ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

First Tech Park in Kalyana Karnataka: ಕಲಬುರಗಿಯಲ್ಲಿ ತಲೆ ಎತ್ತಲಿದೆ ಕಲ್ಯಾಣ ಕರ್ನಾಟಕದ ಮೊದಲ ‘ಟೆಕ್ ಪಾರ್ಕ್’

ಈ ಎರಡು ದಿನಗಳ ಉತ್ಸವದಲ್ಲಿ ‘ಟೆಕ್ನೋವಿಷನ್’ ಅಡಿಯಲ್ಲಿ ವಿವಿಧ ತಾಂತ್ರಿಕ ಸ್ಪರ್ಧೆಗಳಾದ ‘12 ಗಂಟೆಯ ಕೋಡ್ ಎಕ್ಸರೇಟ್’, ‘ಸ್ಪೀಕ್ ಟ್ಯಾಕ್ಯುಲರ್’, ‘ಸ್ಲೈಡ್ ಎನ್ ಸರ್ವೈವ್’ ಹಾಗೂ ‘ಟೆಕ್ ಆನ್ ವಾರ್ಸ್’ ಒಳಗೊಂಡಂತೆ ಹತ್ತಾರು ರೋಚಕ ಸ್ಪರ್ಧೆಗಳು ಜರುಗಲಿವೆ. ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗದ ವಿವಿಧ ಇಂಜಿನಿಯರಿಂಗ್ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಭಾಗವಹಿಸ ಲಿದ್ದಾರೆ.

ಮೇ 22, 23ರಂದು ತಾಂತ್ರಿಕ, ಸಾಂಸ್ಕೃತಿಕ ಮಹೋತ್ಸವ ‘ನಿರ್ಮಾಣ-2026’

ಪಿಡಿಎ ಕಾಲೇಜಿನಲ್ಲಿ ನೂತನ ಕ್ರಾಂತಿ

ಶಶೀಲ್ ನಮೋಶಿ ಹೇಳಿಕೆ

ಕಲಬುರಗಿ: ಕಲ್ಯಾಣ ಕರ್ನಾಟಕ(Kalyana Karnataka) ಭಾಗದ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿ ನಲ್ಲಿ (ಪಿಡಿಎ) ಕಲ್ಯಾಣ ಕರ್ನಾಟಕದ ಮೊಟ್ಟ ಮೊದಲ ಅತ್ಯಾಧುನಿಕ ‘ಟೆಕ್ ಪಾರ್ಕ್’(Tech Park) ನಿರ್ಮಾಣ ಗೊಳ್ಳುತ್ತಿದ್ದು, ಇದು ಈ ಭಾಗದ ವಿದ್ಯಾರ್ಥಿಗಳ ಉದ್ಯೋಗ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಹೊಸ ದಿಕ್ಸೂಚಿಯಾಗಲಿದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ (ಎಚ್‌ಕೆಇ) ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ (Legislative Council Member Shashiel Namoshi) ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 35 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಐಟಿ-ಬಿಟಿ ಕಂಪನಿಗಳ ಮಾದರಿಯ ನೂತನ ತಂತ್ರಜ್ಞಾನ ಆಧಾರಿತ ಬೃಹತ್ ಕಟ್ಟಡವನ್ನು ಕಾಲೇಜು ಆವರಣದಲ್ಲೇ ನಿರ್ಮಿಸಲಾಗುತ್ತಿದೆ. ಈ ಟೆಕ್ ಪಾರ್ಕ್‌ನಲ್ಲಿ ದೇಶ-ವಿದೇಶಗಳ ವಿವಿಧ ಪ್ರಮುಖ ಕಂಪನಿಗಳಿಗೆ ಉದ್ಯಮ ಮತ್ತು ಸ್ಟಾರ್ಟ್‌ಅಪ್ ಆರಂಭಿಸಲು ಸ್ಥಳಾವ ಕಾಶ ನೀಡಲಾಗುವುದು. ಇದರಿಂದ ಪಿಡಿಎ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾಲೇಜು ಹಂತದಲ್ಲೇ ಉದ್ಯೋಗ ತರಬೇತಿ, ಸಂಶೋಧನೆಗೆ ಪೂರಕ ವೇದಿಕೆ, ನವೋದ್ಯಮ ಸ್ಥಾಪನೆ ಹಾಗೂ ಹಿರಿಯ ತಜ್ಞರ ಸಂಪರ್ಕ ನೇರವಾಗಿ ಸಿಗಲಿದೆ. ಸಂಸ್ಥೆಯ ಹಳೇ ವಿದ್ಯಾರ್ಥಿಗಳ ನೆರವನ್ನು ಈ ಯೋಜನೆಗೆ ಬಳಸಿ ಕೊಳ್ಳಲಾಗುತ್ತಿದೆ ಎಂದರು.

