ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Srikanth Shetty Karkala: ಅಂಬೇಡ್ಕರ್‌ರಿಂದ ಹಿಂದೂ ಸಮಾಜ ಬಲಪಡಿಸುವ ಕಾರ್ಯ: ಶ್ರೀಕಾಂತ್ ಶೆಟ್ಟಿ

ಕಲಬುರಗಿ ಕೋಟೆಯ ಮುಂಭಾಗದಲ್ಲಿ ಪ್ರತಿಷ್ಠಾಪನೆಗೊಂಡಿರುವ ಹಿಂದೂ ಮಹಾಗಣಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಅಂಬೇಡ್ಕರ್ ರಚಿಸಿದ ಹಿಂದೂ ಕೋಡ್ ಬಿಲ್‌ನಲ್ಲಿ ಕ್ರೈಸ್ತ, ಮುಸ್ಲಿಂ, ಯಹೂದಿ ಹಾಗೂ ಪಾರ್ಸಿಗಳನ್ನು ಹೊರತುಪಡಿಸಿ ಉಳಿದವರನ್ನು ಹಿಂದೂಗಳೆಂದು ಪರಿಗಣಿಸುವ ಮೂಲಕ ಸಮಾಜವನ್ನು ಏಕಸೂತ್ರದಡಿ ತರಲು ಪ್ರಯತ್ನಿಸ ಲಾಗಿತ್ತು ಎಂದರು.

ದಲಿತರಿಂದ ಹಿಂದೂ ಸಮಾಜವನ್ನು ಪ್ರತ್ಯೇಕಿಸುವ ಪ್ರಯತ್ನ ಸಲ್ಲದು

ಅಸ್ಪೃಶ್ಯತೆ ನಿವಾರಣೆಗೆ ಅಂಬೇಡ್ಕರ್, ಸಾವರ್ಕರ್, ಸಂಘದ ಕೊಡುಗೆ

ಕಲಬುರಗಿ: ಡಾ.ಬಿ.ಆರ್.ಅಂಬೇಡ್ಕರ್(Dr B R Ambedkar) ಅವರು ಶಿಕ್ಷಣ, ಸಾಮಾಜಿಕ ಸುಧಾರಣೆ ಹಾಗೂ ಸಮಾನತೆ ಯ ಮೂಲಕ ಹಿಂದೂ ಸಮಾಜವನ್ನು ಬಲಪಡಿಸುವ ಮಹತ್ವದ ಕಾರ್ಯ ಮಾಡಿದ್ದಾರೆ. ಆದರೆ, ಅಂಬೇಡ್ಕರ್ ಅವರ ಹೆಸರನ್ನೇ ಬಳಸಿಕೊಂಡು ಹಿಂದೂ ಸಮಾಜವನ್ನು ದಲಿತರಿಂದ ಪ್ರತ್ಯೇಕಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹಿಂದು ಜಾಗರಣ ವೇದಿಕೆ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ(Srikanth Shetty Karkala)ಆರೋಪಿಸಿದರು.

ಕಲಬುರಗಿ ಕೋಟೆಯ ಮುಂಭಾಗದಲ್ಲಿ ಪ್ರತಿಷ್ಠಾಪನೆಗೊಂಡಿರುವ ಹಿಂದೂ ಮಹಾಗಣಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಅಂಬೇಡ್ಕರ್ ರಚಿಸಿದ ಹಿಂದೂ ಕೋಡ್ ಬಿಲ್‌ನಲ್ಲಿ ಕ್ರೈಸ್ತ, ಮುಸ್ಲಿಂ, ಯಹೂದಿ ಹಾಗೂ ಪಾರ್ಸಿಗಳನ್ನು ಹೊರತುಪಡಿಸಿ ಉಳಿದವರನ್ನು ಹಿಂದೂಗಳೆಂದು ಪರಿಗಣಿಸುವ ಮೂಲಕ ಸಮಾಜವನ್ನು ಏಕಸೂತ್ರದಡಿ ತರಲು ಪ್ರಯತ್ನಿಸ ಲಾಗಿತ್ತು ಎಂದರು.

ಇದನ್ನೂ ಓದಿ: Shrikanth Shetty Karkala: ರೌಡಿಶೀಟರ್ ದಾಖಲೆಯೊಂದೇ ನಿರ್ಬಂಧಕ್ಕೆ ಕಾರಣವಾಗದು; ಶ್ರೀಕಾಂತ್ ಶೆಟ್ಟಿ ಕಾರ್ಕಳ ಭಾಷಣಕ್ಕೆ ಹೈಕೋರ್ಟ್ ಷರತ್ತುಬದ್ಧ ಅಸ್ತು

ಅಸ್ಪೃಶ್ಯತೆ ದಲಿತರ ಕೇರಿಗಳಲ್ಲಿಲ್ಲ; ಅದು ನಮ್ಮ ಮನಸ್ಸಿನಲ್ಲಿರುವ ಮಡಿವಂತಿಕೆಯಲ್ಲಿ ಇದೆ. ಆ ಮನಸ್ಥಿತಿಯನ್ನು ಮೊದಲು ಕಿತ್ತೊಗೆದು ಸಾಮಾಜಿಕ ಏಕತೆ ಬೆಳೆಸಬೇಕು. ಅಸ್ಪೃಶ್ಯತೆ(Untouchability) ವಿರುದ್ಧ ಸಾವರ್ಕರ್(Savarkar), ಅಂಬೇಡ್ಕರ್(Ambedkar), ಆರ್‌ಎಸ್‌ಎಸ್(RSS) ಹಾಗೂ ಆರ್ಯ ಸಮಾಜ ನಿರಂತರವಾಗಿ ಕೆಲಸ ಮಾಡಿವೆ ಎಂದು ಹೇಳಿದರು.

