ಬೆಂಗಳೂರು, ಅ. 8: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) 2026-27ನೇ ಸಾಲಿನ ಎಸ್ಎಸ್ಎಲ್ಸಿಯ ಪರೀಕ್ಷೆ 1 ಹಾಗೂ 2ರ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು 2 ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ 1, 2027ರ ಮಾರ್ಚ್ 22ರಿಂದ ಏಪ್ರಿಲ್ 3ರವರೆಗೆ ನಡೆದರೆ, ದ್ವಿತೀಯ ಪಿಯುಸಿ ಪರೀಕ್ಷೆ-1 ಫೆಬ್ರವರಿ 27ರಿಂದ ಮಾರ್ಚ್ 17ರವರೆಗೆ ಜರುಗಲಿದೆ. ಎಲ್ಲ ಮುಖ್ಯ ಪರೀಕ್ಷೆಗಳು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿವೆ. ಪ್ರಕಟಿತ ತಾತ್ಕಾಲಿಕ ವೇಳಾಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಅಕ್ಟೋಬರ್ 22ರವರೆಗೆ (15 ದಿನಗಳು) ಕಾಲಾವಕಾಶ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ 1ರ ವೇಳಾಪಟ್ಟಿ
- ಮಾರ್ಚ್ 22: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು ಉರ್ದು, ಇಂಗ್ಲಿಷ್, ಇಂಗ್ಲಿಷ್(ಎನ್ಸಿಇಆರ್ಟಿ), ಸಂಸ್ಕೃತ
- ಮಾರ್ಚ್ 25: ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ.
- ಮಾರ್ಚ್ 27: ಇಂಗ್ಲಿಷ್, ಕನ್ನಡ
- ಮಾರ್ಚ್ 30: ಗಣಿತ, ಸಮಾಜಶಾಸ್ತ್ರ
- ಏಪ್ರಿಲ್ 2 : ಹಿಂದಿ(ಎನ್ಸಿಇಆರ್ಟಿ), ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮರಾಠಿ
- ಏಪ್ರಿಲ್ 3: ಜೆಟಿಎಸ್ ವಿಷಗಳು, ಅರ್ಥಶಾಸ್ತ್ರ
- ಏಪ್ರಿಲ್ 5: ಸಮಾಜ ವಿಜ್ಞಾನ
ಎಸ್‌ಎಸ್‌ಎಲ್‌ಸಿ ಪರೀಕ್ಷೆ 2ರ ವೇಳಾಪಟ್ಟಿ
- ಮೇ 24: ಪ್ರಥಮ ಭಾಷೆ
- ಮೇ 25: ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ, ಕರ್ನಾಟಕ ಸಂಗೀತ
- ಮೇ 26: ಇಂಗ್ಲಿಷ್, ಕನ್ನಡ
- ಮೇ 27: ಗಣಿತ, ಸಮಾಜ ಶಾಸ್ತ್ರ
- ಮೇ 28: ತೃತೀಯ ಭಾಷೆಗಳು ಮತ್ತು ಎನ್ಎಸ್ಕ್ಯುಎಫ್ ವಿಷಯಗಳು
- ಮೇ 29: ಸಮಾಜ ವಿಜ್ಞಾನ
- ಮೇ 31: ಜೆಟಿಎಸ್ ವಿಷಯಗಳು, ಅರ್ಥಶಾಸ್ತ್ರ