ಇದನ್ನೂ ಓದಿ: Ministry for Kalyana Karnataka: ಕಲ್ಯಾಣದ ಸಚಿವಾಲಯ ಅನುಷ್ಠಾನ ಯಾವಾಗ ?

ಇದೇ ಸಂದರ್ಭದಲ್ಲಿ ಕಾಲೇಜಿನ ವಾರ್ಷಿಕ ಸಾಂಸ್ಕೃತಿಕ ಮತ್ತು ತಾಂತ್ರಿಕ ಉತ್ಸವ ‘ನಿರ್ಮಾಣ- 2026’ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ಅವರು, ಮೇ 22 ಮತ್ತು 23 ರಂದು ಎರಡು ದಿನಗಳ ಕಾಲ ಈ ಭವ್ಯ ಉತ್ಸವ ಆಯೋಜಿಸಲಾಗಿದೆ. ಮೇ 22ರಂದು ಬೆಳಗ್ಗೆ 10 ಗಂಟೆಗೆ ಪಿಡಿಎ ಕಾಲೇಜಿನ ಸ್ಯಾಕ್ ಸಭಾಂಗಣದಲ್ಲಿ ನಗರ ಪೊಲೀಸ್ ಡಿಸಿಪಿ ಶಾಲೂ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಇನ್‌ಫಿನಾನ್ ಟೆಕ್ನಾಲಜಿಯ ಹಿರಿಯ ಇಂಜಿನಿಯರ್ ಹಾಗೂ ಕಾಲೇಜಿನ ಹಳೇ ವಿದ್ಯಾರ್ಥಿ ಡಾ.ಪ್ರಕಾಶ ಬಾಲಸುಬ್ರಮಣಿಯನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಎರಡು ದಿನಗಳ ಉತ್ಸವದಲ್ಲಿ ‘ಟೆಕ್ನೋವಿಷನ್’ ಅಡಿಯಲ್ಲಿ ವಿವಿಧ ತಾಂತ್ರಿಕ ಸ್ಪರ್ಧೆಗಳಾದ ‘12 ಗಂಟೆಯ ಕೋಡ್ ಎಕ್ಸರೇಟ್’, ‘ಸ್ಪೀಕ್ ಟ್ಯಾಕ್ಯುಲರ್’, ‘ಸ್ಲೈಡ್ ಎನ್ ಸರ್ವೈವ್’ ಹಾಗೂ ‘ಟೆಕ್ ಆನ್ ವಾರ್ಸ್’ ಒಳಗೊಂಡಂತೆ ಹತ್ತಾರು ರೋಚಕ ಸ್ಪರ್ಧೆಗಳು ಜರುಗಲಿವೆ. ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗದ ವಿವಿಧ ಇಂಜಿನಿಯರಿಂಗ್ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಭಾಗವಹಿಸ ಲಿದ್ದಾರೆ. ಪ್ರತಿದಿನ ಸಂಜೆ 7 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ ಇರಲಿದೆ. 2025-26ರ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸಂಸ್ಥೆಯ 474 ವಿದ್ಯಾರ್ಥಿಗಳು ಈಗಾಗಲೇ ವಿವಿಧ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಪಡೆದಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ರಾಜಾ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ, ಡಾ.ಶರಣಬಸಪ್ಪ ಹರವಾಳ, ಡಾ.ಅನೀಲ್​ ಪಟ್ಟಣ, ಪ್ರಾಚಾರ್ಯ ಡಾ.ಎಸ್​.ಆರ್​. ಪಾಟೀಲ್​, ಉಪಪ್ರಾಚಾರ್ಯ ಡಾ.ಎಸ್​.ಆರ್​.ಹೊಟ್ಟಿ ಮತ್ತು ಡಾ.ಭಾರತಿ ಹರಸೂರು, ಪ್ರೊ.ಜಯ ಪ್ರಕಾಶ, ಪ್ರೊ.ಶಿವರಾಜ ಇಂಗನಕಲ್​, ತಿಪ್ಪಣ್ಣ ನಾಟೀಕಾರ್​, ಪ್ರೀತಿ ಮೆಹತಾ ಇತರರಿದ್ದರು.