ಇನ್ನು, ನಿಜಾಮರ ಆಳ್ವಿಕೆಯಲ್ಲಿ ಭಜನೆ, ಸತ್ಸಂಗ, ಮೆರವಣಿಗೆಗೂ ನಿರ್ಬಂಧವಿತ್ತು. ರಜಾಕಾರರ ಹಿಂಸಾಚಾರಕ್ಕೆ ಅಂತ್ಯ ಹಾಡಲು ಸರ್ದಾರ್ ಪಟೇಲರು ‘ಆಪರೇಷನ್ ಪೋಲೋ’ ಮೂಲಕ ದಿಟ್ಟ ಹೆಜ್ಜೆ ಇಟ್ಟರು. ದೇಶದ ಸ್ವಾತಂತ್ರ್ಯ ಕೇವಲ ಅಹಿಂಸೆಯಿಂದ ಬಂದಿಲ್ಲ; ಗಾಂಧೀಜಿ ಅವರ ಹೋರಾಟದ ಜತೆಗೆ ಸಾವಿರಾರು ಕ್ರಾಂತಿಕಾರಿಗಳ ತ್ಯಾಗವೂ ಕಾರಣವಾಗಿದೆ ಎಂದರು.

ಮುಂದಿನ ಪೀಳಿಗೆಗೆ ಯಾವ ಭಾರತವನ್ನು ಬಿಟ್ಟು ಹೋಗಬೇಕು ಎಂಬುದನ್ನು ಆಲೋಚಿಸಬೇಕು. ಹಿಂದೂ ಸಮಾಜ ಬಲಿಷ್ಠವಾಗಿದ್ದರೆ ಸಂವಿಧಾನ, ನ್ಯಾಯ ವ್ಯವಸ್ಥೆ ಹಾಗೂ ದೇಶದ ಸಾರ್ವಭೌಮತೆ ಸುರಕ್ಷಿತವಾಗಿರುತ್ತದೆ ಎಂದು ಹೇಳಿದರು.

Srikanth Shetty Karkala 2

ಕಾರ್ಯಕ್ರಮದಲ್ಲಿ ಮಾಜಿ ಸಂಸದ ಉಮೇಶ್ ಜಾಧವ, ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಬೆಣೂರ, ಅಂಬಾರಾಯ ಅಷ್ಪಗಿ, ಶಿವಯೋಗಿ ನಾಗನಳ್ಳಿ, ಪ್ರಶಾಂತ ಗುಡ್ಡ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಪೊಲೀಸ್ ನಿರ್ಬಂಧಕ್ಕೆ ಕೋರ್ಟ್‌ ತಡೆ; ಶ್ರೀಕಾಂತ್ ಶೆಟ್ಟಿ ಭಾಷಣ

ಪೊಲೀಸ್ ಇಲಾಖೆ ಕಲಬುರಗಿ ನಗರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರೂ, ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರಿಗೆ ಹಿಂದೂ ಮಹಾಗಣಪತಿ ಉತ್ಸವದಲ್ಲಿ ಮಾತನಾಡಲು ಕಲಬುರಗಿ ಹೈಕೋರ್ಟ್‌ ಪೀಠ ಷರತ್ತುಬದ್ಧ ಅನುಮತಿ ನೀಡಿತ್ತು. ನ್ಯಾಯಾಲಯದ ಅನುಮತಿಯ ಹಿನ್ನೆಲೆ ಅವರು ಕಾರ್ಯಕ್ರಮ ದಲ್ಲಿ ಮಾತನಾಡಿದರು. ಪ್ರಚೋದನಕಾರಿ ಹೇಳಿಕೆ ನೀಡದಂತೆ ಕೋರ್ಟ್‌ ನಿರ್ದೇಶಿಸಿತ್ತು.

image

ಅಂಬೇಡ್ಕರ್‌ರನ್ನು ಹಿಂದೂ ಸಮಾಜ ಸದಾ ಗೌರವದಿಂದ ನೋಡಿದೆ. ಅವರ ಆಶಯದಂತೆ ಶಿಕ್ಷಣ, ಸಮಾನತೆ ಹಾಗೂ ಸಾಮಾಜಿಕ ಏಕತೆ ಬೆಳೆಸಬೇಕು. ಸಮಾಜವನ್ನು ಒಡೆಯುವ ಬದಲು ಅಖಂಡತೆಗಾಗಿ ಕೆಲಸ ಮಾಡಬೇಕಿದೆ.

- ಶ್ರೀಕಾಂತ್ ಶೆಟ್ಟಿ ಕಾರ್ಕಳ, ಮುಖಂಡ, ಹಿಂದು ಜಾಗರಣ ವೇದಿಕೆ