ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ayyappa devotee suffers heart attack: ಶಬರಿಮಲೆಯಿಂದ ಮರಳುವಾಗ ಅಯ್ಯಪ್ಪ ಮಾಲಾಧಾರಿ ಹೃದಯಾಘಾತದಿಂದ ಸಾವು

ಮೃತರನ್ನು ಕಲಬುರಗಿ ಜಿಲ್ಲೆಯ ಮಹಾದೇವ ಅಟ್ಟೂರು (56) ಎಂದು ಗುರುತಿಸಲಾಗಿದೆ. ಬಸಯ್ಯ ಸಾಲಿಮಠ ಗುರುಸ್ವಾಮಿ ಸನ್ನಿಧಾನದ ವತಿಯಿಂದ ಶಬರಿಮಲೆ ಯಾತ್ರೆಗೆ ತೆರಳಿದ್ದ ಭಕ್ತರ ತಂಡವು ಸೆ.20ರಂದು ಯಶವಂತಪುರದಿಂದ ಕಲಬುರಗಿಗೆ ವಾಪಸಾಗುತ್ತಿತ್ತು. ಈ ವೇಳೆ ಬಸವ ಎಕ್ಸ್‌ಪ್ರೆಸ್‌ (17307) ರೈಲಿನಲ್ಲಿ ಘಟನೆ ಸಂಭವಿಸಿದೆ.

ಕಲಬುರಗಿ: ಶಬರಿಮಲೆ(Sabarimala) ಯಾತ್ರೆ ಮುಗಿಸಿ ಕಲಬುರಗಿಗೆ ವಾಪಸಾಗುತ್ತಿದ್ದ ಅಯ್ಯಪ್ಪ ಮಾಲಾಧಾರಿ ಯೊಬ್ಬರು ರೈಲಿನಲ್ಲಿ ಹೃದಯಾಘಾತ(Heart Attack)ದಿಂದ ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಕಲಬುರಗಿ ಜಿಲ್ಲೆಯ ಮಹಾದೇವ ಅಟ್ಟೂರು (56) ಎಂದು ಗುರುತಿಸಲಾಗಿದೆ. ಬಸಯ್ಯ ಸಾಲಿಮಠ ಗುರುಸ್ವಾಮಿ ಸನ್ನಿಧಾನದ ವತಿಯಿಂದ ಶಬರಿಮಲೆ ಯಾತ್ರೆಗೆ ತೆರಳಿದ್ದ ಭಕ್ತರ ತಂಡವು ಸೆ.20ರಂದು ಯಶವಂತಪುರದಿಂದ ಕಲಬುರಗಿಗೆ ವಾಪಸಾಗುತ್ತಿತ್ತು. ಈ ವೇಳೆ ಬಸವ ಎಕ್ಸ್‌ಪ್ರೆಸ್‌ (17307) ರೈಲಿನಲ್ಲಿ ಘಟನೆ ಸಂಭವಿಸಿದೆ.

ಇದನ್ನೂ ಓದಿ: Heart Attack: ಶಾಸಕ ಲಕ್ಷ್ಮಣ ಸವದಿ ಕಣ್ಣೆದುರೇ ಆಪ್ತ ಹೃದಯಾಘಾತದಿಂದ ಸಾವು

ರೈಲು ರಾತ್ರಿ ಸುಮಾರು 11.30ಕ್ಕೆ ಗುಂತಕಲ್ ಜಂಕ್ಷನ್ ಸಮೀಪ ಸಾಗುತ್ತಿದ್ದಾಗ ಮಹಾದೇವ ಅಟ್ಟೂರು ಅವರಿಗೆ ಏಕಾಏಕಿ ಅಸ್ವಸ್ಥತೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಸಹಯಾತ್ರಿಕರು ತಕ್ಷಣ ನೆರವಿಗೆ ಧಾವಿಸಿ ಅಗತ್ಯ ಸಹಾಯಕ್ಕೆ ಮುಂದಾದರೂ, ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಶಬರಿಮಲೆ ಯಾತ್ರೆ ಪೂರ್ಣಗೊಳಿಸಿ ಸ್ವಗ್ರಾಮಕ್ಕೆ ಮರಳುತ್ತಿದ್ದ ವೇಳೆ ಸಂಭವಿಸಿದ ಈ ದುರಂತ ದಿಂದ ಸಹಯಾತ್ರಿಕರು ಹಾಗೂ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ಘಟನೆಯ ಕುರಿತು ರೈಲ್ವೆ ಪೊಲೀಸರು ಹಾಗೂ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡಿದ್ದಾರೆ.