ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹೊರಟ್ಟಿ ರಾಜೀನಾಮೆ ಪತ್ರಕ್ಕೆ ಬಲವಂತದ ಸಹಿ

"ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಅವರು ರಾಜಿನಾಮೆ ನೀಡಿದ್ದು, ಅದನ್ನು ಅಂಗೀಕರಿಸಲಾಗಿದೆ. ಬದಲಿ ವ್ಯವಸ್ಥೆ ಆಗುವವರೆಗೂ ಅವರನ್ನೇ ಈ ಸ್ಥಾನದಲ್ಲಿ ಮುಂದುವರಿಸಬೇಕು ಎಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ. ಆ.14ರಂದು ನೂತನ ಉಪಸಭಾಪತಿ, ಸಭಾಪತಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ" ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

Basavaraj Horatti

ಬೆಂಗಳೂರು, ಆ.8: ಮಳೆಗಾಲದ ಅಧಿವೇಶನ ಆರಂಭವಾದ ಬಳಿಕ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದ ಬಸವರಾಜ ಹೊರಟ್ಟಿ ಅವರು ಏಕಾಏಕಿ ರಾಜೀನಾಮೆ ನೀಡಿದ್ದರ ಹಿಂದೆ ಕಾಂಗ್ರೆಸ್ ನಾಯಕರ ಒತ್ತಡವಿದೆಯೇ? ಶಾಸಕರು ಸುತ್ತುವರಿದು ಹೊರಟ್ಟಿ ಅವರಿಂದ ರಾಜೀನಾಮೆ ಪಡೆದಿzರೆ ಎನ್ನುವ ಆರೋಪ ಕೇಳಿಬರುತ್ತಿದೆ.

ಗುರುವಾರಷ್ಟೇ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಹೊರಟ್ಟಿ ಅವರು ಆ.14ರಂದು ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಶುಕ್ರವಾರ ಬೆಳಗ್ಗೆಯೂ ಇದೇ ವಿಷಯವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಾತನಾಡಿದ್ದರು. ಆದರೆ ಗಾಯತ್ರಿ ಶಾಂತೇಗೌಡ ಅವರು ನೂತನ ವಿಧಾನಪರಿಷತ್ ಸದಸ್ಯೆಯಾಗಿ ಪ್ರಮಾಣವಚನ ತೆಗೆದುಕೊಂಡ ಬಳಿಕ, ನಾಟಕೀಯ ಬೆಳವಣಿಗೆಯಲ್ಲಿ ರಾಜೀನಾಮೆ ನೀಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಆದರೀಗ ಹೊರಟ್ಟಿ ಅವರು ರಾಜೀನಾಮೆ ನೀಡಿದ್ದರ ಹಿಂದೆ ಕಾಂಗ್ರೆಸ್ ಶಾಸಕರ ಬಲವಂತವಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಪ್ರಮಾಣವಚನ ಕಾರ್ಯಕ್ರಮ ಮುಗಿಯು ತ್ತಿದ್ದಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಸಲೀಂ ಅಹ್ಮದ್ ಸೇರಿದಂತೆ 20ಕ್ಕೂ ಹೆಚ್ಚು ಕಾಂಗ್ರೆಸ್‌ನ ಪರಿಷತ್ ಸದಸ್ಯರು ಸಭಾಪತಿಗಳ ಕೊಠಡಿಗೆ ತೆರಳಿ, ರಾಜೀನಾಮೆ ನೀಡುವಂತೆ ಒತ್ತಡ ಹೇರಿzರೆ. ಸಭಾಪತಿಯಾಗಿ ಸುದೀರ್ಘ ಸೇವೆ ಸಲ್ಲಿಸಿದ್ದೇನೆ. ಆದ್ದರಿಂದ ಸದನದಲ್ಲಿ ಮಾತನಾಡಿ, ರಾಜೀನಾಮೆ ನೀಡುವು ದಾಗಿ ಹೇಳಿzರೆ. ಆದರೆ ಇದಕ್ಕೆ ಒಪ್ಪದ ಕಾಂಗ್ರೆಸ್ ನಾಯಕರು, ಈಗಲೇ ರಾಜೀನಾಮೆ ನೀಡಿ ಎಂದು ಆಗ್ರಹಿಸಿzರೆ ಎಂದು ತಿಳಿದು ಬಂದಿದೆ.

