ಹಿಂದೂ ಮಹಾಗಣಪತಿ
ನೂರಾರು ಮಹಿಳೆಯರು, ಭಕ್ತರ ಭಾಗಿ
ಕಲಬುರಗಿ: ನಗರದ ಕೋಟೆ ಮುಂಭಾಗ ಶುಕ್ರವಾರ ಸಂಜೆ ಭಕ್ತಿಭಾವದ ವಾತಾವರಣಕ್ಕೆ ಸಾಕ್ಷಿಯಾ ಯಿತು. ಹಿಂದೂ ಮಹಾಗಣಪತಿ ಸಮಿತಿ ಆಯೋಜಿಸಿದ್ದ ಲಕ್ಷ ದೀಪೋತ್ಸವಕ್ಕೂ ಮುನ್ನ ಶ್ರೀ ಮಹಾರಾಜ್ಞೀ ಸಂಸ್ಕೃತಿ ಕೇಂದ್ರದ ವತಿಯಿಂದ ಲಲಿತ ಸಹಸ್ರನಾಮ ಪಾರಾಯಣ ಹಾಗೂ ಭಜನಾ ಕಾರ್ಯಕ್ರಮ ಜರುಗಿತು.
ಗಣಪತಿ ನಾಮಸ್ಮರಣೆ ಮತ್ತು ಗುರುವಿನ ಶ್ಲೋಕ ಪಠಣದೊಂದಿಗೆ ಆರಂಭವಾದ ಕಾರ್ಯಕ್ರಮ ದಲ್ಲಿ ಭಕ್ತಿಗೀತೆ, ಭಜನೆ ಹಾಗೂ ಲಲಿತ ಸಹಸ್ರನಾಮ ಪಾರಾಯಣ ನಡೆಯಿತು. ಚಂಪಾರಾಣಿ ಕಲ್ಯಾಣರಾವ ಕುಂಬಾರ ಅವರ ನೇತೃತ್ವದಲ್ಲಿ ನಡೆದ ಪಾರಾಯಣದಲ್ಲಿ ಈಶ್ವರಗುಡಿ ಗಂಜ ಕಾಲೋನಿ ಲಲಿತ ಸಹಸ್ರನಾಮ ಗ್ರೂಪ್‌ನ ಸದಸ್ಯರು ಸೇರಿದಂತೆ ನೂರಾರು ಮಹಿಳೆಯರು ಪಾಲ್ಗೊಂಡರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಕಾಲಭೈರವ ಹಾಗೂ ಶ್ರೀ ಮಹಾರಾಜ್ಞೀ (ಶಿವಶಕ್ತಿ) ರೂಪದ ಅಲಂಕಾರ ಭಕ್ತರ ಗಮನ ಸೆಳೆಯಿತು. ಪಾರಾಯಣ ಪೂರ್ಣಗೊಂಡ ಬಳಿಕ ಕೋಟೆಯ ಮುಂಭಾಗದಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಲಾ ಯಿತು. ನೂರಾರು ಭಕ್ತರು ದೀಪ ಬೆಳಗಿಸಿ ಧಾರ್ಮಿಕ ಸಂಭ್ರಮದಲ್ಲಿ ಪಾಲ್ಗೊಂಡರು.
ರಾಚಯ್ಯ ಸ್ವಾಮಿ ಮಠಪತಿ, ಗೌರಿಶಂಕರ ಸ್ವಾಮಿ ರಟಕಲ್, ಈರಯ್ಯ ಸ್ವಾಮಿ ನಾಗೂರು, ಬಸಯ್ಯ ಸ್ವಾಮಿ ಶರಣನಗುಡಿ, ಶಂಕರ ಸ್ವಾಮಿ ಸೇರಿದಂತೆ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು. ಸಿದ್ದಮ್ಮ ಪಾಟೀಲ್, ಶರಣಮ್ಮ ಅರಳಿ, ರಾಜೇಶ್ವರಿ, ಶಿಲ್ಪಾ, ಕವಿತಾ ಸ್ವಾಮಿ, ರೇಖಾ ಬೊಮ್ಮನಳ್ಳಿ, ಮೈನಾವತಿ ರೆಡ್ಡಿ, ಅನಸೂಯಾ ಹಾರೂಣೆ, ಈಶ್ವರಿ ಪಾಟೀಲ್ ಸೇರಿದಂತೆ ಲಲಿತ ಸಹಸ್ರನಾಮ ಗ್ರೂಪ್‌ನ ಸದಸ್ಯರು ಭಾಗವಹಿಸಿದ್ದರು.
