Crime News: ಮದುವೆಯಾಗಲು ಪಟ್ಟು ಹಿಡಿದ ಪ್ರೇಯಸಿಯನ್ನು ಕೊಂದು ಘಾಟ್ನಿ ಚರಂಡಿಗೆ ಎಸೆದ ಪ್ರಿಯಕರ
ಪ್ರೀತಿ ಕುರುಡು ಎಂಬ ಮಾತಿದೆ. ಕೆಲವೊಮ್ಮೆ ಈ ಕುರುಡು ಪ್ರೀತಿಯಿಂದ ಪ್ರಾಣವನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿಯೂ ಬರುತ್ತದೆ. ಮಹಾರಾಷ್ಟ್ರದ ಪಲಘಾರ್ ಜಿಲ್ಲೆಯಲ್ಲಿ ನಡೆದ ಘಟನೆಯೊಂದು ಅದನ್ನು ಮತ್ತೆ ನಿರೂಪಿಸುವಂತಿದೆ. ತನ್ನ ಪ್ರೇಯಸಿ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಾಳೆ ಎಂಬ ಕೋಪದಿಂದ ಯುವಕನೊಬ್ಬ ಆಕೆಯನ್ನು ಕೊಲೆ ಮಾಡಿ, ಶವವನ್ನು ಚರಂಡಿಗೆ ಎಸೆದ ಘಟನೆ ಬೆಳಕಿಗೆ ಬಂದಿದೆ.

ಕೊಲೆಯಾದ ಯುವತಿ -

ಮುಂಬೈ: ಪ್ರೀತಿ ಮಧುರ, ತ್ಯಾಗ ಅಮರ ಎಂಬ ಮಾತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಇದಕ್ಕ ವಿರುದ್ಧವಾಗಿರುವ ಘಟನೆಗಳು ನಡೆಯುತ್ತಿದ್ದು, ಈ ಪ್ರೀತಿ ಎಂಬ ಮಾಯೆಯಾಲ್ಲಿ ಸಿಲುಕಿ ಕೊಲೆ ಮಾಡುವ ಹಂತಕ್ಕೂ ಹಲವರು ಇಳಿಯುತ್ತಿದ್ದಾರೆ. ಹೌದು, ಪ್ರೀತಿ ಕುರುಡು ಎಂಬ ಮಾತಿದೆ. ಆದರೆ ಕೆಲವೊಮ್ಮೆ ಕುರುಡು ಪ್ರೀತಿಯಿಂದ ಪ್ರಾಣವನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿಯೂ ಬರುತ್ತದೆ. ಮಹಾರಾಷ್ಟ್ರದ ಜಿಲ್ಲೆಯಲ್ಲಿ ನಡೆದ ಘಟನೆಯೊಂದು ಅದನ್ನು ಮತ್ತೆ ನಿರೂಪಿಸುವಂತಿದೆ. ತನ್ನ ಪ್ರೇಯಸಿ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಾಳೆ ಎಂಬ ಕೋಪದಿಂದ ಯುವಕನೊಬ್ಬ ಆಕೆಯನ್ನು ಕೊಲೆ(Murder) ಮಾಡಿ, ಶವವನ್ನು(Dead body) ಚರಂಡಿಗೆ ಎಸೆದ ಘಟನೆ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರ(Maharashtra) ರತ್ನಗಿರಿಯಲ್ಲಿ(Rathna giri) ಈ ದುರ್ಘಟನೆ ನಡೆದಿದ್ದು, ಆರೋಪಿಯನ್ನು ದೂರ್ವಾಸ್ ದರ್ಶನ್ ಪಾಟೀಲ್ ಎಂದು ಗುರುತಿಸಲಾಗಿದ್ದು, 26 ವರ್ಷದ ಭಕ್ತಿ ಮಾಯೇಕರ್ ದೀಪಾಲಿ ಕೊಲೆಯಾದ ದುರ್ದೈವಿ.
ದೂರ್ವಾಸ್ ದರ್ಶನ್ ಪಾಟೀಲ್ ಹಾಗೂ ಭಕ್ತಿ ಮಾಯೇಕರ್ ದೀಪಾಲಿ ಒಬ್ಬರನೊಬ್ಬರು ಕೆಲ ವರ್ಷಗಳಿಂದ ಪ್ರೀಲ್‌ಗೆ ಬೇರೊಂದು ಹುಡುಗಿಯನ್ನು ನೋಡಿದ್ದರು. ಇದರಿಂದ ಕೋಪಗೊಂಡ ಭಕ್ತಿ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದು, ಈ ವಿಚಾರಕ್ಕೆ ಸಂಬಂಧಪಟ್ಟಂತೆ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆದಿದೆ. ಇದರಿಂದ ಕೋಪಗೊಂಡ ಆ ದರ್ಶನ್ ಪಾಟೀಲ್ ಭಕ್ತಿಯನ್ನು ಕೊಲೆ ಮಾಡಿ, ಅಂಬಾ ಘಾಟ್‌ನ ಚರಂಡಿಗೆ ಎಸೆದಿದ್ದಾನೆ.