Ravi Mohan: ಮತ್ತೆ ಸೋಷಿಯಲ್‌ ಮೀಡಿಯಾಗೆ ಕಮ್‌ ಬ್ಯಾಕ್‌ ಆದ ಕೆನೀಶಾ ಫ್ರಾನ್ಸಿಸ್!

ಈ ರೀತಿ ಕಾಂಗ್ರೆಸ್ ಸದಸ್ಯರು ಒತ್ತಡ ಹೇರುತ್ತಿರುವಾಗಲೇ, ಪಕ್ಷದ ಹಿರಿಯ ನಾಯಕ ರೊಬ್ಬರು ಹೊರಟ್ಟಿ ಅವರಿಗೆ ತಿಳಿಯದೇ ಅವರ ಲೆಟರ್ ಹೆಡ್‌ನಲ್ಲಿ ರಾಜೀನಾಮೆ ಪತ್ರವನ್ನು ಸಿದ್ಧಪಡಿಸಿಕೊಂಡು ಬಂದು ಸಹಿ ಹಾಕುವಂತೆ ಒತ್ತಡ ಹೇರಿದರು. ಇಷ್ಟಕ್ಕೆ ಸುಮ್ಮನಾಗದ ಕಾಂಗ್ರೆಸ್ ನಾಯಕರು ಹೊರಟ್ಟಿ ಅವರನ್ನು ಸುತ್ತುವರಿದಿ ದ್ದರು. ಈ ಎಲ್ಲ ಘಟನೆಗಳಿಗೆ ಘಾಸಿಯಾಗಿ ಆಗಸ್ಟ್ 14ರವರೆಗೆ ಸಮಯ ನೀಡುವಂತೆ ಪರಿಪರಿಯಾಗಿ ವಿನಂತಿಸಿಕೊಂಡರೂ ಅವಕಾಶ ನೀಡದೇ ಬಲವಂತ ವಾಗಿ ರಾಜೀನಾಮೆ ಪತ್ರಕ್ಕೆ ಸಹಿ ಪಡೆದುಕೊಂಡು, ಕೂಡಲೇ ಅದನ್ನು ಕಾರ್ಯದರ್ಶಿಗಳಿಗೆ ಕಳುಹಿಸಿ ಅಂಗೀಕಾರವಾಗುವಂತೆ ನೋಡಿಕೊಂಡಿರೆ ಎಂದು ತಿಳಿದುಬಂದಿದೆ.

ಒತ್ತಡ ಹೇರಿ ರಾಜೀನಾಮೆ; ಬಿಜೆಪಿ

ಮೇಲ್ಮನೆ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ದಬಾಯಿಸಿ, ಒತ್ತಡ ಹೇರಿ ಅವರಿಂದ ರಾಜೀನಾಮೆ ಪಡೆಯಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಹೊರಟ್ಟಿ ಅವರು ಅಧಿಕಾರದಲ್ಲಿ ಇರುವಾಗಲೇ ಬೇರೊಬ್ಬರನ್ನು ನಾಮಕರಣ ಮಾಡಿ, ಪಕ್ಷದ ಲೆಟರ್ ಹೆಡ್‌ನಲ್ಲಿ ಕಳಿಸಿದ್ದರು. ಇದೀಗ ಒತ್ತಡದಿಂದ ರಾಜೀನಾಮೆ ಪಡೆದಿದ್ದು, ಇದು ಕೌನ್ಸಿಲ್ ನಿಯಮಾವಳಿಗೆ ವಿರುದ್ಧವಾದುದು. ಕಾಂಗ್ರೆಸ್ಸಿನವರಿಗೆ ತಕ್ಕ ಬುದ್ಧಿ ಕಲಿಸುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ಅಲ್ಲದೇ ಹೊರಟ್ಟಿ ಅವರ ರಾಜೀನಾಮೆ ಪಡೆದ ಸಂಬಂಧ ಬಿಜೆಪಿ ನಾಯಕರು ತುರ್ತು ಸಭೆ ನಡೆಸಿ ಆಕ್ಷೇಪ ವ್ಯಕ್ತಪಡಿಸಿದ್ದು, ಹೊರಟ್ಟಿಯವರಿಂದ ರಾಜೀನಾಮೆ ಪಡೆದ ಸರಕಾರದ ನಡೆ ಪರಿಷತ್ ಇತಿಹಾಸದಲ್ಲಿ ಕಪ್ಪುಚುಕ್ಕೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಸರಕಾರದ ನಡವಳಿಕೆ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಧಕ್ಕೆಯಾಗಿದೆ ಎಂದಿ ಪ್ರತಿಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ

