ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karnataka Budget 2025: ಇದು ಪಾಕಿಸ್ತಾನದ ಬಜೆಟ್‌; ಯತ್ನಾಳ್‌ ಆರೋಪ

Basanagouda Patil Yatnal: ಅಲ್ಪಸಂಖ್ಯಾತರಿಗೆ ಬಜೆಟ್‌ನಲ್ಲಿ ಸಾಕಷ್ಟು ಕೊಡುಗೆ ಕೊಡಲಾಗಿದೆ. ಆದರೆ ದಲಿತರಿಗೆ ಏನೂ ಇಲ್ಲ. ಕೇವಲ ಒಂದು ಸಮುದಾಯದ ತುಷ್ಟೀಕರಣ ಮಾಡಲಾಗಿದೆ. ಮದರಸಾದಲ್ಲಿ ಧರ್ಮ ಬಿಟ್ಟು ಬೇರೆ ಏನು ಹೇಳಿಕೊಡಲ್ಲ, ಅಲ್ಲಿಗೆ ಕಂಪ್ಯೂಟರ್‌ ಕೊಟ್ಟಿದ್ದಾರೆ. ಅವರ ಪುರಾಣದಲ್ಲಿ ಭೂಮಿ ಸೂರ್ಯನ ಸುತ್ತ ಸುತ್ತತ್ತೋ, ಸೂರ್ಯ ಭೂಮಿ ಸುತ್ತ ಸುತ್ತತ್ತೋ? ಆ ವಿಚಾರವೇ ಅವರಿಗೆ ಗೊತ್ತಿಲ್ಲ. ಮತಾಂದರನ್ನ ಸೃಷ್ಠಿ ಮಾಡಲು ಮುಂದಾಗಿದ್ದಾರೆ ಎಂದು ಯತ್ನಾಳ್‌ ಆಕ್ರೋಶ ಹೊರಹಾಕಿದ್ದಾರೆ.

ಇದು ಪಾಕಿಸ್ತಾನದ ಬಜೆಟ್‌; ಯತ್ನಾಳ್‌ ಆರೋಪ

Profile Abhilash BC Mar 7, 2025 4:16 PM

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಪ್ರಸಕ್ತ ಸಾಲಿನ ಬಜೆಟ್‌ ರಾಜ್ಯದ ಜನತೆಯ ನಿರೀಕ್ಷೆಯನ್ನು ಹುಸಿ ಮಾಡಿದ್ದು, ಇದು ಪಾಕಿಸ್ತಾನದ ಬಜೆಟ್ ಅಥವಾ ಕರ್ನಾಟಕದ ಬಜೆಟಾ ಎಂಬುದು ಸಂಶಯವಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ (Basangouda Patil Yatnal)ಕಿಡಿಕಾರಿದರು. ಬಜೆಟ್ ಮಂಡನೆ ಬಳಿಕ ಮಾತನಾಡಿದ ಅವರು, ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು. ಇದು ಸಿದ್ದರಾಮಯ್ಯ ಅವರ ಬಜೆಟ್ ಅಲ್ಲ, ಬದಲಾಗಿ ಜಮೀರ್ ಅವರ ಬಜೆಟ್ ಇದಾಗಿದೆ. ಕೋಮುಗಲಭೆ ಎಬ್ಬಿಸುವ ಬಜೆಟ್ ಇದಾಗಿದೆ ಎಂದರು.

