರು. ಕಲಬುರಗಿಯಲ್ಲಿ 79ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಗುರುವಾರ ಧ್ವಜಾ ರೋಹಣ ನೆರವೇರಿಸಿ ಮಾತನಾಡಿದರು.
‘371(ಜೆ) ಅಡಿ ಕಳೆದ 12 ವರ್ಷಗಳಲ್ಲಿ ಸುಮಾರು 25 ಸಾವಿರ ಕೋಟಿ ರು. ವಿಶೇಷ ಅನುದಾನ ಒದಗಿಸಲಾಗಿದೆ. ಇದರಲ್ಲಿ 14 ಸಾವಿರ ಕೋಟಿ ರು. ಬಳಕೆಯಾಗಿದ್ದು, 41,103 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. 32,985 ಕಾಮಗಾರಿಗಳು ಪೂರ್ಣಗೊಂಡಿದ್ದು, 8118 ಕಾಮಗಾರಿಗಳು ವಿವಿಧ ಹಂತಗಳಲ್ಲಿ ಸಾಗುತ್ತಿವೆ’ ಎಂದು ಮುಖ್ಯಮಂತ್ರಿ ವಿವರಿಸಿದರು.
ವಿಶೇಷ ಸ್ಥಾನಮಾನದಡಿ 79,383 ಯುವಜನರಿಗೆ ಸರಕಾರಿ ಉದ್ಯೋಗ ದೊರೆತಿದೆ. ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ 72 ಸಾವಿರ ಸರಕಾರಿ ಹುದ್ದೆಗಳ ನೇಮಕಾತಿಯಲ್ಲಿ 32 ಸಾವಿರ ಹುದ್ದೆಗಳು ಕಲ್ಯಾಣ ಕರ್ನಾಟಕದ ಪಾಲಾಗಲಿವೆ. ವೈದ್ಯಕೀಯ ಕ್ಷೇತ್ರದಲ್ಲಿ 10 ಸಾವಿರಕ್ಕೂ ಅಧಿಕ ಹಾಗೂ ಎಂಜಿನಿಯರಿಂಗ್ನಲ್ಲಿ 31 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿ ಗಳಿಗೆ ಅವಕಾಶ ಸಿಕ್ಕಿದೆ ಎಂದು ಹೇಳಿದರು.
ಪ್ರದೇಶವನ್ನು ಆರೋಗ್ಯ ಸೇವೆಯ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ಉದ್ದೇಶದಿಂದ ಯಾದಗಿರಿ, ಕೊಪ್ಪಳ ಮತ್ತು ಬೀದರ್ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಕ್ರಮ ಕೈಗೊಳ್ಳ ಲಾಗುತ್ತಿದೆ. ಇಂದಿರಾಗಾಂಧಿ ತಾಯಿಮಗು ಆಸ್ಪತ್ರೆ, ಕಿದ್ವಾಯಿ ಹಾಗೂ ಜಯದೇವ ಸಂಸ್ಥೆಗಳ ಸೇವಾ ವಿಸ್ತರಣೆಗೆ 423 ಕೋಟಿ ರು. ವಿನಿಯೋಗಿಸಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಮೀಣ ಸಂಪರ್ಕ ವ್ಯವಸ್ಥೆ ಸುಧಾರಿಸಲು 38 ವಿಧಾನಸಭಾ ಕ್ಷೇತ್ರಗಳಲ್ಲಿ 1150 ಕಿ.ಮೀ. ರಸ್ತೆ ಕಾಮಗಾರಿಗೆ 1000 ಕೋಟಿ ರು. ಮೀಸಲಿಡಲಾಗಿದೆ. ಕಲಬುರಗಿಯಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ 11770 ಕೋಟಿ ರು. ಮೊತ್ತದ ಯೋಜನೆಗಳಿಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದರು. ಮುಂದಿನ ದಿನಗಳಲ್ಲಿ ಪ್ರದೇಶದ ಆರ್ಥಿಕತೆ ಯನ್ನು ಕೃಷಿ ಅವಲಂಬನೆಯಿಂದ ಕೈಗಾರಿಕೆ, ಸಂಸ್ಕರಣೆ, ನವೋದ್ಯಮ ಹಾಗೂ ಪ್ರವಾಸೋದ್ಯ ಮದತ್ತ ವಿಸ್ತರಿಸುವ ಉದ್ದೇಶದ ಯೋಜನೆಗಳೂ ಘೋಷಣೆಯಾಗಿವೆ. ಇದಕ್ಕಾಗಿ ಕಲ್ಯಾಣ ಎಕಾ ನಮಿ ಮಿಷನ್, ಬಯೋ ಎಕಾನಮಿ ಮಿಷನ್ ಸ್ಥಾಪಿಸಲಾಗುತ್ತೆ ಎಂದು ಸಿಎಂ ಹೇಳಿದರು.
