ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Kalaburagi News: ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ಜಪ್ತಿ: ಗೃಹ ಸಚಿವರ ತವರಿನಲ್ಲಿಯೇ ಪೊಲೀಸರಿಂದ ಕಳ್ಳ ಪೊಲೀಸ್ ಆಟ?

ಆಳಂದ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಈ ಪ್ರಕರಣ ಇದೀಗ ಪೊಲೀಸ್ ಇಲಾಖೆ ಯ ಕಾರ್ಯವೈಖರಿ ಬಗ್ಗೆಯೇ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಸುಮಾರು 400 ಚೀಲ ಅಕ್ಕಿ ಸಾಗಿಸು ತ್ತಿದ್ದ ಲಾರಿಯನ್ನು 112 ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ವಾಹನ ಠಾಣೆಯಲ್ಲಿದ್ದ ವೇಳೆ ಅಕ್ಕಿ ದಂಧೆಕೋರರೊಂದಿಗೆ ಫೋನ್ ಮೂಲಕ ಮಾತುಕತೆ ನಡೆದಿದ್ದು, ಸುಮಾರು ₹1 ಲಕ್ಷಕ್ಕೆ ಡೀಲ್ ಕುದುರಿಸಿ ಲಾರಿ ಬಿಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಕಲಬುರಗಿ: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಕಂಟ್ರೋಲ್ ರೂಮ್ ಮಾಹಿತಿಯ ಮೇರೆಗೆ ಸುಮಾರು 200 ಕ್ವಿಂಟಾಲ್ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು 112 ಪೊಲೀಸರು ಜಪ್ತಿ ಮಾಡಿದ ಬಳಿಕ, ಅದನ್ನು ಆಳಂದ ಟೌನ್ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು. ಆದರೆ, ಬಳಿಕ ಅಕ್ಕಿ ದಂಧೆಕೋರರೊಂದಿಗೆ ಪೊಲೀಸರೇ ಹಣದ ಡೀಲ್ ಮಾಡಿಕೊಂಡು ವಾಹನವನ್ನು ರಾತ್ರೋ ರಾತ್ರಿ ಬಿಟ್ಟಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಆಳಂದ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಈ ಪ್ರಕರಣ ಇದೀಗ ಪೊಲೀಸ್ ಇಲಾಖೆ ಯ ಕಾರ್ಯವೈಖರಿ ಬಗ್ಗೆಯೇ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಸುಮಾರು 400 ಚೀಲ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು 112 ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ವಾಹನ ಠಾಣೆಯಲ್ಲಿದ್ದ ವೇಳೆ ಅಕ್ಕಿ ದಂಧೆಕೋರರೊಂದಿಗೆ ಫೋನ್ ಮೂಲಕ ಮಾತುಕತೆ ನಡೆದಿದ್ದು, ಸುಮಾರು ₹1 ಲಕ್ಷಕ್ಕೆ ಡೀಲ್ ಕುದುರಿಸಿ ಲಾರಿ ಬಿಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: Kalaburagi Red Gram: ‘ಮಾಲ್ಡೀವ್ಸ್‌’ಗೂ ಹಾರಿದ ‘ಕಲಬುರಗಿ ತೊಗರಿ’: ಕಲ್ಯಾಣ ಕರ್ನಾಟಕದ ರೈತನ ಬೆಳೆಗೆ ವಿಶ್ವಮನ್ನಣೆ, ಶೇ.30ಕ್ಕೂ ಹೆಚ್ಚು ಹೆಚ್ಚುವರಿ ಬೆಲೆ

ಈ ಹಣದ ವ್ಯವಹಾರದ ಮಾಹಿತಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಲೀಕ್ ಆದ ಹಿನ್ನೆಲೆಯಲ್ಲಿ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ ಎನ್ನಲಾಗಿದೆ. ಬಳಿಕ ಅಕ್ರಮವಾಗಿ ಸಾಗಿಸ ಲಾಗುತ್ತಿದ್ದ ಅಕ್ಕಿಯ ಲಾರಿಯನ್ನು ವಾಪಸ್ ಪಡೆಯಲು ಆಳಂದ ಪೊಲೀಸರು ಮಹಾರಾಷ್ಟ್ರದ ಅಕ್ಕಲಕೋಟ್‌ವರೆಗೆ ತೆರಳಿದ್ದಾರೆ.

Akki stealing

ಅಲ್ಲಿ ಅಕ್ಕಿ ದಂಧೆಕೋರರನ್ನು ಮನವೊಲಿಸಿ ಲಾರಿಯನ್ನು ವಾಪಸ್ ಕರೆತರಲಾಗಿದೆ ಎನ್ನಲಾ ಗಿದ್ದು, ಈ ವೇಳೆ ಲಾರಿಯಲ್ಲಿದ್ದ ಸುಮಾರು 400 ಚೀಲಗಳ ಪೈಕಿ 200 ಚೀಲಗಳನ್ನು ಅಕ್ಕಲಕೋಟ್‌ ನಲ್ಲಿಯೇ ಇಳಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಸುಮಾರು 100 ಕ್ವಿಂಟಾಲ್ ಅಕ್ಕಿಯನ್ನು ಮಹಾರಾಷ್ಟ್ರದ ನಿಲೇಶ್ ಎಂಬಾತನಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಉಳಿದ ಅಕ್ಕಿಯೊಂದಿಗೆ ವಾಹನವನ್ನು ಪೊಲೀಸರು ವಾಪಸ್ ತಂದಿದ್ದಾರೆ ಎನ್ನಲಾಗಿದೆ.

ಈ ಬೆಳವಣಿಗೆಗಳ ನಡುವೆ ಅಕ್ಕಿ ಅಕ್ರಮ ಸಾಗಾಟದ ಆರೋಪದ ಮೇರೆಗೆ ಶರಣು ಔರಾದಿ ಎಂಬಾತನ ವಿರುದ್ಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ, ಅಕ್ಕಿ ಜಪ್ತಿ ಮಾಡಿದ ಬಳಿಕ ನಡೆದಿರುವ ಬೆಳವಣಿಗೆಗಳು, ವಾಹನ ಬಿಡುಗಡೆ ಹಾಗೂ ಮಹಾರಾಷ್ಟ್ರಕ್ಕೆ ತೆರಳಿ ಅಕ್ಕಿ ಇಳಿಸಿ ವಾಹನ ವಾಪಸ್ ತಂದಿರುವ ಆರೋಪಗಳ ಕುರಿತು ಪೊಲೀಸ್ ಇಲಾಖೆಯಿಂದ ಸಮಗ್ರ ತನಿಖೆ ನಡೆಯಬೇಕೆಂಬ ಆಗ್ರಹ ಕೇಳಿ ಬಂದಿದೆ.

ತನಿಖೆಯಿಂದಲೇ ಸತ್ಯ ಹೊರಬರಬೇಕಿದೆ

ಅಕ್ಕಿ ಜಪ್ತಿ, ವಾಹನ ಠಾಣೆಗೆ ಸಾಗಿಸಿದ ಕ್ರಮದಿಂದ ಹಿಡಿದು ವಾಹನ ಬಿಡುಗಡೆ, ಹಣದ ಡೀಲ್ ಆರೋಪ, ಅಕ್ಕಲಕೋಟ್‌ಗೆ ತೆರಳಿದ ಕ್ರಮ ಹಾಗೂ ಅಲ್ಲಿ ಅಕ್ಕಿ ಇಳಿಸಿದ ಆರೋಪದವರೆಗೆ ಪ್ರತಿ ಯೊಂದು ಹಂತದ ಕುರಿತು ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಬೇಕಾಗಿದೆ.