ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kalaburagi Robbery case: ಕಲಬುರಗಿ ಚಿನ್ನದ ಅಂಗಡಿ ದರೋಡೆ ಪ್ರಕರಣ; ಕಳ್ಳರ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆ

Kalaburagi Robbery case: ಕಲಬುರಗಿಯಲ್ಲಿ ದರೋಡೆಗೂ ಮೊದಲು ನಾಲ್ಕು ಜನರ ಗ್ಯಾಂಗ್ ಆಟೋ‌ ಮೂಲಕ ಸರಾಫ್ ಬಜಾರ್‌ವರೆಗೆ ಆಗಮಿಸಿ, ದರೋಡೆ ಬಳಿಕ ಬ್ರಹ್ಮಪೂರ್ ಪೊಲೀಸ್ ಠಾಣೆವರೆಗೆ ಬಿಂದಾಸಾಗಿ ನಡೆದುಕೊಂಡೇ ಹೋಗಿದ್ದಾರೆ. ಇದಕ್ಕೆ ಸಂಬಂಧಿಸಿದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಚಿನ್ನದ ಅಂಗಡಿ ದರೋಡೆ ಕೇಸ್‌; ಕಳ್ಳರ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆ

Profile Prabhakara R Jul 12, 2025 10:39 PM

ಕಲಬುರಗಿ: ನಗರದ ಹೃದಯ ಭಾಗದಲ್ಲಿರುವ ಸೂಪರ್ ಮಾರ್ಕೆಟ್‌ನ ಸರಾಫ್ ಬಜಾರ್‌ನಲ್ಲಿ ನಡೆದಿದ್ದ ಚಿನ್ನದ ಅಂಗಡಿ ದರೋಡೆ ಪ್ರಕರಣವು (Kalaburagi Robbery case) ಅಂತಾರಾಜ್ಯ ದರೋಡೆಕೋರರ ಕೃತ್ಯ ಎಂಬ ಶಂಕೆ ವ್ಯಕ್ತವಾಗಿದ್ದು, ಖದೀಮರ ಚಲನವಲನಗಳ ಹಲವು ಸಿಸಿಟಿವಿ ದೃಶ್ಯಾವಳಿಗಳು ಸಿಕ್ಕಿವೆ. ಶನಿವಾರ ಹಾಡಹಗಲೇ ದರೋಡೆಕೋರರು ಅಂಗಡಿ ಮಾಲೀಕನಿಗೆ ಗನ್ ಪಾಯಿಂಟ್‌ನಲ್ಲಿ ಇಟ್ಟು ಬಂಗಾರ ದೋಚಿದ್ದರು. ಆದರೆ, ಈ ಖತರ್ನಾಕ್ ಗ್ಯಾಂಗ್ ಯಾವುದೇ ರೀತಿಯ ಮೊಬೈಲ್, ಕಾರು ಹಾಗೂ ಬೈಕ್ ಸಹ ಬಳಸದೇ ಕೃತ್ಯ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ದರೋಡೆಗೂ ಮೊದಲು ನಾಲ್ಕು ಜನರ ಗ್ಯಾಂಗ್ ಆಟೋ‌ ಮೂಲಕ ಸರಾಫ್ ಬಜಾರ್‌ವರೆಗೆ ಆಗಮಿಸಿ, ದರೋಡೆ ಬಳಿಕ ಬ್ರಹ್ಮಪೂರ್ ಪೊಲೀಸ್ ಠಾಣೆವರೆಗೆ ಬಿಂದಾಸಾಗಿ ನಡೆದುಕೊಂಡೇ ಹೋಗಿದ್ದಾರೆ. ಬಳಿಕ ಅಲ್ಲಿಂದ ಆಟೋದಲ್ಲಿ ಕುಳಿತು ಕೇಂದ್ರೀಯ ಬಸ್ ನಿಲ್ದಾಣದ ಹಿಂಬದಿ ಗೇಟ್ ಬಳಿ ಇಳಿದುಕೊಂಡಿದ್ದಾರೆ. ಅಂಗಡಿ ಮಾಲೀಕನ ಮೊಬೈಲನ್ನು ಅಲ್ಲೆ, ಬಿಸಾಡಿ ಕೇಂದ್ರ ಬಸ್ ನಿಲ್ದಾಣದ ಒಳಗೆ ನಾಲ್ಕು ಜನ ದರೋಡೆಕೊರರು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಸದ್ಯ ಅಂತಾರಾಜ್ಯ ದರೋಡೆಕೊರರೆ ಈ ಕೃತ್ಯ ನಡೆಸಿರುವ ಬಗ್ಗೆ ಪೊಲೀಸರು ಮಾಹಿತಿ‌ ಕಲೆ ಹಾಕಿದ್ದು, ಮಹಾರಾಷ್ಟ್ರ ತೆಲಂಗಾಣ ಸೇರಿದಂತೆ ಉತ್ತರ ಭಾರತದ ರಾಜ್ಯಗಳ ಪೊಲೀಸರಿಗೆ ದರೋಡೆಕೊರರ ಭಾವಚಿತ್ರಗಳನ್ನು ರವಾನಿಸಲಾಗಿದೆ.