ಹಿಂದೂ ಮಹಾಗಣಪತಿ ಸಮಿತಿಯ ಗೌರವಾಧ್ಯಕ್ಷ ಸಂಜೀವ್ ಗುಪ್ತಾ, ಅಧ್ಯಕ್ಷ ಶ್ರೀಮಂತ ರಾಜು ನವಲದಿ, ಕಾರ್ಯದರ್ಶಿ ಅಶ್ವಿನ್ ಕುಮಾರ್, ಸಹ ಕೋಶಾಧ್ಯಕ್ಷ ಶ್ರೀಶೈಲ ಮೂಲಗೆ, ಮಲ್ಲಿಕಾರ್ಜುನ ಗಂಗಾ, ಅನಿಲಕುಮಾರ ಸಿನ್ನೂರಕರ್, ಪ್ರಶಾಂತ ಗುಡ್ಡಾ, ಶಿವರಾಜ ಸಂಗೋಳಗಿ, ಸತೀಶ್ ಮಾವೂರ್, ಸಂಜಯ್ ರೇವಣಕರ್, ಸಿದ್ದು ಸಾಕರೆ ಸೇರಿದಂತೆ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.
ಸೈನಿಕರು, ರೈತರಿಗೆ ಗೌರವ
ದೇಶದ ಗಡಿ ಕಾಯುವ ಸೈನಿಕರು ಹಾಗೂ ದೇಶದ ಜನತೆಗೆ ಅನ್ನ ನೀಡುವ ರೈತರ ಸೇವೆಯನ್ನು ಸ್ಮರಿಸಿ ಹಿಂದೂ ಮಹಾಗಣಪತಿ ಸಮಿತಿಯಿಂದ ಗೌರವ ಸಲ್ಲಿಸಲಾಯಿತು. ಸೈನಿಕರು ಮತ್ತು ರೈತರು ದೀರ್ಘಕಾಲ ನೆಮ್ಮದಿಯಿಂದ ಬದುಕಲಿ ಎಂಬ ಸಂಕಲ್ಪದೊಂದಿಗೆ ಇಬ್ಬರ ಪ್ರತಿನಿಧಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
![]()
ಸಂಸ್ಕಾರವು ಕೇವಲ ಆಚರಣೆಗೆ ಸೀಮಿತವಾಗದೆ ಮಕ್ಕಳಲ್ಲಿ ಶಿಸ್ತು, ಸಂಯಮ ಮತ್ತು ಜವಾಬ್ದಾರಿ ಯ ಮನೋಭಾವ ಬೆಳೆಸಬೇಕು. ಬಾಲ್ಯದಲ್ಲಿ ಕಲಿಯುವ ಪ್ರತಿಯೊಂದು ಉತ್ತಮ ಅಭ್ಯಾಸವೂ ಮುಂದಿನ ಜೀವನಕ್ಕೆ ನೆರವಾಗುತ್ತದೆ. ಪಠಣ, ಕಲಿಕೆ, ಯೋಗ, ಆಹಾರ ಪದ್ಧತಿ ಹಾಗೂ ವ್ಯಕ್ತಿತ್ವ ವಿಕಸನದ ಮೂಲಕ ಮಕ್ಕಳ ಸಮಗ್ರ ಬೆಳವಣಿಗೆಗೆ ಒತ್ತು ನೀಡಬೇಕು. ಇಂತಹ ಕಾರ್ಯಕ್ರಮಗಳು ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ದಾರಿದೀಪವಾಗಲಿವೆ.
- ಡಾ. ಸಾವಿತ್ರಿ ಬಿಳಗಿ, ಪ್ರಾಂಶುಪಾಲರು, ಎಸ್‌ಬಿ ಬಿಎಡ್ ಕಾಲೇಜು, ಕಲಬುರಗಿ