ಸಚಿವರಾದ ಪ್ರಿಯಾಂಕ್ ಖರ್ಗೆ, ಶಾಸಕರಾದ ಅಲ್ಲಮಪ್ರಭು ಪಾಟೀಲ, ಎಂ ವೈ ಪಾಟೀಲ್, ಬಿ.ಆರ್ ಪಾಟೀಲ್, ಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ಜಗದೇವ ಗುತ್ತೇದಾರ್, ಪ್ರವೀಣ್ ಪಾಟೀಲ್ ಹರವಾಳ, ಹೋರಾಟಗಾರ ಲಕ್ಷ್ಮಣ ದಸ್ತಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 1 ವರ್ಷ 11 ತಿಂಗಳು ಬಳಿಕ ನಮ್ಮ ಕಲ್ಯಾಣ ಕರ್ನಾಟಕಕ್ಕೆ ಸ್ವಾತಂತ್ರ್ಯ ಸಿಕ್ಕಿದೆ.
10 ಕಲ್ಯಾಣ ಕಾರ್ಯ
ಕಲ್ಯಾಣ ಕರ್ನಾಟಕ ಎಕಾನಮಿ ಮಿಷನ್ ಸ್ಥಾಪನೆ, ಕೈಗಾರಿಕೆ ಬೆಳವಣಿಗೆ ಆದ್ಯತೆ, ಬಂಡವಾಳ ಹೂಡಿಕೆಗೆ ಉತ್ತೇಜನ
ಜೈವಿಕ ಆರ್ಥಿಕ ಮಿಷನ್ ಸ್ಥಾಪಿಸಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಆದ್ಯತೆ
ರಕ್ತಹೀನತೆ ವಿರುದ್ಧ ಎರಡು ವರ್ಷಗಳ ವಿಶೇಷ ಅಭಿಯಾನಕ್ಕೆ ಚಾಲನೆ
ಕಲಬುರಗಿ ಮೂಲಸೌಕರ್ಯ ಅಭಿವೃದ್ಧಿಗೆ ಮೇಲ್ಸೇತುವೆ, ಹೊರವರ್ತುಲ ರಸ್ತೆಗಳ ನಿರ್ಮಾಣ, ಕೆರೆ ಉದ್ಯಾನ ಯೋಜನೆ.
ನಿವೇಶನರಹಿತ ಕುಟುಂಬಗಳಿಗೆ 50 ಸಾವಿರ ನಿವೇಶನಗಳ ಹಂಚಿಕೆ
30 ಎಕರೆ ಪ್ರದೇಶದಲ್ಲಿ ಐಟಿ ಪಾರ್ಕ್, ಯುವ ಉದ್ಯಮಿಗಳಿಗೆ KRIYA ಸ್ಥಾಪನೆ.
7 ಎಐ ಆಧಾರಿತ ಸಿಸಿಟಿವಿ ಕ್ಯಾಮೆರಾ ಜಾಲದ ಮೂಲಕ ಸಂಚಾರ, ನಾಗರಿಕ ಸೇವೆಗಳ ಮೇಲ್ವಿಚಾರಣೆ, ನಿರ್ವಹಣೆ
8 ಪ್ರವಾಸೋದ್ಯಮ ಸರ್ಕಿಟ್ ಅಭಿ ವೃದ್ಧಿಗೆ ಕ್ರಮ, ಗಾಣಗಾಪುರ ದೇವ ಸ್ಥಾನಕ್ಕೆ ಮೊದಲ ಹಂತದಲ್ಲಿ 50 ಕೋಟಿ ರು. ಅನುದಾನ ನೀಡಿಕೆ
9 ಚಂದ್ರಶೇಖರ ಪಾಟೀಲ್ ಕ್ರೀಡಾಂಗಣ ಪುನರಾಭಿವೃದ್ಧಿ, ಹಡಗಿಲ ಹಾರುತಿ ಪ್ರದೇಶದಲ್ಲಿ ಬೃಹತ್ ಕ್ರೀಡಾನಗರ ಸ್ಥಾಪನೆಗೆ ನಿರ್ಧಾರ
೧೦ ಕೋಟಿ ವೃಕ್ಷ ಅಭಿಯಾನದಡಿ ಎರಡು ವರ್ಷಗಳಲ್ಲಿ ಒಂದು ಕೋಟಿ ಗಿಡ ನೆಡುವ ಗುರಿ.
![]()
ಕಲ್ಯಾಣ ಕರ್ನಾಟಕದ ಯುವಶಕ್ತಿ ಹಾಗೂ ಇಲ್ಲಿನ ನೈಸರ್ಗಿಕ ಸಂಪನ್ಮೂಲಗಳ ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ, ಉದ್ಯಮಿಗಳಿಗೆ ಅವಕಾಶ, ಪ್ರವಾಸಿ ತಾಣಗಳಿಗೆ ಮೂಲಸೌಕರ್ಯ ಕಲ್ಪಿಸಿ ಹೊಸ ಆರ್ಥಿಕ ಚಟುವಟಿಕೆ ಸೃಷ್ಟಿಸು ವುದು ನಮ್ಮ ಉದ್ದೇಶ.
-ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