ಪೊಲೀಸರ ದಾರಿ ತಪ್ಪಿಸಲು ಮೊಬೈಲ್ ಬಳಕೆ ನಾಟಕ:

ಇನ್ನು ದರೋಡೆ ಸಮಯದಲ್ಲಿ ನಾಲ್ವರು ದರೋಡೆಕೊರರು ಮೊಬೈಲ್ ಬಳಕ್ಕೆ ಮಾಡದೆ ಕೈಯಲ್ಲಿ ಸುಮ್ಮನೆ ಮೊಬೈಲ್ ಹಿಡಿದು ಪೊಲೀಸರ ತನಿಖಾ ದಾರಿ ತಪ್ಪಿಸಲು ಪ್ಲ್ಯಾನ್ ಸಹ ಮಾಡಿದರು ಎಂದು ತಿಳಿದುಬಂದಿದ್ದು, ಹೀಗಾಗಿ, ದರೊಡೆಕೊರರ ಪತ್ತೆಗೆ ಅಷ್ಟ ದಿಕ್ಕುಗಳಲ್ಲಿ ಪೊಲೀಸರು ಐದು ತಂಡಗಳಿಂದ ದರೋಡೆಕೊರರ ಚಲನವಲನಗಳ ಇಂಚಿಂಚು ಹೆಜ್ಜೆಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ | Kalaburagi News: ಮನೆಗೆ ನುಗ್ಗಿ ದರೋಡೆ: 4 ಜನ ಅಂತಾರಾಜ್ಯ ದರೋಡೆಕೋರರ ಬಂಧನ

ಒಬ್ಬೊಬ್ಬರಿಗೂ ಒಂದು ಜವಾಬ್ದಾರಿ:

ಗ್ರಾಮೀಣ ಎಸಿಪಿ ನೈತೃತ್ವದ ತಂಡದಿಂದ ಟವರ್ ಲೋಕೆಷನ್, ಸಿಡಿಆರ್ ಸಂಗ್ರಹ, ಉತ್ತರ ವಿಭಾಗದ ಎಸಿಪಿಯಿಂದ ನಗರದ ಸಿಸಿಟಿವಿ ಪರೀಶಿಲನೆ, ದಕ್ಷಿಣ ಎಸಿಪಿ ನೈತೃತ್ವದ ತಂಡದಿಂದ ಅಂಗಡಿ‌ ಮಾಲೀಕ, ಹಾಗೂ ಗ್ರಾಹಕರ ಬಗ್ಗೆ ಮಾಹಿತಿ ಸಂಗ್ರಹ, ಅಶೋಕ ನಗರ ಠಾಣೆ ಇನ್ಸ್‌ಪೆಕ್ಟರ್‌ ಬಸ್‌ಗಳ ಬಗ್ಗೆ ಮಾಹಿತಿ ಹಾಗೂ ಸ್ಟೇಷನ್ ಬಜಾರ್ ಇನ್ಸ್‌ಪೆಕ್ಟರ್‌ ಅವರು ರೈಲು ಪ್ರಯಾಣದ ಬಗ್ಗೆ ಪರೀಶಿಲನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.