ಅಲ್ಪಸಂಖ್ಯಾತರಿಗೆ ಬಜೆಟ್‌ನಲ್ಲಿ ಸಾಕಷ್ಟು ಕೊಡುಗೆ ಕೊಡಲಾಗಿದೆ. ಆದರೆ ದಲಿತರಿಗೆ ಏನೂ ಇಲ್ಲ. ಕೇವಲ ಒಂದು ಸಮುದಾಯದ ತುಷ್ಟೀಕರಣ ಮಾಡಲಾಗಿದೆ. ಮದರಸಾದಲ್ಲಿ ಧರ್ಮ ಬಿಟ್ಟು ಬೇರೆ ಏನು ಹೇಳಿಕೊಡಲ್ಲ, ಅಲ್ಲಿಗೆ ಕಂಪ್ಯೂಟರ್‌ ಕೊಟ್ಟಿದ್ದಾರೆ. ಅವರ ಪುರಾಣದಲ್ಲಿ ಭೂಮಿ ಸೂರ್ಯನ ಸುತ್ತ ಸುತ್ತತ್ತೋ, ಸೂರ್ಯ ಭೂಮಿ ಸುತ್ತ ಸುತ್ತತ್ತೋ? ಆ ವಿಚಾರವೇ ಅವರಿಗೆ ಗೊತ್ತಿಲ್ಲ. ಮತಾಂದರನ್ನ ಸೃಷ್ಠಿ ಮಾಡಲು ಮುಂದಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕೇಂದ್ರ ಸರ್ಕಾರದ ಬಜೆಟ್ ಒಂದು ಗಂಟೆಯಲ್ಲಿ ಮಂಡನೆ ಆಗಿದೆ. ಆದರೆ ಸಿದ್ದರಾಮಯ್ಯ ಬಜೆಟ್ 3.30 ತಾಸುಗಳ ಕಾಲ ಮಂಡನೆ ಮಾಡಲಾಗಿದೆ. ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕಕ್ಕೆ ಏನು ದೊರೆಯಿಲ್ಲ. ಬಯಲು ಸೀಮೆ ಕಡೆಗೆ 25 ಕೋಟಿ ಕೊಡಲಾಗಿದೆ. ವಕ್ಫ್ ಗೆ 125 ಕೋಟಿ ಕೊಡಲಾಗಿದೆ. ಸಿದ್ದರಾಮಯ್ಯ ಅವರ ನಿರ್ಗಮನದ ಬಜೆಟ್ ಇದಾಗಿದೆ ಎಂದು ಕಿಡಿಕಾರಿದರು.

ಮುಸ್ಲಿಂ ಸಮುದಾಯದ ಓಲೈಕೆಯ ಬಜೆಟ್‌; ವಿಜಯೇಂದ್ರ

ನಿಖರ ಭರವಸೆ ನೀಡುವ ಯೋಜನೆ ಹಾಗೂ ಅದಕ್ಕೆ ಅನುದಾನ ಪ್ರಕಟಿಸದೆ ಜನರ ಮೂಗಿಗೆ ತುಪ್ಪ ಸವರಲು ಹೊರಟಿದ್ದಾರೆ ಎಂದು ಬಿಜೆಪಿ ನಾಯಕ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.

'ಅಲ್ಪಸಂಖ್ಯಾತರ ಹೆಸರಿನಲ್ಲಿ ಮುಸ್ಲಿಂ ಸಮುದಾಯವನ್ನು ಓಲೈಸಲು ಒತ್ತು ನೀಡಿರುವ ಬಜೆಟ್ ಇದಾಗಿದೆ. ಶಿಕ್ಷಣದ ಕ್ಷೇತ್ರದ ಸಮಗ್ರ ಅಭಿವೃದ್ಧಿ ಬಗ್ಗೆ ಯಾವುದೇ ಕೊಡುಗೆ ನೀಡಿಲ್ಲ. ಉದ್ಯೋಗ ಸೃಷ್ಟಿಗೆ ಅವಕಾಶವಿರುವ ಕೈಗಾರಿಕೆಗಳಿಗೆ ಉತ್ತೇಜನವೇ ಇಲ್ಲ' ಎಂದು ಕಿಡಿಕಾರಿದ್ದಾರೆ.



'ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳು ಕೇವಲ ಕಾಗದದಲ್ಲೇ ಉಳಿಯುವ ಸಾಧ್ಯತೆ ಗೋಚರವಾಗುತ್ತಿದೆ. 'ಹೇಳುವುದು ಒಂದು ಮಾಡುವುದು ಇನ್ನೊಂದು' ಎಂಬಂತೆ ಈ ಬಜೆಟ್ ಆಗಬಾರದು, ಕಳೆದ ಬಜೆಟ್‌ನಲ್ಲಿ ಘೋಷಣೆಯಾಗಿದ್ದವೆಲ್ಲವೂ ಘೋಷಣೆಯಾಗಿಯೇ ಉಳಿದಿದೆ, ಈ ಬಜೆಟ್‌ಗೂ ಅದೇ ಗತಿ ಆಗುವ ಸಾಧ್ಯತೆಯೇ ಹೆಚ್ಚು ಎನ್ನುವುದು ರಾಜ್ಯದ ದಯನೀಯ ಆರ್ಥಿಕ ಪರಿಸ್ಥಿತಿ ಹೇಳುತ್ತಿದೆ' ಎಂದು ಹೇಳಿದ್ದಾರೆ.