ವಿದ್ಯಾರ್ಥಿಗಳಿಗೆ ಮತ್ತೊಂದು ಶಾಕ್ ಕೊಟ್ಟ ರಾಜ್ಯ ಸರ್ಕಾರ; ಎಸ್‌ಎಸ್‌ಎಲ್‌ಸಿ ಪರೀಕ್ಷಾ ಶುಲ್ಕ ಹೆಚ್ಚಳ
ದ್ವಿತೀಯ ಪಿಯುಸಿ ಪರೀಕ್ಷೆ 1ರ ವೇಳಾಪಟ್ಟಿ
- ಫೆಬ್ರವರಿ 27: ಕನ್ನಡ, ಅರೇಬಿಕ್
- ಮಾರ್ಚ್ 1: ಇಂಗ್ಲಿಷ್
- ಮಾರ್ಚ್ 2: ಪ್ರಾದೇಶಿಕ ಭಾಷೆಗಳು
- ಮಾರ್ಚ್ 3: ಭೂಗೋಳ ಶಾಸ್ತ್ರ, ಮನಃಶಾಸ್ತ್ರ
- ಮಾರ್ಚ್ 4: ಸಮಾಜ ಶಾಸ್ತ್ರ, ಭೌತಶಾಸ್ತ್ರ
- ಮಾರ್ಚ್ 5: ಲೆಕ್ಕಶಾಸ್ತ್ರ
- ಮಾರ್ಚ್ 6: ಮಹಾಶಿವರಾತ್ರಿ ಹಿನ್ನೆಲೆ ರಜೆ
- ಮಾರ್ಚ್ 8: ರಸಾಯನ ಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ
- ಮಾರ್ಚ್ 9: ಅರ್ಥಶಾಸ್ತ್ರ, ಭೂಗರ್ಭ ಶಾಸ್ತ್ರ
- ಮಾರ್ಚ್ 11: ಹಿಂದೂಸ್ತಾನಿ ಸಂಗೀತ, ವೃತ್ತಿಪರ ವಿಷಯಗಳ ಪರೀಕ್ಷೆ
- ಮಾರ್ಚ್ 12: ವ್ಯವಹಾರ ಅಧ್ಯಯನ, ಗಣಿತ
- ಮಾರ್ಚ್ 13: ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಗೃಹವಿಜ್ಞಾನ ಮಾ.15ರಂದು ರಾಜ್ಯಶಾಸ್ತ್ರ, ಜೀವಶಾಸ್ತ್ರ, ಗಣಕಶಾಸ್ತ್ರ
- ಮಾರ್ಚ್ 16ರಂದು ಇತಿಹಾಸ, ಸಂಖ್ಯಾಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ
- ಮಾರ್ಚ್ 17ರಂದು ಹಿಂದಿ
ತಮಿಳುನಾಡಿಗೆ 15 ದಿನಗಳವರೆಗೆ 3,000 ಕ್ಯೂಸೆಕ್ ಕಾವೇರಿ ನೀರು ಹರಿಸಲು ಸೂಚನೆ
ದ್ವಿತೀಯ ಪಿಯುಸಿ ಪರೀಕ್ಷೆ 2ರ ವೇಳಾಪಟ್ಟಿ
- ಮೇ 3: ಕನ್ನಡ, ಅರೇಬಿಕ್
- ಮೇ 4: ಲೆಕ್ಕಶಾಸ್ತ್ರ, ಜೀವಶಾಸ್ತ್ರ, ಭೂಗರ್ಭ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ
- ಮೇ 5: ರಾಜ್ಯಶಾಸ್ತ್ರ, ಗಣಕಶಾಸ್ತ್ರ
- ಮೇ 6: ಇತಿಹಾಸ, ರಸಾಯನಶಾಸ್ತ್ರ
- ಮೇ 7: ವ್ಯವಹಾರ ಅಧ್ಯಯನ, ಮನಃ ಶಾಸ್ತ್ರ, ಶಿಕ್ಷಣ ಶಾಸ್ತ್ರ
- ಮೇ 8: ಐಚ್ಛಿಕ ಕನ್ನಡ,ಭೌತ ಶಾಸ್ತ್ರ, ಮೂಲ ಗಣಿತ
- ಮೇ 10: ಅರ್ಥಶಾಸ್ತ್ರ, ಗಣಿತ
- ಮೇ 11: ಹಿಂದಿ
- ಮೇ 12: ಇಂಗ್ಲಿಷ್
- ಮೇ 13: ಸಮಾಜ ಶಾಸ್ತ್ರ, ಸಂಖಾಶಾಸ್ತ್ರ
- ಮೇ 14: ತರ್ಕಶಾಸ್ತ್ರ, ಭೂಗೋಳಶಾಸ್ತ್ರ, ಗೃಹವಿಜ್ಞಾನ
- ಮೇ 15: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.