ನೂತನ ಸದಸ್ಯೆಗೆ ಪ್ರಮಾಣ ಬೋಧಿಸಿ ಹೊರಟ್ಟಿ ನಿರ್ಗಮನ

ಇನ್ನು ಕೆಲದಿನಗಳ ಹಿಂದೆ ಉಪಸಭಾಪತಿ ಪ್ರಾಣೇಶ್ ಅವರ ಸದಸ್ಯತ್ವ ಅಸಿಂಧುವಾಗಿದ್ದರಿಂದ ಪರಿಷತ್ ಸದಸ್ಯೆಯಾಗಿ ಆಯ್ಕೆಯಾದ ಗಾಯತ್ರಿ ಶಾಂತೇಗೌಡ ಅವರಿಗೆ ಪ್ರಮಾಣವಚನ ಬೋಽಸಿದ ಬಳಿಕ ಸಭಾಪತಿ ಹೊರಟ್ಟಿ ಅವರು ರಾಜೀನಾಮೆ ನೀಡಿದರು. ಪ್ರಮಾಣವಚನದಲ್ಲಿ ಶಿವಕುಮಾರ್ ಕೂಡ ಇದ್ದರು.

"ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಅವರು ರಾಜಿನಾಮೆ ನೀಡಿದ್ದು, ಅದನ್ನು ಅಂಗೀಕರಿಸಲಾಗಿದೆ. ಬದಲಿ ವ್ಯವಸ್ಥೆ ಆಗುವವರೆಗೂ ಅವರನ್ನೇ ಈ ಸ್ಥಾನದಲ್ಲಿ ಮುಂದುವರಿಸಬೇಕು ಎಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ. ಆ.14ರಂದು ನೂತನ ಉಪಸಭಾಪತಿ, ಸಭಾಪತಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ" ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಆಪ್ತರ ಮುಂದೆ ಕಣ್ಣೀರು

ಸುದೀರ್ಘ ನಾಲ್ಕು ದಶಕಗಳ ಕಾಲ ವಿಧಾನಪರಿಷತ್‌ನಲ್ಲಿರುವ ಬಸವರಾಜ ಹೊರಟ್ಟಿ ಅವರು, ಯಾವುದೇ ಕಪ್ಪುಚುಕ್ಕೆಯಿಲ್ಲದೇ ಸದನ ಹಿರಿಯಣ್ಣನಂತೆ ಕಾರ್ಯನಿನಿರ್ವಹಿಸಿದ್ದರು. ಆದರೆ, ಕಾಂಗ್ರೆಸ್ ನಾಯಕರು ಹಾಗೂ ಪರಿಷತ್ ಸದಸ್ಯರು ನಡೆದುಕೊಂಡ ರೀತಿಗೆ ತೀವ್ರ ನೊಂದಿ zರೆ. ೨೦ಕ್ಕೂ ಹೆಚ್ಚು ಮಂದಿ ಸುತ್ತುವರಿದು ಒತ್ತಡ ಹೇರಿದ ಕಾರಣ ಮಾನಸಿಕವಾಗಿ ಕುಗ್ಗಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ಆಪ್ತರ ಮುಂದೆ ಹೇಳಿಕೊಂಡು ಕಣ್ಣೀರು ಸುರಿಸಿದ್ದಾರೆ.

"ಆ.14ಕ್ಕೆ ನಾನು ಸದನದಲ್ಲಿಯೇ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿz. ಇದೇ ವಿಷಯವನ್ನು ನಾನು ಕಾಂಗ್ರೆಸ್ ನಾಯಕರಿಗೂ ಹೇಳಿz. ಆದರೆ ನೂತನ ಸದಸ್ಯೆಯ ಪ್ರಮಾಣ ವಚನ ಕಾರ್ಯಕ್ರಮದ ವೇಳೆ ನನ್ನ ಕಚೇರಿಗೆ ಆಗಮಿಸಿದ ಡಿಕೆಶಿ, ಬಿ.ಕೆ. ಹರಿಪ್ರಸಾದ್ ಹಾಗೂ ಇನ್ನಿತರೆ ಸದಸ್ಯರು ಇಂದೇ ರಾಜೀನಾಮೆಗೆ ಸಹಿ ಹಾಕಬೇಕು ಎಂದು ಒತ್ತಡ ಹೇರಿದ್ದರಿಂದ ರಾಜೀನಾಮೆ ನೀಡಿದೆ" ಎಂದು ಬಸವರಾಜ ಹೊರಟ್ಟಿ ಹೇಳಿದರು.