KK 2

ನಗರದಲ್ಲಿ ನಾಳೆ ಮ್ಯಾರಾಥಾನ್: ಉತ್ಸವದ ಅಂಗವಾಗಿ ಮೇ 22ರಂದು ಬೆಳಗ್ಗೆ 6 ಗಂಟೆಗೆ ‘ಮಾಡು ಅಥವಾ ಮಡಿ - ನಿಮ್ಮ ಭವಿಷ್ಯ ನಿಮ್ಮ ಆಯ್ಕೆ’ ಎಂಬ ಘೋಷಣೆಯೊಂದಿಗೆ ಬೃಹತ್ ಮ್ಯಾರಾಥಾನ್ ಓಟವನ್ನು ಆಯೋಜಿಸಲಾಗಿದೆ. ಈ ಓಟವು ನಗರದ ವಿಕಾಸ ಸೌಧದಿಂದ ಪ್ರಾರಂಭ ವಾಗಿ, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಮೂಲಕ ಪಿಡಿಎ ಕಾಲೇಜು ಆವರಣವನ್ನು ತಲುಪಲಿದೆ. ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಈ ಮ್ಯಾರಾಥಾನ್‌ನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಸಂಶೋಧನೆಗೆ ಕಾನೂನು ಬಲ ನೀಡಲಿದೆ 'ಪಿಡಿಎ ಫೌಂಡೇಶನ್'

ವಿದ್ಯಾರ್ಥಿಗಳ ಆವಿಷ್ಕಾರಗಳಿಗೆ ಜಾಗತಿಕ ಮನ್ನಣೆ ದೊರಕಿಸಿಕೊಡಲು 'ಪಿಡಿಎ ಸಂಶೋಧನಾ ಮತ್ತು ಆವಿಷ್ಕಾರ ಫೌಂಡೇಶನ್' ಆರಂಭಿಸಲಾಗುತ್ತಿದೆ. ಈ ಫೌಂಡೇಶನ್ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹಾಗೂ ಜಾಗತಿಕ ಸಂಸ್ಥೆಗಳಿಂದ ಸಿಎಸ್ಆರ್ (CSR) ನಿಧಿಯನ್ನು ಕಾನೂನಾ ತ್ಮಕವಾಗಿ ಪಡೆಯಲು ಸುಲಭವಾಗುತ್ತದೆ. ಈಗಾಗಲೇ ಕಾಲೇಜಿನ 'ನಯನ್' ಯೋಜನೆ ಅಡಿ ಆಯ್ಕೆ ಯಾದ 10 ಸಂಶೋಧನಾ ಮಾದರಿಗಳಲ್ಲಿ 3 ಮಾದರಿಗಳು ಪೇಟೆಂಟ್ (ಹಕ್ಕುಸ್ವಾಮ್ಯ) ಪಡೆಯಲು ಅರ್ಹತೆ ಪಡೆದಿರುವುದು ವಿದ್ಯಾರ್ಥಿಗಳ ಸಾಧನೆಗೆ ಹಿಡಿದ ಕನ್ನಡಿಯಾಗಿದೆ ಎಂದು ನಮೋಶಿ ತಿಳಿಸಿದರು.

image

ಪಿಡಿಎ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲೇ ಉದ್ಯಮ ರಂಗವನ್ನು ತರುವುದು ನಮ್ಮ ಮುಖ್ಯ ಗುರಿಯಾಗಿದೆ. ವಿದ್ಯಾರ್ಥಿಗಳಿಗೆ ಕೇವಲ ಕರಡು ಪುಸ್ತಕದ ಪಾಠವಲ್ಲದೆ, ಕೌಶಲಾಧಾರಿತ ಪ್ರಾಯೋಗಿಕ ಶಿಕ್ಷಣ ಮತ್ತು ನೇರ ಉದ್ಯೋಗಾವಕಾಶ ಕಲ್ಪಿಸಲು ಒಪ್ಪಂದಗಳನ್ನು ಮಾಡಿಕೊಳ್ಳ ಲಾಗುತ್ತಿದೆ. ನಯನ್ ಯೋಜನೆ, ಹೊಸ ಟೆಕ್ ಪಾರ್ಕ್ ಹಾಗೂ ಪಿಡಿಎ ಫೌಂಡೇಶನ್ ಸ್ಥಾಪನೆಗಳು ಕಲ್ಯಾಣ ಕರ್ನಾಟಕದ ಯುವಕರ ಭವಿಷ್ಯವನ್ನು ಸುವರ್ಣಮಯವಾಗಿಸಲಿವೆ.

- ಶಶೀಲ್ ನಮೋಶಿ, ಅಧ್ಯಕ್ಷ, ಎಚ್‌ಕೆಇ ಸಂಸ್ಥೆ