ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮದುವೆ ಮಾಡಿಸದಿದ್ದರೆ ಕೆಳಗೆ ಬೀಳುವುದಾಗಿ ಬೆದರಿಕೆ; ದೇವರ ಹೆಸರಿನಲ್ಲಿ ಆಣೆ ಮಾಡಿ ಮನವೊಲಿಕೆ

ಮಾಡಿಯಾಳ ಗ್ರಾಮದ ಮಹೇಶ್ ಭಜಂತ್ರಿ ಎಂಬ ಯುವಕ ಪ್ರೀತಿಸಿದ ಯುವತಿಯೊಂದಿಗೆ ವಿವಾಹ ಮಾಡಿಸಬೇಕು ಎಂದು ಪಟ್ಟು ಹಿಡಿದು ಮೊಬೈಲ್‌ ಟವರ್ ಏರಿ ಕುಳಿತಿದ್ದ. ಕೆಳಗಿಳಿಯುವಂತೆ ಗ್ರಾಮಸ್ಥ ರು ಹಾಗೂ ಸಂಬಂಧಿಕರು ಮನವಿ ಮಾಡಿದರೂ, ತನ್ನ ಬೇಡಿಕೆ ಈಡೇರಿಸುವ ಭರವಸೆ ನೀಡುವವರೆಗೆ ಕೆಳಗಿಳಿಯುವುದಿಲ್ಲ ಎಂದು ಹಠ ಹಿಡಿದಿದ್ದಾನೆ.

ಕಲಬುರಗಿ: ಪ್ರೀತಿಸಿದ ಯುವತಿಯನ್ನೇ ಮದುವೆಯಾಗಬೇಕು. ಇಲ್ಲವಾದರೆ ಟವರ್‌ನಿಂದ ಕೆಳಗೆ ಬೀಳುವುದಾಗಿ ಬೆದರಿಸಿ ಯುವಕನೊಬ್ಬ ಮೊಬೈಲ್‌ ಟವರ್ ಏರಿ ಕುಳಿತ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಮಾಡಿಯಾಳ ಗ್ರಾಮದಲ್ಲಿ ನಡೆದಿದೆ.

ಮಾಡಿಯಾಳ ಗ್ರಾಮದ ಮಹೇಶ್ ಭಜಂತ್ರಿ ಎಂಬ ಯುವಕ ಪ್ರೀತಿಸಿದ ಯುವತಿಯೊಂದಿಗೆ ವಿವಾಹ ಮಾಡಿಸಬೇಕು ಎಂದು ಪಟ್ಟು ಹಿಡಿದು ಮೊಬೈಲ್‌ ಟವರ್ ಏರಿ ಕುಳಿತಿದ್ದ. ಕೆಳಗಿಳಿಯುವಂತೆ ಗ್ರಾಮಸ್ಥರು ಹಾಗೂ ಸಂಬಂಧಿಕರು ಮನವಿ ಮಾಡಿದರೂ, ತನ್ನ ಬೇಡಿಕೆ ಈಡೇರಿಸುವ ಭರವಸೆ ನೀಡುವವರೆಗೆ ಕೆಳಗಿಳಿಯುವುದಿಲ್ಲ ಎಂದು ಹಠ ಹಿಡಿದಿದ್ದಾನೆ.

ಇದನ್ನೂ ಓದಿ: Kalaburagi Red Gram: ‘ಮಾಲ್ಡೀವ್ಸ್‌’ಗೂ ಹಾರಿದ ‘ಕಲಬುರಗಿ ತೊಗರಿ’: ಕಲ್ಯಾಣ ಕರ್ನಾಟಕದ ರೈತನ ಬೆಳೆಗೆ ವಿಶ್ವಮನ್ನಣೆ, ಶೇ.30ಕ್ಕೂ ಹೆಚ್ಚು ಹೆಚ್ಚುವರಿ ಬೆಲೆ

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಹಾಗೂ ಸಂಬಂಧಿಕರು ಮಹೇಶ್‌ನನ್ನು ಮನವೊಲಿಸಲು ಹಲವು ರೀತಿಯಲ್ಲಿ ಪ್ರಯತ್ನಿಸಿದ್ದಾರೆ. ಕೊನೆಗೆ ದೇವರ ಹೆಸರಿನಲ್ಲಿ ಆಣೆ ಮಾಡಿ, ಆತ ಪ್ರೀತಿಸಿದ ಯುವತಿಯೊಂದಿಗೆ ಮದುವೆ ಮಾಡಿಸುವುದಾಗಿ ಭರವಸೆ ನೀಡಿದ ಬಳಿಕ ಮಹೇಶ್ ಟವರ್‌ನಿಂದ ಕೆಳಗಿಳಿದಿದ್ದಾನೆ.

ಯುವಕ ಸುರಕ್ಷಿತವಾಗಿ ಕೆಳಗಿಳಿಯುತ್ತಿದ್ದಂತೆ ಸ್ಥಳದಲ್ಲಿದ್ದ ಸಂಬಂಧಿಕರು ಹಾಗೂ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಘಟನೆಯಿಂದಾಗಿ ಕೆಲಕಾಲ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.