ಈ ಸುದ್ದಿಯನ್ನು ಓದಿ; Viral Video: ಕೋಚಿಂಗ್ ಸೆಂಟರ್ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿಯನ್ನು ರಕ್ಷಿಸಿದ ಶಿಕ್ಷಕರು; ವಿಡಿಯೊ ಇಲ್ಲಿದೆ
ಇತ್ತ ಭಕ್ತಿ ಪೋಷಕರು ತಮ್ಮ ಮಗಳು ಕಳೆದ ಎರಡು ವಾರದಿಂದ ಕಾಣೆ ಆಗಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆಗಸ್ಟ್ 17ರಂದು ನಾಪತ್ತೆಯಾಗಿದ್ದಾಳೆ. ಮನೆಯಿಂದ ಹೊರ ಹೋಗುವಾಗ ಗೆಳತಿಯನ್ನು ಭೇಟಿಯಾಗಲು ಹೋಗುವುದಾಗಿ ತಿಳಿಸಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಇನ್ನು ಪ್ರಕರಣ ದಾಖಲಿಸಿಕೊಂಡು ಪ್ರಕರಣದ ಬೆನ್ನತ್ತಿದ ಪೊಲೀಸರು ಭಕ್ತಿಯ ಮೊಬೈಲ್ ಫೋನ್ ಟ್ರೇಸ್ ಮಾಡಿದರು. ಅವಳ ಮೊಬೈಲ್ ಕಡೆಯದಾಗಿ ಖಂಡಾಲಾ ಪ್ರದೇಶದಲ್ಲಿ ಆಫ್ ಆಗಿರುವುದು ತಿಳಿದುಬಂದಿದೆ. ಈ ಮಾಹಿತಿಯನ್ನು ಆರಿಸಿ ಪೊಲೀಸರು ಆ ಸ್ಥಳಕ್ಕೆ ತೆರಳಿದ್ದು, ಅಲ್ಲಿ ಭಕ್ತಿ ಶವ ಪತ್ತೆಯಾಗಿದೆ. ಇಷ್ಟಕ್ಕೆ ಸುಮ್ಮನಾಗದ ಪೊಲೀಸರು ತನಿಖೆ ಮುಂದುವರಿಸಿದ್ದು, ಭಕ್ತಿಯ ಕಾಲ್ ಹಿಸ್ಟರಿ ತೆಗೆದು ಪರಿಶೀಲನೆ ನಡೆಸಿದರು. ಈ ವೇಳೆ ದರ್ಶನ್ ಪಾಟೀಲ್ ಮೊಬೈಲ್ ಗೆ ಅತೀ ಹೆಚ್ಚು ಭಾರಿ ಕರೆ ಹೋಗಿರುವುದನ್ನು ಗಮನಿಸಿ ಆತನನ್ನು ಕರೆದು ವಿಚಾರಣೆ ನಡೆಸಿದ್ದಾರೆ.
ವಿಚಾರಣೆಯ ವೇಳೆ ತಾನೇ ಭಕ್ತಿಯನ್ನು ಕೊಲೆ ಮಾಡಿರುವುದಾಗಿ ದರ್ಶನ್ ಪಾಟೀಲ್ ಒಪ್ಪಿಕೊಂಡಿದ್ದು, ಆಕೆಯ ದೇಹವನ್ನು ಅಂಬಾ ಘಾಟ್‌ನಲ್ಲಿ ಎಸೆದಿದ್ದಾಗಿ ಹೇಳಿದ್ದಾನೆ. ಬೇರೆ ಯುವತಿ ಜತೆ ನನ್ನ ಮನೆಯವರು ವಿವಾಹ ಗೊತ್ತು ಮಾಡಿದ್ದರು. ಈ ಬಗ್ಗೆ ಭಕ್ತಿಗೆ ತಿಳಿಸಿದ್ದಾಗ ಆಕೆ ವಿರೋಧ ವ್ಯಕ್ತಪಡಿಸಿದ್ದು, ಆಗಾಗ್ಗೆ ಜಗಳವಾಡುತ್ತಿದ್ದಳು. ಈ ಕಾರಣ ಆಕೆಯನ್ನು ಕೊಂದಿದ್ದಾಗಿ ಅವನು ಪೊಲೀಸರಿಗೆ ತಿಳಿಸಿದ್ದಾನೆ.
ಇನ್ನು ಪೊಲೀಸರು ಮೃತ ಭಕ್ತಿ ಮಾಯೆಕರ್ ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ದರ್ಶನ್ ಪಾಟೀಲ್ ಜತೆ ಕೃತ್ಯ ಎಸಗಲು ಸಹಕಾರ ನೀಡಿದ್ದ ಅವನ ಇಬ್ಬರು ಸ್ನೇಹಿತರನನ್ನೂ ಬಂಧಿಸಿದ್ದಾರೆ.